ಬಡಕುಟುಂಬಕ್ಕೆ “ಗಾಂಧಿ ಕುಟೀರ’; ಗುದ್ದಲಿಪೂಜೆ
Team Udayavani, May 28, 2019, 6:13 AM IST
ಉಡುಪಿ: ಉಡುಪಿ ಜಿಲ್ಲಾ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ “ಗಾಂಧಿ- 150′ ಕಾರ್ಯಕ್ರಮದ ಪ್ರಯುಕ್ತ ಅಶಕ್ತ ಬಡ ಕುಟುಂಬಗಳಿಗೆ ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಅದರಂತೆ ಸೋಮವಾರ ಅಲೆವೂರು ಗ್ರಾ.ಪಂ. ಕೊರಂಗ್ರಪಾಡಿ ವಾರ್ಡ್‌ನ ಜನತಾ ಕಾಲನಿಯ ಪ.ಜಾತಿಯ ನಳಿನಿ ಅವರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗೆ ಚಾಲನೆ ನೀಡಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸರಳಾ ಕಾಂಚನ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆರೋನಿಕಾ ಅವರು “ಇದು ಪಂಚಾಯತ್‌ರಾಜ್ ಸಂಘಟನೆ ಮಾಡುತ್ತಿರುವ ಸಮಾಜಮುಖೀ ಕಾರ್ಯ’ ಎಂದು ಶ್ಲಾ ಸಿದರು.
ಎರಡು ಮನೆ ನಿರ್ಮಾಣ ಯೋಜನೆ
ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಅವರು ಮಾತನಾಡಿ “ಸಂಘಟನೆಯ ವತಿಯಿಂದ ಈ ಬಾರಿ ಎರಡು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನೊಂದು ಮನೆ ಕಾರ್ಕಳ ಕಾಂತಾವರದ ಮಹಿಳೆಯೋರ್ವರಿಗೆ ನಿರ್ಮಿಸಿಕೊಡಲಾಗುವುದು. ಈಗ ಗುದ್ದಲಿ ಪೂಜೆ ನಡೆದ ಮನೆ 4 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿಯಂದು ಉದ್ಘಾಟನೆಗೊಳ್ಳಲಿದೆ. ಇದಕ್ಕೆ ಗಾಂಧಿ ಕುಟೀರ ಎಂದು ಹೆಸರಿಡಲಾಗುವುದು’ ಎಂದು ತಿಳಿಸಿದರು.
ಅಶಕ್ತ ಕುಟುಂಬ
“ನಳಿನಿ ಅವರ ಮೂವರು ಮಕ್ಕಳಲ್ಲಿ 34 ವರ್ಷ ಪ್ರಾಯದ ಪ್ರಶಾಂತ್ ದೈಹಿಕ ಅಶಕ್ತತೆಯಿಂದಾಗಿ ಹಾಸಿಗೆ ಬಿಟ್ಟು ಏಳದ ಸ್ಥಿತಿಯಲ್ಲಿದ್ದಾರೆ. ನಳಿನಿ ಅವರ ಪತಿ ಮೃತಪಟ್ಟಿದ್ದಾರೆ. ಮಡಲಿನ ಗುಡಿಸಲಿನಲ್ಲಿ ವಾಸವಿದ್ದರು. ಕಳೆದ ಮಳೆಗಾಲಕ್ಕೆ ನೆರೆ ಬಂತು. ಗುಡಿಸಲಿನಲ್ಲಿ ವಾಸಿಸಲು ಅಸಾಧ್ಯವಾಯಿತು. ಹಾಗಾಗಿ ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ’ ಎಂದು ಗ್ರಾ.ಪಂ.ನ ಸ್ಥಳೀಯ ಸದಸ್ಯೆ ಅಮೃತಾ ಉಮೇಶ್ ಕೋಟ್ಯಾನ್ ಅವರು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗೆÛ, ಡಾ| ಸುನಿತಾ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸುನಿಲ್ ಬಂಗೇರ, ವೈ.ಬಿ.ರಾಘವೇಂದ್ರ, ಆನಂದ ಕೊರಂಗ್ರಪಾಡಿ, ರಿಯಾಜ್, ಬಾಲಕೃಷ್ಣ ಶೆಟ್ಟಿ, ಸುಧಾಕರ ಪೂಜಾರಿ, ಸುರೇಶ್ ಬಂಗೇರ, ಜಯಕರ ಪೂಜಾರಿ, ವಿಟuಲ ಕೋಟ್ಯಾನ್, ಸಂಘಟನೆಯ ಸಹ ಸಂಯೋಜಕಿ ಮೇರಿ ಡಿ’ಸೋಜಾ, ಸೋಮನಾಥ ಬಿ.ಕೆ., ಸೂರ್ಯ ಸಾಲ್ಯಾನ್, ಸತೀಶ್ ಜಪ್ತಿ, ಶಂಕರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.