“ಯುವಕರಿಗೂ ಗಾಂಧಿ ಮಾಡೆಲ್’
Team Udayavani, Mar 11, 2018, 6:30 AM IST
‘ಉಡುಪಿ: ಗಾಂಧೀಜಿ ನಮ್ಮ ಯುವಕರಿಗೂ ಗುಡ್ ರೋಲ್ ಮಾಡೆಲ್ ಎಂದು ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ವಿಭಾಗದ ಸಂಶೋಧಕ ಯು. ವಿನೀತ್ ರಾವ್ ಹೇಳಿದರು.
ಗಾಂಧೀಜಿಯವರ 150ನೇ ವರ್ಷಾಚರಣೆ ಸಂದರ್ಭ ವಾರ್ತಾ ಇಲಾಖೆ ಆಯೋಜಿಸಿದ ಸಾಕ್ಷ್ಯಚಿತ್ರ ವೀಕ್ಷಣೆ ಮುನ್ನ
ಮಣಿಪಾಲದ ಬಿಸಿಎಂ ಇಲಾಖೆ ಹಾಸ್ಟೆಲ್ ಆವರಣದಲ್ಲಿ ಮಾತನಾಡಿ, ಅವರ ಸಂದೇಶಗಳು ಯುವ ಶಕ್ತಿಯನ್ನು ತಲುಪುವುದು ಇಂದಿನ ತುರ್ತು ಅಗತ್ಯ ಎಂದರು.
ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಮಹಾತ್ಮನಾದ ಕಥೆ, ಅವರ ಅಹಿಂಸಾತ್ಮಕ ಹೋರಾಟ; ಪ್ರೀತಿಗಿರುವ ಶಕ್ತಿಯನ್ನು ಇಂದು ಅರಿತು ಅಳವಡಿಸಬೇಕಾದುದು ಅಗತ್ಯ. ಗಾಂಧಿ ಅವರ ಜೀವನವೇ ಸಂದೇಶ ವಾಗಿತ್ತು. ನಾವಿಲ್ಲಿ ನಮ್ಮ ದೇಶದಲ್ಲಿ ವಯಸ್ಕ ಗಾಂಧಿಯನ್ನು ಹೆಚ್ಚಾಗಿ ಇಳಿವಯಸ್ಸಿನ ಪುತ್ಥಳಿ, ಚಿತ್ರಗಳನ್ನು ನೋಡಿದ್ದೇವೆ. ಆದರೆ ಅವರ ಹೋರಾಟ ದಕ್ಷಿಣ ಆಫ್ರಿಕಾದಿಂದ ಆರಂಭಿಸಿದ ಸತ್ಯಾಗ್ರಹ ಚಳವಳಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಅವರ ಸಾಮರಸ್ಯದ ಸಂದೇಶ ಸದಾ ಕಾಲ ಪ್ರಸ್ತುತ ಎಂದರು.
ಕಾರ್ಕಳ ತಾ| ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ದಯಾನಂದ ಮಾತನಾಡಿದರು. ಹಾಸ್ಟೆಲ್ ವಾರ್ಡನ್ ಸುಜಾತಾ, ವಾರ್ತಾಧಿಕಾರಿ ರೋಹಿಣಿ ಉಪಸ್ಥಿತರಿದ್ದರು.
ಗಾಂಧಿ ಮಾರ್ಗ ಅನುಸರಿಸಿ
ಸತ್ಯ, ಅಹಿಂಸೆ ತಳಹದಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಘರ್ಷಗಳಿಗೆ ಗಾಂಧಿ ಮಾರ್ಗವನ್ನು ಅನುಸರಿಸಿ ಇತ್ಯರ್ಥಗೊಳಿಸಬೇಕು. ಮಾನವತೆಯ ಸುಂದರ ತೋಟದಲ್ಲಿ ನಾವೆಲ್ಲರೂ ಸುಂದರ ಪುಷ್ಪಗಳು ಎಂದು ಸಂಶೋಧಕ ಯು. ವಿನೀತ್ ರಾವ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.