ಕಸದ ಆದಾಯ ನಮ್ಮದು; ನಿರ್ವಹಣೆ ನಿಮ್ಮದು !
Team Udayavani, Apr 9, 2021, 3:00 AM IST
ಕೋಟ: ನಗರ ಅಥವಾ ಪಟ್ಟಣದ ಸುಸ್ಥಿರ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಸರಿಯಾಗಿ ನಿರ್ವಹಿಸಿದರೆ ತ್ಯಾಜ್ಯ ನಿರ್ವಹಣೆಯೂ ಒಂದು ಸಂಪನ್ಮೂಲ. ಇಲ್ಲದಿದ್ದರೆ ಒಂದು ಗಂಭೀರ ಸಮಸ್ಯೆ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲೂ ಈಗ ಕಸ ನಿರ್ವಹಣೆ ದೊಡ್ಡ ಸಮಸ್ಯೆ.
ಇದುವರೆಗೂ ಅಧಿಕಾರಿಗಳಾಗಲೀ ಅಥವಾ ಪಂಚಾಯತ್‌ನ ಜನಪ್ರತಿನಿಧಿಗಳಾಗಲೀ ತ್ಯಾಜ್ಯದ ಸಮರ್ಪಕ ನಿರ್ವಹಣೆ ಬಗ್ಗೆ ಯೋಚಿಸಿಲ್ಲ. ಸಭೆಗಳಲ್ಲಿ ಚರ್ಚೆಯಾದದ್ದೂ ಕಡಿಮೆಯೇ. ಯಾರಾದರೂ ನಾಗರಿಕರು ದೂರಿದ್ದರೆ ಅದು ಪ್ರಾಸಂಗಿಕವಾಗಿ ಪ್ರಸ್ತಾವಿಸಿದ್ದು ಬಿಟ್ಟರೆ ಗಂಭೀರ ಚರ್ಚೆ ಆದಂತಿಲ್ಲ. ಹಾಗಾಗಿ ಅದಕ್ಕೊಂದು ಶಾಶ್ವತ ಪರಿಹಾರ ಸಾಧ್ಯ ಆಗಿಲ್ಲ ಎಂಬುದು ಹಲವು ಅಂಶಗಳನ್ನು ಗಮನಿಸಿದಾಗ ಕಂಡುಬರುವಂಥದ್ದು.
9.50 ಲಕ್ಷ ರೂ. ಆದಾಯ :
ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 3,544 ಮನೆಗಳಿದ್ದು 15,123 ಜನಸಂಖ್ಯೆ ಇದೆ. 506 ವಾಣಿಜ್ಯ ಸಂಕೀರ್ಣ, 3 ವಸತಿ ಸಂಕೀರ್ಣ, 6 ಸಭಾಂಗಣಗಳು, 6 ಸಣ್ಣ ಕೈಗಾರಿಕೆ, 20 ಮಧ್ಯಮ ಕೈಗಾರಿಕಾ ಕೇಂದ್ರಗಳಿವೆ. ಇಲ್ಲಿನ 1.11 ಕೋಟಿ ರೂ. ವಾರ್ಷಿಕ ತೆರಿಗೆ ಆದಾಯದಲ್ಲಿ ಕಸ ತೆರಿಗೆಯ ಸುಮಾರು 9.50 ಲಕ್ಷ ರೂ. ಕಸ ನಿರ್ವಹಣೆ ತೆರಿಗೆಯೂ ಸೇರಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 150-180 ರೂ., ಪ್ರತಿ ವಾಣಿಜ್ಯ ಸಂಕೀರ್ಣಗಳಿಂದ 360 ರೂ. ಹಾಗೂ ಸಭಾಂಗಣಗಳಿಂದ ಕಾರ್ಯಕ್ರಮ
ವಾರು ಕಸ ತೆರಿಗೆ ವಸೂಲು ಮಾಡಲಾಗುತ್ತಿದೆ. ಆದರೆ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇಲ್ಲ. ಅಂಗಡಿ, ವಾಣಿಜ್ಯ ಕೇಂದ್ರಗಳಿಂದ ನಾಲ್ಕೈದು ದಿನಗಳಿಗೊಮ್ಮೆ ಹಸಿ ಕಸ- ಒಣಕಸವನ್ನು ಸಂಗ್ರಹಿಸಲಾಗುತ್ತದೆ. ಮಿಕ್ಕುಳಿದಂತೆ ಮನೆಗಳಿಂದ ಕೇವಲ ಒಣ ತ್ಯಾಜ್ಯವನ್ನು ಮಾತ್ರ ತಿಂಗಳಿಗೆ ಒಂದೆರಡು ಬಾರಿ ಸ್ವೀಕರಿಸಲಾಗುತ್ತದೆ. ಅದೂ ಗ್ಯಾರಂಟಿ ಇಲ್ಲ. ಕಸ ವಿಲೇವಾರಿಗೆ ಇರುವುದು ಕೇವಲ ಒಂದು ಟ್ರ್ಯಾಕ್ಟರ್, ಒಂದು ಮಿನಿ ವ್ಯಾನ್ ಮಾತ್ರ. ಈ ಮೊದಲು ಇಲ್ಲಿನ ಸಂಪೂರ್ಣ ಕಸವನ್ನು ಉಡುಪಿ ನಗರಸಭೆಯ ಡಂಪಿಂಗ್ ಯಾರ್ಡ್‌ಗೆ
ನೀಡಲಾಗುತ್ತಿತ್ತು. ಆದರೆ ಅಲ್ಲಿ ಆಕ್ಷೇಪ ಬಂದದ್ದರಿಂದ ಬದಲಿ ವ್ಯವಸ್ಥೆ ಹುಡುಕುವುದರ ಬದಲು ಪಂಚಾಯತ್ ಮನೆಯಿಂದ ಕಸ ಸಂಗ್ರಹ ಮಾಡುವುದನ್ನು ನಿಲ್ಲಿಸಿತು. ಹಾಗಾಗಿ ನಾವು ಪ್ರತಿ ವರ್ಷ ಕಸ ವಿಲೇವಾರಿಗಾಗಿ ತೆರಿಗೆ ಪಾವತಿಸುತ್ತೇವೆ. ಆದರೂ ಸರಿಯಾದ ವ್ಯವಸ್ಥೆ ಯಾಕಿಲ್ಲ ಎನ್ನುವುದು ನಾಗರಿಕರ ಪ್ರಶ್ನೆ.
