ಗಂಗೊಳ್ಳಿ: ಆಳ ಸಮುದ್ರ ಮೀನುಗಾರಿಕೆ ವಿಳಂಬ
ಪ್ರತಿಕೂಲ ಹವಾಮಾನ ಕಾರಣ ; ಆ.10ರ ಬಳಿಕ ಕಡಲಿಗಿಳಿಯುವ ನಿರೀಕ್ಷೆ
Team Udayavani, Aug 5, 2019, 5:37 AM IST
ಗಂಗೊಳ್ಳಿ: ಎರಡು ತಿಂಗಳ ನಿಷೇಧ ಅವಧಿ ಮುಗಿದಿದ್ದರೂ, ಗಂಗೊಳ್ಳಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಆಳ ಸಮುದ್ರ ಮೀನುಗಾರಿಕೆ ಕೆಲ ದಿನ ವಿಳಂಬವಾಗಿ ಆರಂಭ ಗೊಳ್ಳಲಿದೆ. ಮೂಲಗಳ ಪ್ರಕಾರ ಆ.10ರ ನಂತರ ಇಲ್ಲಿ ಯಾಂತ್ರೀಕೃತ ಮೀನುಗಾರಿಕೆ ಶುರುವಾಗುವ ನಿರೀಕ್ಷೆ ಯಲ್ಲಿ ಮೀನುಗಾರರಿದ್ದಾರೆ.
ಮೇನಲ್ಲಿ ಮೀನುಗಾರಿಕೆ ಮುಗಿಸಿ
ದಡದಲ್ಲಿ ಲಂಗರು ಹಾಕಿದ್ದ ಬೋಟು ಗಳು ಈಗ ಮತ್ತೆ ಕಡಲಿಗಿಳಿಯಲು ಸಜ್ಜಾಗುತ್ತಿದ್ದು, ಗಂಗೊಳ್ಳಿ ಬಂದರಿನಲ್ಲಿ ಇವರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿನ ಮ್ಯಾಂಗನೀಸ್ ವಾರ್ಫ್ ಬಳಿ ದಡದಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗಳನ್ನು ಒಂದೊಂದಾಗಿಯೇ ಸಮುದ್ರಕ್ಕಿಳಿಸಿ, ಮೀನುಗಾರಿಕೆಗೆ ತೆರಳಲು ತಯಾರಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಆರಂಭಗೊಂಡಿದ್ದರೆ, ಮಲ್ಪೆಯಲ್ಲಿ ಇನ್ನೊಂದೆ ರಡು ದಿನಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ.
ಇಲ್ಲಿ 60 ಸಣ್ಣ ಟ್ರಾಲ್‌ಬೋಟ್, 35ರಿಂದ 40 ತ್ರಿಸೆವೆಂಟಿ, 40ಕ್ಕೂ ಹೆಚ್ಚು ಪಸೀìನ್ ಬೋಟ್, ಇದಲ್ಲದೆ ನೂರಾರು ಗಿಲ್ ನೆಟ್ – ಮಾಟು ಬಲೆ, ಬೀಡುಬಲೆ, ಪಾತಿ ದೋಣಿಗಳು ಈ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತದೆ.
ಹರ್ಷದಾಯಕ ಋತುವಿನ ನಿರೀಕ್ಷೆ ಕಳೆದ ವರ್ಷ ಹವಾಮಾನ ವೈಪರೀತ್ಯ, ಚಂಡಮಾರುತ, ಲೈಟ್ ಫಿಶಿಂಗ್ ನಿಷೇಧ, ಇಲ್ಲಿನ ಮೀನುಗಳಿಗೆ ಗೋವಾ ರಾಜ್ಯದಲ್ಲಿ ನಿಷೇಧ ಸೇರಿದಂತೆ ಅನೇಕ ಸಮಸ್ಯೆ ಎದುರಿಸಿದ್ದರು.
ಆ.10ರ ಅನಂತರ ಆರಂಭ
ಗಂಗೊಳ್ಳಿಯಲ್ಲಿ ಈಗಾಗಲೇ ಮೀನು ಗಾರರು ಸಮುದ್ರಕ್ಕಿಳಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಈಗ ಮೀನುಗಾರಿಕೆಗೆ ತೊಂದರೆ ಯಾಗುವುದರಿಂದ ಆ. 10 ಅಥವಾ 11 ನಂತರ ಆರಂಭವಾಗಬಹುದು. ಇನ್ನೂ ಕೂಡ ಬಂದರಿನ ಜೆಟ್ಟಿ ದುರಸ್ತಿ ಮಾಡದೇ ಇರುವುದು, ಕೋಡಿ ಹಾಗೂ ಗಂಗೊಳ್ಳಿಯ ಬ್ರೇಕ್ ವಾಟರ್‌ಗಳನ್ನು ಸ್ವಲ್ಪ ದೂರದವರೆಗೆ ವಿಸ್ತರಿಸದೇ ಇರುವುದು ಹಾಗೂ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ತೆಗೆಯದೇ ಇರುವುದ ರಿಂದ ಮೀನುಗಾರರಿಗೆ ಸಮಸ್ಯೆಯಾಗಲಿದೆ. -ರಮೇಶ್ ಕುಂದರ್,
ಅಧ್ಯಕ್ಷರು, ಪಸೀìನ್‌ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ
ದುರಸ್ತಿಯಾಗದ ಬಂದರು
ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಹಲವು ಸಮಯ ಕಳೆದಿದ್ದು, ಇದರ ದುರಸ್ತಿಗೆ ಕಳೆದ ಜೂನ್‌ನಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆಯಂದ ಅನುದಾನ ಮಂಜೂರಾಗಿದೆ. ಆದರೆ ನಿಷೇಧ ಅವಧಿ ಮುಕ್ತಾಯಗೊಂಡು, ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುತ್ತಿದ್ದರೂ, ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಇದರಿಂದ ಬಂದರಲ್ಲಿ ಈಗ ಮೀನುಗಾರಿಕೆ ಮುಗಿಸಿ ಬರುವ ಬೋಟ್‌ಗಳಿಂದ ಮೀನು ಇಳಿಸಲು ಜಾಗದ ಸಮಸ್ಯೆ ಇದ್ದು, ಅದಕ್ಕೂ ಮೊದಲು ದುರಸ್ತಿ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಮೀನುಗಾರರ ಅಭಿಪ್ರಾಯ.
– ಪ್ರಶಾಂತ್‌ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.