ಗಂಗೊಳ್ಳಿ ಪ್ರಾ.ಆ.ಕೇಂದ್ರ ಮೇಲ್ದರ್ಜೆಗೆ ಬೇಡಿಕೆ

ಅಗತ್ಯ-ಅರ್ಹತೆಯಿದ್ದರೂ ಈಡೇರದ ಬೇಡಿಕೆ , ಸಮುದಾಯ ಆರೋಗ್ಯ ಕೇಂದ್ರವಾಗಿಸಲು ಗ್ರಾಮಸ್ಥರ ಆಗ್ರಹ

Team Udayavani, Jan 5, 2020, 5:40 AM IST

2512KDPP2

ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗೆ ನೆರವಿಗೆ ಬರುವುದು ಆರೋಗ್ಯ ಕೇಂದ್ರಗಳು. ಸರಕಾರ ಜನಸಂಖ್ಯೆ ವ್ಯಾಪ್ತಿಗೆ ಅನುಗುಣವಾಗಿ ಇವುಗಳನ್ನು ಮೇಲ್ದರ್ಜೆಗೇರಿಸುತ್ತಿದ್ದರೆ ಜನರಿಗೂ ಪ್ರಯೋಜನಕಾರಿಯಾಗುತ್ತದೆ.

ಗಂಗೊಳ್ಳಿ:ಹೆಮ್ಮಾಡಿ,ಕಟ್‌ಬೆಲೂ¤ರು,ದೇವಲ್ಕುಂದ, ತಲ್ಲೂರು, ಉಪ್ಪಿನಕುದ್ರು, ಗಂಗೊಳ್ಳಿ ಗ್ರಾಮಗಳನ್ನೊಳಗೊಂಡ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಈ ಭಾಗದ ಜನರ ಬಹು ಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಅಗತ್ಯ ಹಾಗೂ ಅರ್ಹತೆಗಳಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷéದ ಪರಿಣಾಮ ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆ ಈಡೇರುವ ಕಾಲ ಮಾತ್ರ ಇನ್ನೂ ಸನ್ನಿಹಿತವಾಗಿಲ್ಲ.

ಯಾಕೆ ಅಗತ್ಯ?
ಗಂಗೊಳ್ಳಿಯಲ್ಲಿ ಈಗ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಈ ಭಾಗದ ಜನರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಅಥವಾ ತುರ್ತು ಅನಾರೋಗ್ಯದ ಸಂದರ್ಭದಲ್ಲಿ ಅವರು ತಾಲೂಕು ಆಸ್ಪತ್ರೆ ಇರುವ ಕುಂದಾಪುರಕ್ಕೆ ಸುಮಾರು 20 ಕಿ.ಮೀ. ದೂರ ಕ್ರಮಿಸಬೇಕು.

ಇದು ಮೀನುಗಾರಿಕಾ ನಗರಿಯೂ ಆಗಿರುವುದರಿಂದ ಇಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ಜಾಸ್ತಿ. ಆಸ್ಪತ್ರೆಯಲ್ಲಿ ಸಿಬಂದಿ ಕೊರತೆಯಿಂದ ರೋಗಿಗಳು ಪರದಾಟ ನಡೆಸಬೇಕಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರವಾದರೆ 6-12 ಬೆಡ್‌ಗಳಿದ್ದುದ್ದು 30 ಕ್ಕೇರಲಿದೆ. 3 ವೈದ್ಯರು, ಇತರೆ ಸಿಬಂದಿ ಸಂಖ್ಯೆಯೂ ಏರಿಕೆಯಾಗುತ್ತದೆ. ಇದಲ್ಲದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

ಹುದ್ದೆಗಳು ಖಾಲಿ
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 23 ಹುದ್ದೆಗಳಿದ್ದು, ಈ ಪೈಕಿ ಕೇವಲ 6 ಹುದ್ದೆಗಳಷ್ಟೇ ಭರ್ತಿಯಾಗಿವೆ. ವೈದ್ಯಾಧಿಕಾರಿಯೂ ವರ್ಗವಾಗಿರುವುದರಿಂದ ಖಾಯಂ ವೈದ್ಯಾಧಿಕಾರಿಯ ಅಗತ್ಯವೂ ಇದೆ. ಗ್ರೂಪ್‌ ಡಿ 2 ಹುದ್ದೆ, ಸ್ಟಾಫ್‌ ನರ್ಸ್‌ ಒಬ್ಬರು, ಫಾರ್ಮಾಸಿಸ್ಟ್‌, ಲ್ಯಾಬ್‌ ಟೆಕ್ನಿಶಿಯನ್ಸ್‌ (ಇವೆರಡೂ ಈಗ ಹೊರಗುತ್ತಿಗೆಯಲ್ಲಿದ್ದಾರೆ) ಇದ್ದಾರೆ. ಉಳಿದಂತೆ ಒಬ್ಬ ವೈದ್ಯಾಧಿಕಾರಿ, ಸ್ಟಾಫ್‌ ನರ್ಸ್‌ 1, ಪುರುಷ ಸಹಾಯಕ 3 ಮಂದಿ, ಪ್ಯಾರಾ ಮೆಡಿಕಲ್‌ ವರ್ಕರ್‌, ಕ್ಲರ್ಕ್‌ ಹುದ್ದೆಗಳೆಲ್ಲ ಖಾಲಿಯಿವೆ. ಇನ್ನು° 7 ಉಪ ಆರೋಗ್ಯ ಕೇಂದ್ರಗಳ ಪೈಕಿ ಹೆಮ್ಮಾಡಿ, ದೇವಲ್ಕುಂದ, ತಲ್ಲೂರು ಕೇಂದ್ರಗಳಲ್ಲಿ ಕೂಡ ಹುದ್ದೆಗಳು ಖಾಲಿಯಿವೆ.

