ಗಂಗಾ ಸಿಂಧು ಸರಸ್ವತೀ ಚ…ಆದಿತ್ಯಾದಿ ನವಗ್ರಹಾಃ ಶುಭಕರಾ…


Team Udayavani, Apr 18, 2017, 12:26 PM IST

18-REPORT-7.jpg

ಉಡುಪಿ: “ಗಂಗಾ ಸಿಂಧುಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ| ಕೃಷ್ಣಾ ಭೀಮರತೀ ಚ ಫ‌ಲ್ಗುಸರಯೂಃ ಶ್ರೀಗಂಡಕೀ
ಗೋಮತೀ|| ಕಾವೇರೀ ಕಪಿಲಾ ಪ್ರಯಾಗ ಕಿಟಿಜಾ ನೇತ್ರಾವತೀತ್ಯಾದಯಃ| ನದ್ಯಃ ಶ್ರೀಹರಿ ಪಾದಪಂಕಜಭುವಃ ಕುರ್ವಂತುನೋ ಮಂಗ ಲಮ್‌||’, “ಆದಿತ್ಯಾದಿ ನವಗ್ರಹಾಃ ಶುಭಕರಾ ಮೇಷಾದಯೋ ರಾಶಯೋ|| ನಕ್ಷತ್ರಾಣಿ ಸುಯೋಗ 
ಕಾಶ್ಚತಿತಯತದ್ದೇವತಾಸದ್ಗಣಾಃ||… ಸರ್ವೇ ಸ್ಥಾವರಜಂಗಮಾಃ ಪ್ರತಿದಿನಮ್‌ ಕುರ್ವಂತು ನೋಮಂಗಲಮ್‌||…. (ಭಗವಂತನ ಸಾನ್ನಿಧ್ಯ ದಿಂದ ಹುಟ್ಟಿದ ಗಂಗೆ, ಸಿಂಧು, ಸರಸ್ವತೀ…. ನೇತ್ರಾವತೀ ಮೊದಲಾದ ನದಿಗಳು ಮತ್ತು ನವಗ್ರಹಗಳು, ರಾಶಿಗಳು,  ನಕ್ಷತ್ರಗಳು, ದೇವತೆ ಗಳು ಸ್ಥಾವರಜಂಗಮಗಳಿಗೆ ಪ್ರತಿದಿನವೂ ಮಂಗಲವನ್ನು ಉಂಟು ಮಾಡಲಿ) ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮೊಗವೀರ ಯುವ ಸಂಘಟನೆ ಸಂಯುಕ್ತ ಆಶ್ರಯದಲ್ಲಿ, ಸತತ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ಮೊಗವೀರ ಸಮಾಜದ 22 ಜೋಡಿ ಗಳು ಹಸೆಮಣೆ ಏರಿದ ಸಂದರ್ಭ ಬಹುಹಿಂದಿ ನಿಂದಲೂ ಮನೆಮನೆಗಳಲ್ಲಿ ಮುಂಜಾನೆ ಕೇಳಿ
ಬರುತ್ತಿದ್ದ ಶ್ರೀ ಪಲಿಮಾರು ಮಠದ ಐದನೆಯ ಯತಿ ಶ್ರೀ ರಾಜರಾಜೇಶ್ವರತೀರ್ಥರು ರಚಿಸಿದ ಮಂಗಲಾಷ್ಟಕವನ್ನು ಮತ್ತು ಶ್ರೀ ವಾದಿರಾಜ ಸ್ವಾಮಿಗಳು ರಚಿಸಿದ ಲಕ್ಷ್ಮೀಶೋಭಾನೆ ಹಾಡನ್ನು  ಪುರೋಹಿತರು ಹಾಡಿ ಶುಭ ಹರಸಿದರು. 

ಸೋಮವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನೆರವೇರಿದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ, ವಧುವಿಗೆ ಕರಿಮಣಿ, ಸೀರೆ, ರವಿಕೆ, ಕಾಲುಂಗುರ ಮತ್ತು ವರನಿಗೆ ಕುರ್ತಾ, ಪೈಜಾಮ, ಪೇಟ ಉಡುಗೊರೆಯಾಗಿ ನೀಡಲಾಯಿತು. ಕುಟುಂಬದ ಹಿರಿಯರ ಜತೆಯಲ್ಲಿ ನವಜೋಡಿಗಳು ಕಲ್ಯಾಣ ಮಂಟಪಕ್ಕೆ ಆಗಮಿಸಿದಾಗ ಸಾಂಪ್ರದಾಯಿಕ ವಾಗಿ ಸ್ವಾಗತಿಸಲಾಯಿತು. ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕ ಸಗ್ರಿ ವೇದವ್ಯಾಸ ಐತಾಳ್‌ ನೇತೃತ್ವದಲ್ಲಿ ವೈವಾಹಿಕ ವಿಧಿವಿಧಾನಗಳು ನೆರವೇರಿದವು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, ತಮ್ಮ ಟ್ರಸ್ಟ್‌ ಮತ್ತು ಮೊಗವೀರ ಯುವಸಂಘಟನೆ ಸಾಮಾಜಿಕ ಕಳಕಳಿಯ ಬದ್ಧತೆ ಮತ್ತು ಆಶಯದಂತೆ ಕಳೆದ ಒಂಬತ್ತು ವರ್ಷಗಳಲ್ಲಿ 218 ಜೋಡಿಗಳ ವಿವಾಹ ನಡೆದಿದೆ. ವರದಕ್ಷಿಣೆ, ಚಿನ್ನದ ವ್ಯಾಮೋಹ ತೊರೆದು ಯುವಕ, ಯುವತಿಯರು ಸರಳ ವಿವಾಹಕ್ಕೆ ಪ್ರೋತ್ಸಾಹ ಕೊಡಬೇಕು. ಮುಂದಿನ ದಿನಗಳಲ್ಲಿ 101 ಜೋಡಿಗಳಿಗೆ ಕಂಕಣ ಭಾಗ್ಯ ಒದಗಿಸುವ ಕನಸು ಇಟ್ಟುಕೊಂಡಿದ್ದೇವೆ. ನವ ವಧು-ವರರ ಬಾಳು ಹಸನಾಗಲಿ ಎಂದು ಶುಭ ಹಾರೈಸಿದರು. 

ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಲಾಲಾಜಿ ಮೆಂಡನ್‌ ಭಾಗವಹಿಸಿ ನವಜೋಡಿಗಳಿಗೆ ಶುಭಕೋರಿದರು. ಡಾ| ಜಿ. ಶಂಕರ್‌ ಪತ್ನಿ ಶಾಲಿನಿ ಶಂಕರ್‌, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಕ| ದಯಾನಂದ್‌ ದಂಪತಿ, ಮೊಗವೀರ ಯುವ ಸಂಘಟನೆ ಅಧಕ್ಷ ಗಣೇಶ್‌ ಕಾಂಚನ್‌, ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧ‌ರ್‌ ಎಚ್‌. ಕರ್ಕೇರ, ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೆ.ಕೆ. ಕಾಂಚನ್‌, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭೆ ಅಧ್ಯಕ್ಷ ವಿಶ್ವನಾಥ್‌ ಮಾಸ್ಟರ್‌ ಕುರಾಡಿ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.