ಗಂಗೊಳ್ಳಿ, ಯಡ್ತರೆ, ಬೈಂದೂರು: ಶಾಂತಿಯುತ ಮತದಾನ
Team Udayavani, Jan 2, 2019, 7:55 PM IST
ಗಂಗೊಳ್ಳಿ: ಕುಂದಾಪುರ ತಾಲೂಕಿನ ಅತೀ ದೊಡ್ಡ ಗ್ರಾ.ಪಂ.ಗಳಲ್ಲಿ ಒಂದಾದ ಗಂಗೊಳ್ಳಿಯ ಗ್ರಾ.ಪಂ. ಆಡಳಿತದ ಚುಕ್ಕಾಣಿ ಹಿಡಿಯುವ ಸಲುವಾಗಿ ಮಂಗಳವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಒಟ್ಟು ಶೇ.45 ರಷ್ಟು ಮತದಾನವಾಗಿತ್ತು. ಗಂಗೊಳ್ಳಿಯಲ್ಲಿ 8 ಕ್ಷೇತ್ರಗಳಿಗೆ ಒಟ್ಟು 12 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 33 ಸ್ಥಾನಗಳಿಗಾಗಿ 85 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಶೇ. 63 ಮತದಾನ
ಬಂದರು ಪ್ರದೇಶವಿರುವ ಗಂಗೊಳ್ಳಿಯಲ್ಲಿ ಒಟ್ಟು 10,456 ಮಂದಿ ಮತದಾರರಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಒಟ್ಟು ಶೇ. 63ರಷ್ಟು ಮಂದಿ ಮತ ಚಲಾಯಿಸಿದ್ದಾರೆ. 3 ಹಾಗೂ 4ನೇ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಶೇ. 10, ಬೆಳಗ್ಗೆ 11 ಗಂಟೆಗೆ ಶೇ.24 ಮತದಾನ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 36 ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಗಂಗೊಳ್ಳಿ, ಬೈಂದೂರು ಹಾಗೂ ಯಡ್ತರೆ ಗ್ರಾ.ಪಂ. ಚುನಾವಣೆಗೆ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತ ಯಂತ್ರ ಬಳಸಲಾಯಿತು. ಗಂಗೊಳ್ಳಿಯಲ್ಲಿ ಆರಂಭದಲ್ಲಿ ಒಂದು ಮತಗಟ್ಟೆಯಲ್ಲಿ ಇವಿಎಂ ಮತಯಂತ್ರದಲ್ಲಿ ಗೊಂದಲ ಉಂಟಾದರೂ, ಕೂಡಲೇ ಬದಲಿ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಈ ಚುನಾವಣೆಯಲ್ಲಿ ಗಂಗೊಳ್ಳಿ ಗ್ರಾಮದ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಯಿತು.
3 ಅತಿಸೂಕ್ಷ್ಮ ಮತಗಟ್ಟೆ
ಒಟ್ಟು ಇರುವ 12 ಮತಗಟ್ಟೆಗಳ ಪೈಕಿ 9 ಸೂಕ್ಷ್ಮ ಮತಗಟ್ಟೆಗಳು ಹಾಗೂ 3 ಅತಿಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗಿತ್ತು. ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದ ಕುರಿತು ವರದಿಯಾಗಿಲ್ಲ.
ಜ. 4 : ಮತ ಎಣಿಕೆ
ಕಣದಲ್ಲಿರುವ 85 ಅಭ್ಯರ್ಥಿಗಳ ಭವಿಷ್ಯ ಜ. 4 ರಂದು ನಿರ್ಧಾರವಾಗಲಿದೆ. ಜ. 4 ರಂದು ಬೆಳಗ್ಗೆ 8 ಗಂಟೆಗೆ ಕುಂದಾಪುರದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಮೀನುಗಾರಿಕೆಗೆ ರಜೆ
ಚುನಾವಣೆ ಸಂಬಂಧ ಗಂಗೊಳ್ಳಿ ಬಂದರಿನಲ್ಲಿ ಬುಧವಾರ ಮೀನುಗಾರಿಕಾ ಚಟುವಟಿಕೆಗೆ ರಜೆ ನೀಡಲಾಗಿತ್ತು. ಈ ದಿನ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆದಿಲ್ಲ.
ಯಡ್ತರೆ, ಬೈಂದೂರು: ಬಿರುಸಿನ ಮತದಾನ
ಬೈಂದೂರು: ಯಡ್ತರೆ ಮತ್ತು ಬೈಂದೂರು ಗ್ರಾ.ಪಂ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸ್ಥಳೀಯ ಚುನಾವಣೆಯಾದ ಕಾರಣ ಹಾಗೂ ತಾಲೂಕು ಕೇಂದ್ರದ ಪ್ರಮುಖ ಗ್ರಾಮಗಳಾಗಿರುವ ಯಡ್ತರೆ ಮತ್ತು ಬೈಂದೂರಿನಲ್ಲಿ ಕಾರ್ಯಕರ್ತರ ನಡುವೆ ಗೆಲುವಿಗಾಗಿ ಸಾಕಷ್ಟು ಪೈಪೋಟಿಗೆ ಕಸರತ್ತು ನಡೆದಿತ್ತು.
ಯಡ್ತರೆ ಗ್ರಾಮದಲ್ಲಿ 21 ಹಾಗೂ ಬೈಂದೂರು ಗ್ರಾಮದಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಬೆಳಗ್ಗೆ ಮೈಕಳ ಹಾಗೂ ಮಯ್ನಾಡಿ ಬೂತ್‌ನಲ್ಲಿ ಮತಯಂತ್ರ ಕೈಕೊಟ್ಟಿದ್ದು ಚುನಾವಣಾ ಪ್ರಾರಂಭವಾಗುವ ಸಮಯದೊಳಗೆ ಅಧಿಕಾರಿಗಳು ದುರಸ್ತಿ ಮಾಡಿಕೊಟ್ಟಿದ್ದರು.ಹೀಗಾಗಿ ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ. 4 ಗಂಟೆಯ ವೇಳೆಗೆ ಬೈಂದೂರು ಗ್ರಾಮದಲ್ಲಿ ಶೇ. 55ಹಾಗೂ ಯಡ್ತರೆಯಲ್ಲಿ ಶೇ. 52 ಮತದಾನ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.