ಅವಕಾಶ ಹೇಗೆ?
ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ, ಕೆಮ್ಮು, ಶೀತ, ಜ್ವರದ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, 120ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಬೇರೆ ದಿನಗಳಲ್ಲಿ 75ರಿಂದ 80 ರೋಗಿಗಳು ಪ್ರತಿ ದಿನ ಬರುತ್ತಾರೆ.

ಈಗಿರುವ ಹೆಮ್ಮಾಡಿ, ಗಂಗೊಳ್ಳಿ, ಕಟ್‌ಬೆಲೂ¤ರು, ದೇವಲ್ಕುಂದ, ತಲ್ಲೂರು ಗ್ರಾಮಗಳ ಜತೆಗೆ ಸಮೀಪ ತ್ರಾಸಿ, ಹೊಸಾಡು ಗ್ರಾಮಗಳನ್ನು ಸೇರಿಸಿಕೊಂಡು ಅಗತ್ಯವಿರುವ 30 ಸಾವಿರ ಜನಸಂಖ್ಯೆಯನ್ನು ಹೊಂದಿಸಿಕೊಂಡು, ಮೇಲೆªರ್ಜೆಗೇರಿಸಬೇಕು.

ಆರೋಗ್ಯ
ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ ಕೊಂಡು ಸಮುದಾಯಆರೋಗ್ಯ ಕೇಂದ್ರ ಮಾಡಿದರೆ ಅನುಕೂಲ.

ಜಾಗದ ಆವಶ್ಯಕತೆ 02 ಅರ್ಹತೆಯೇನು?
ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ವ್ಯಾಪ್ತಿಯಲ್ಲಿ 30 ಸಾವಿರ ಜನಸಂಖ್ಯೆ ಇರಬೇಕು ಹಾಗೂ 2 ಎಕರೆ ಜಾಗದ ಅಗತ್ಯವಿದೆ. ಇದಲ್ಲದೆ ತಿಂಗಳಿಗೆ 5 ರಿಂದ 10 ಹೆರಿಗೆ ಪ್ರಕರಣ ಬೇಕು. ಈಗಿರುವ ಪ್ರಕಾರ 25 ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಯಿದ್ದು, ಇನ್ನೊಂದು ಗ್ರಾಮವನ್ನು ಸೇರಿಸಿದರೆ 30 ಸಾವಿರ ಜನಸಂಖ್ಯೆಯಾಗುತ್ತದೆ. 10 ವರ್ಷಗಳ ಹಿಂದೆ ಇಲ್ಲಿಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿತ್ತು. ಆದರೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗದ ಕೊರತೆಯಿಂದ ಅದು ಬೇರೆಡೆ ಹೋಗಿತ್ತು.

ಬೇಡಿಕೆಯಿದೆ
ಗಂಗೊಳ್ಳಿಗೆ ಹಿಂದೊಮ್ಮೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಜಾಗದ ಕೊರತೆಯಿಂದ ಅದು ರದ್ದಾಗಿತ್ತು. ಈಗ ಮತ್ತೆ ಜನರಿಂದ ಬೇಡಿಕೆಗಳಿವೆ. ಇದರೊಂದಿಗೆ ಕಿರಿಮಂಜೇಶ್ವರ, ಸಿದ್ದಾಪುರ, ವಂಡ್ಸೆಯಲ್ಲೂ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಪ್ರಸ್ತಾವನೆಯಿದೆ.
– ಡಾ| ನಾಗಭೂಷಣ ಉಡುಪ,
ಕುಂದಾಪುರ ತಾ| ವೈದ್ಯಾಧಿಕಾರಿ

ಖಾಯಂ ವೈದ್ಯರಿಲ್ಲ
ಗಂಗೊಳ್ಳಿಯಲ್ಲಿ ಈಗಿರುವ ಪ್ರಾ.ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಸಿಬಂದಿ ಕೊರತೆಯೂ ಇದೆ. ಇದರಿಂದ ಪ್ರತಿದಿನ ಇಲ್ಲಿಗೆ ಬರುವ ನೂರಾರು ಸಂಖ್ಯೆಯ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದಲ್ಲಿ, ಇನ್ನಷ್ಟು ಹೆಚ್ಚಿನ ವೈದ್ಯರು, ಸಿಬಂದಿ, ಬೆಡ್‌ಗಳು, ಸೌಕರ್ಯ ಕೂಡ ಹೆಚ್ಚಾಗಲಿದ್ದು, ಇದರಿಂದ ಇಲ್ಲಿನವರಿಗೆ ಪ್ರಯೋಜನವಾಗಲಿದೆ.
-ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ

ಮೇಲ್ದರ್ಜೆಗೇರಿಸಬೇಕು
ಹಿಂದೊಮ್ಮೆ ಈ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆಗ ಅನುದಾನವು ಮಂಜೂರಾಗಿತ್ತಂತೆ. ಆದರೆ ಜಾಗದ ಸಮಸ್ಯೆಯಿಂದ ಅದು ಬೇರೆಡೆ ಮಂಜೂರಾಗಿದೆ. ಗಂಗೊಳ್ಳಿಯ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಂಡು ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದರೆ ಇಲ್ಲಿನವ‌ರಿಗೆ ಅನುಕೂಲವಾಗಲಿದೆ.
– ರವಿಶಂಕರ್‌ ಖಾರ್ವಿ ಗಂಗೊಳ್ಳಿ, ಸ್ಥಳೀಯರು

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.