ಗಣೇಶೋತ್ಸವ ಸಮಿತಿ: ನಿರ್ಗತಿಕಳಿಗೆ ಮನೆ ನಿರ್ಮಾಣ
Team Udayavani, Oct 2, 2019, 5:27 AM IST
ಉಡುಪಿ: ನಿರ್ಗತಿಕಳೊಬ್ಬಳಿಗೆ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ನಿರ್ಮಿಸಿದ ಮನೆಯನ್ನು ಗಾಂಧೀ ಜಯಂತಿಯಂದು ಬೆಳಗ್ಗೆ 10.30ಕ್ಕೆ ಹಸ್ತಾಂತರಿಸಲಾಗುತ್ತಿದೆ.
ಇತ್ತೀಚೆಗೆ ಸುರಿದ ಮಳೆಯಲ್ಲಿ ಇಂದ್ರಾಳಿ ಮಂಜುಶ್ರೀನಗರದ ಕೊರಗ ಸಮುದಾಯದ ಸುಮತಿಯವರ ಮನೆ ಬಿದ್ದಿತ್ತು. ಮಂಚಿಕೋಡಿ ಶಾಲೆಯವರು ನೀಡುವ ಊಟದಿಂದ ಇವರ ಜೀವನ ನಡೆಯುತ್ತಿತ್ತು. ಮನೆಯಲ್ಲಿರುವುದು ಇವರೊಬ್ಬರೇ. ಇದನ್ನು ಗಮನಿಸಿದ ಗಣೇಶೋತ್ಸವ ಸಮಿತಿ ಕಾರ್ಯಕರ್ತರು ಮತ್ತು ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರು ನೂತನ ಮನೆ ನಿರ್ಮಿಸಲು ನಿರ್ಧರಿಸಿದರು. ಒಟ್ಟು 84 ಕಾರ್ಯಕರ್ತರು ಮನೆ ನಿರ್ಮಾಣದಲ್ಲಿ ಕರಸೇವಕರಾಗಿ ಶ್ರಮಿಸಿದರು. ಇವರಲ್ಲದೆ ಕೊರಗ ಸಮುದಾಯದ ಗುರಿಕಾರ ಸುಂದರ ಗುರಿಕಾರರ ನೇತೃತ್ವದಲ್ಲಿ ಸಮುದಾಯದ ಯುವಕರೂ ಕೈಜೋಡಿಸಿದರು.
ನಗರಸಭಾ ಸದಸ್ಯ, ಆಟೋ ರಿಕ್ಷಾ ಚಾಲಕ ಅಶೋಕ ನಾಯಕ್ ಅವರು ಸ್ವತಃ ಪೇಂಟ್ ಕೊಟ್ಟರು. ವಿದ್ಯುತ್ ಸಂಪರ್ಕ ಕಲ್ಪಿಸಿದರೆ ವಿದ್ಯುತ್ ಬಿಲ್ ಕೊಡುವುದು ಯಾರೆಂಬ ಪ್ರಶ್ನೆ ಉದ್ಭವಿಸಿ ನಾಲ್ಕು ಬಲುºಗಳನ್ನು ಹೊಂದಿದ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಶ್ರಮದಾನ ಹೊರತುಪಡಿಸಿ ಒಟ್ಟು 2.2 ಲ.ರೂ. ಮನೆ ನಿರ್ಮಾಣಕ್ಕೆ ಖರ್ಚಾಗಿದೆ. ಸಚಿವ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಪೌರಾಯುಕ್ತ ಆನಂದ ಕಲ್ಲೋಳಿಕರ್ ಮೊದಲಾದವರ ಉಪಸ್ಥಿತಿಯಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಇಂದ್ರಾಳಿ ಮಂಜುಶ್ರೀನಗರದಲ್ಲಿರುವ ಕೊರಗ ಸಮುದಾಯಕ್ಕೆ ಸೇರಿದ 16 ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ಅರ್ಜಿ ಸಲ್ಲಿಸಲು ಹೋದರೆ ನಿರಾಕ್ಷೇಪಣ ಪತ್ರ ಇತ್ಯಾದಿಗಳನ್ನು ಅಧಿಕಾರಿಗಳು ತರಲು ಹೇಳುತ್ತಾರೆ. ಕೊರಗ ಸಮುದಾಯದವರು ಇಂತಹ ದಾಖಲೆ ಪತ್ರಗಳನ್ನು ತರುವುದು ಸಾಧ್ಯವೆ? ಈ ಕುರಿತು ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಕಡಿಯಾಳಿ ಗಣೇಶೋತ್ಸವ ಸಮಿತಿ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.