ಗಂಗೊಳ್ಳಿ ಬಂದರು: ಜೆಟ್ಟಿಯ ಸ್ಲ್ಯಾಬ್ ಮತ್ತೆ ಕುಸಿತ

ಮೂರನೇ ಬಾರಿಗೆ ಕುಸಿತ ; ಇನ್ನೂ ಆಗದ ದುರಸ್ತಿ; ಮೀನುಗಾರರ ಆಕ್ರೋಶ

Team Udayavani, Nov 18, 2019, 5:48 AM IST

1711KDPP2

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ರವಿವಾರ ಮತ್ತೆ ಕುಸಿದಿದೆ. ಕಳೆದೊಂದು ವರ್ಷದಲ್ಲಿ ಸ್ಲ್ಯಾಬ್ ಮೂರನೇ ಬಾರಿಗೆ ಕುಸಿದಿದೆ. ಕುಸಿದು ಇಷ್ಟು ಸಮಯವಾದರೂ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಈಗ ಮೀನುಗಾರರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ ಇಡೀ ಬಂದರನ್ನೇ ಬಂದ್‌ ಮಾಡಿ ಎನ್ನುವ ಮಾತುಗಳು ಮೀನುಗಾರರಿಂದ ಕೇಳಿ ಬಂದಿದೆ.

ಜೆಟ್ಟಿಯ ಸ್ಲ್ಯಾಬ್ ಮತ್ತೆ ಕುಸಿದಿರುವುದು ಮಾತ್ರವಲ್ಲದೆ ಎರಡನೇ ಹರಾಜು ಪ್ರಾಂಗಣ ಅಪಾಯಕಾರಿ, ಕುಸಿಯುವ ಭೀತಿಯಿಂದ ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ನಾಲ್ಕು ಸುತ್ತಲೂ ಇಟ್ಟಿಗೆಯಿಂದ ತಡೆಗೋಡೆ ಕಟ್ಟಲಾಗಿತ್ತು. ಅದು ಕೂಡ ಒಂದು ಬದಿ ಕುಸಿದಿದ್ದು, ಮತ್ತೂಂದು ಬದಿ ಬಿರುಕುಬಿಟ್ಟಿದೆ.

ಮೀನುಗಾರರಿಗೆ ಸಮಸ್ಯೆ
ಈಗ ಈ ಎರಡನೇ ಹರಾಜು ಪ್ರಾಂಗಣದಲ್ಲಿ ಮೀನುಗಾರರಿಗೆ ಅಪಾಯ ಎದುರಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಎಲ್ಲ ರೀತಿಯ ಮೀನುಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸ್ಲ್ಯಾಬ್ ದುರಸ್ತಿಯಾಗುವವರೆಗೆ ಬಂದರಿನ ಬೇರೆ ಕಡೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೀನುಗಾರಿಕಾ ಋತು ಆರಂಭಕ್ಕೂ ಮುನ್ನ ಅಧಿಕಾರಿಗಳು ಹೇಳಿದ್ದರೂ ಇನ್ನೂ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಕೊಟ್ಟಿಲ್ಲ. ಇಲ್ಲಿ ಸುಮಾರು 300ಕ್ಕೂ ಮಿಕ್ಕಿ ಪರ್ಸಿನ್‌, 600ಕ್ಕೂ ಹೆಚ್ಚು ಫಿಶಿಂಗ್‌ ಬೋಟ್‌ಗಳಿವೆ. 500ಕ್ಕೂ ಅಧಿಕ ನಾಡದೋಣಿಗಳಿವೆ. ಇದರಿಂದ ಬಂದರಿನಲ್ಲಿ ಬೋಟುಗಳಿಂದ ಮೀನು ಇಳಿಸಲು, ಬೋಟು ನಿಲುಗಡೆಗೆ ಜಾಗದ ಸಮಸ್ಯೆಯಾಗುತ್ತಿದೆ.

