ಅಸಹಾಯಕ ಗಣೇಶನಿಗೆ ಬೇಕಿದೆ ನೆರವಿನ ಹಸ್ತ
Team Udayavani, Jun 12, 2018, 6:10 AM IST
ಶಿರ್ವ: ಸುಮಾರು 12 ವರ್ಷಗಳ ಹಿಂದೆ ಉಚ್ಚಿಲದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಹಡಿಯಿಂದ ಜಾರಿ ಬಿದ್ದು ಬೆನ್ನುಹುರಿಯ ಮೂಳೆ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಶಿರ್ವ ಭೂತಬೆಟ್ಟು ನಿವಾಸಿ ಬಡ ಕೂಲಿ ಕಾರ್ಮಿಕ ಕುಟುಂಬದ ಗಣೇಶ ಮೊಗೇರನಿಗೆ ಸಹೃದಯರ ಸಹಾಯ ಹಸ್ತ ಬೇಕಿದೆ.
2006ರಲ್ಲಿ ಮಹಡಿಯಿಂದ ಜಾರಿ ಬಿದ್ದ ಗಣೇಶನಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಚೆನ್ನೈನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬೆನ್ನು ಹುರಿಯಲ್ಲಿ 12-13 ಕಡೆ ಡಿಸ್ಕ್ ಕ್ರಾಕ್ ಇದ್ದುದರಿಂದ ಅಪರೇಷನ್ ನಡೆಸಿ ಸ್ಟೀಲ್ ರಾಡ್ ಅಳವಡಿಸಲಾಗಿತ್ತು. ಆದರೆ ಪರಿಣಾಮ ಮಾತ್ರ ಶೂನ್ಯ.ಎದ್ದು ಕುಳಿತು ಕೊಳ್ಳಲಾಗದ ಗಣೇಶನ ಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದೆ ಮಲಗಿದ್ದಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡಬೇಕಿದೆ. ವೃದ್ಧಾಪ್ಯದಲ್ಲಿ ತಾಯಿಯ ಸೇವೆ ಮಾಡಬೇಕಿದ್ದ ಯುವಕ ತನ್ನ ನಿತ್ಯಕರ್ಮಕ್ಕಾಗಿ ಮಲಗಿದ್ದಲ್ಲಿಯೇ 72 ವರ್ಷದ ವೃದ್ಧ ತಾಯಿಯನ್ನು ಅವಲಂಬಿಸಬೇಕಿದೆ.
ಬಡ ಕೂಲಿ ಕುಟುಂಬ
ಶಿರ್ವ ಭೂತಬೆಟ್ಟು ಬಳಿಯ ನಿವಾಸಿ ದಿ| ಬೈಕ್ಲ ಮೊಗೇರ ಮತ್ತು ದುರ್ಗಿ ಮುಗೇತಿ ದಂಪತಿ ಪುತ್ರ ಗಣೇಶ. 5 ಸೆಂಟ್ಸ್ ಮನೆಯಲ್ಲಿ ವಾಸವಾಗಿರುವ ಬಡ ಕುಟುಂಬ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು. ಇದೀಗ ವೃದ್ದ ತಾಯಿ ಕೂಲಿ ಕೆಲಸ ಮಾಡಲಾಗದೆ ನೆರೆಕರೆಯಲ್ಲಿ ಮಲ್ಲಿಗೆ ಹೂ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ.
ಬೇಕಿದೆ ನೆರವಿನ ಹಸ್ತ
ಬಡ ಕೂಲಿ ಕುಟುಂಬವಾಗಿರುವು ದರಿಂದ ಗಣೇಶನ ಚಿಕಿತ್ಸೆಗಾಗಿ ತಿಂಗಳಿಗೆ 5-6 ಸಾವಿರ ರೂ. ಖರ್ಚಾಗುತ್ತಿದ್ದು ಜೀವನ ನಿರ್ವಹಣೆ ದುಸ್ತರವಾಗಿದೆ.ಅಸಹಾಯಕ ಸ್ಥಿತಿಯಲ್ಲಿರುವ ಗಣೇಶನ ಜೀವನ ನಿರ್ವಹಣೆಗೆ ಸಹಾಯ ಮಾಡಲಿಚ್ಛಿಸುವವರು ಶಿರ್ವ ಸಿಂಡಿಕೇಟ್ ಬ್ಯಾಂಕಿನ ಖಾತೆ ನಂಬ್ರ. 01452230000659 ಜಮಾ ಮಾಡಬಹುದಾಗಿದೆ. IFSC code SYNB 0000145. ಗಣೇಶನ ಮೊಬೈಲ್ ಸಂಖ್ಯೆ:9945662307
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.