ಗಂಟೆ ದನಿ ಒಂದು ದಿನ ಸ್ತಬ್ಧ :
ಒಂದೆರಡು ವರ್ಷಗಳ ಹಿಂದೆ ಕಸ ಸಂಗ್ರಹ ಗಾಡಿಯ ಗಂಟೆ ಕೆಲವು ಬಾರಿಯಾದರೂ ಮನೆಗಳ ಎದುರು ಕೇಳುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಗಂಟೆ ಮೌನವಾಯಿತು. ಆ ಬಳಿಕ ಅಧಿಕಾರಿಗಳೂ ವ್ಯವಸ್ಥೆಯನ್ನು ಸರಿಪಡಿಸುವತ್ತ ಗಮನ ಹರಿಸಲಿಲ್ಲ. ಜನಪ್ರತಿನಿಧಿಗಳಂತೂ ಅಧಿಕಾರಿಗಳು ಹೇಳುವ ಮಾತನ್ನು ಕೇಳಿ ಸುಮ್ಮನಾಗುತ್ತಾರೆ. ಹಾಗಾಗಿ ಕಸ ತೆರಿಗೆ ಸಂಗ್ರಹ ಮಾತ್ರ ನಡೆಯುತ್ತಿದೆ, ಮನೆಗಳಿಂದ ಕಸ ಸಂಗ್ರಹವಲ್ಲ ಎಂಬುದು ನಾಗರಿಕರ ಅಭಿಪ್ರಾಯ.
ರಸ್ತೆ ಬದಿ ಕಸ; ಬಂದ ದೂರುಗಳಿಗೆ ಲೆಕ್ಕವಿಲ್ಲ :
ಹಸಿ ಕಸವನ್ನು ಮನೆಯಲ್ಲೇ ಕಾಂಪೋಸ್ಟ್ ವಿಧಾನದ ಮೂಲಕ ವಿಲೇವಾರಿ ಮಾಡಲು ತಿಳಿಸಲಾಗುತ್ತದೆ. ಆದರೆ ಬಹುತೇಕ ಮನೆಗಳಲ್ಲಿ ಅನುಸರಿಸುವುದಿಲ್ಲ ಹಾಗೂ ಅನುಸರಿಸುವಂತೆ ಪ್ರೇರೇಪಿಸಲು ಪಟ್ಟಣ ಪಂಚಾಯತ್ ಸಹ ಸಮರ್ಪಕ ಯೋಜನೆಯನ್ನು ರೂಪಿಸಿಲ್ಲ. ಹೀಗಾಗಿ ಪ.ಪಂ. ವ್ಯಾಪ್ತಿಯ ಬೆಟ್ಲಕ್ಕಿ ಹಡೋಲು, ಪಾರಂಪಳ್ಳಿ, ಕಾರ್ಕಡ ಹಾಗೂ ಇನ್ನಿತರ ಕಡಗಳಲ್ಲದೇ, ಹಲವು ವಾರ್ಡ್‌ಗಳ ಮುಖ್ಯ ರಸ್ತೆಗಳಲ್ಲೂ ಕಸದ ರಾಶಿ ಸ್ವಾಗತಿ
ಸುತ್ತದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಪ್ರಯೋ ಜನವಾಗಿಲ್ಲ. ತ್ಯಾಜ್ಯ ವಿಲೇವಾರಿಗೆ ಇದುವರೆಗೆ ಕೈಗೊಂಡ ಯೋಜನೆಗಳೆಲ್ಲವೂ ತಾತ್ಕಾಲಿಕವಾಗಿದ್ದು ಶಾಶ್ವತ ಪರಿಹಾರದ ಬಗ್ಗೆ ಯೋಚಿಸದಿರುವುದು ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆ, ಆಡಳಿತಗಾರರ ನಿಷ್ಕ್ರಿಯತೆಗೆ ಕನ್ನಡಿ ಹಿಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.