3ನೇ ಬಾರಿಗೆ ಕುಸಿತ
2018ರ ಸೆ. 14ರಂದು ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೂಂದು ಕಡೆ ಕೂಡ ಸ್ಲ್ಯಾಬ್ ಕುಸಿದಿತ್ತು. ಈಗ ಮತ್ತೆ ಕುಸಿದಿದೆ. ಜೆಟ್ಟಿ ಒಟ್ಟು ಅಂದಾಜು 400 ಮೀ. ಉದ್ದವಿದ್ದು, ಅದರಲ್ಲಿ 100 ಮೀ. ಉದ್ದದ ಜೆಟ್ಟಿ ಈವರೆಗೆ ಕುಸಿದಿದೆ. ಇನ್ನು ಸಮುದ್ರದ ನೀರು ಒಳಗೆ ನುಗ್ಗುತ್ತಿರುವುದರಿಂದ ಜೆಟ್ಟಿಯ ಅಡಿಪಾಯಕ್ಕೆ ಕುತ್ತು ತರುವ ಭೀತಿಯೂ ಎದುರಾಗಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಹರಾಜು ಪ್ರಾಂಗಣದ ಗೋಡೆ, ಜೆಟ್ಟಿ ಎಲ್ಲವೂ ಕುಸಿಯುವ ಸಂಭವ ಇದೆ ಎನ್ನುವ ಆತಂಕ ಮೀನುಗಾರರದ್ದು.

ಪ್ರಾಣಹಾನಿಗೆ ಕಾಯುತ್ತಿದ್ದಾರೆಯೇ?
ಈಗ 3 ನೇ ಬಾರಿಗೆ ಜೆಟ್ಟಿಯ ಸ್ಲ್ಯಾಬ್ ಕುಸಿದಿದೆ. ಇಷ್ಟು ಸಮಯವಾದರೂ ಇನ್ನೂ ಒಂಚೂರು ಕೂಡ ಕಾಮಗಾರಿಯೇ ಆಗಿಲ್ಲ. ಇವರು ಮೀನುಗಾರರ ಪ್ರಾಣ ಹೋಗಲಿ ಅನ್ನುವುದನ್ನು ಕಾಯುತ್ತಿ ದ್ದಾರೆಯೇ? ಇಷ್ಟು ದಿನ ಬರೀ ಭರವಸೆಗಳೇ ಆಯಿತು. ಎಲ್ಲ ಬಂದರುಗಳಂತೆಯೇ ನಾವು ಅರ್ಹರಲ್ಲವೇ? ಇವರಿಂದ ಆಗದಿದ್ದರೆ ಜೀವಹಾನಿ ಸಂಭವಿಸುವ ಮುನ್ನ ಇಡೀ ಬಂದರನ್ನೇ ಮೀನುಗಾರಿಕೆಗೆ ಯೋಗ್ಯವಲ್ಲ ಎಂದು ಬಂದ್‌ ಮಾಡಲಿ.
-ರಮೇಶ್‌ ಕುಂದರ್‌,
ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ

ಹೆಚ್ಚುವರಿ ಅನುದಾನಕ್ಕೆ ವಿಳಂಬ
ಗಂಗೊಳ್ಳಿ ಬಂದರಿನ ಪೂರ್ಣ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದು, ಈಗಾಗಲೇ ಸರಕಾರ 1.98 ಕೋ.ರೂ. ಮಂಜೂರಾತಿ ನೀಡಿದ್ದರೂ ಹೆಚ್ಚಿನ ಅನುದಾನಕ್ಕಾಗಿ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ, ಜೆಟ್ಟಿಯ ಮರು ನಿರ್ಮಾಣಕ್ಕಾಗಿ 12.5 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಹೆಚ್ಚುವರಿ ಅನುದಾನದ ಅಗತ್ಯವಿದ್ದುದರಿಂದ ವಿಳಂಬವಾಗುತ್ತಿದೆ ಎನ್ನುವುದಾಗಿ ಅಧಿಕಾರಿಗಳು ಸಮಜಾಯಿಷಿ ಕೊಡುತ್ತಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.