ಮೇಲ್‌ಗಂಗೊಳ್ಳಿ : ರಸ್ತೆ ಬದಿಯಲ್ಲೇ ಕಸದ ರಾಶಿ
Team Udayavani, Sep 18, 2018, 1:45 AM IST
ಗಂಗೊಳ್ಳಿ: ದೇಶದೆಲ್ಲೆಡೆ ಸ್ವಚ್ಛ ಭಾರತದ ಕೂಗು ಬಲವಾಗಿ ಕೇಳಿ ಬರುತ್ತಿದ್ದರೂ, ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೇಲ್ ಗಂಗೊಳ್ಳಿಯ ರಸ್ತೆ ಬದಿಯಲ್ಲಿಯೇ ಕಸ ಎಸೆಯುತ್ತಿರುವುದು ಮಾತ್ರ ತಪ್ಪಿಲ್ಲ. ಘನ-ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ಕಳೆದ ತಿಂಗಳಿನಿಂದ ಆರಂಭಿಸಿದ್ದರೂ, ಅದನ್ನು ಎಲ್ಲ ಕಡೆಗೂ ವಿಸ್ತರಿಸದಿದ್ದುದರಿಂದ ಗ್ರಾಮದ ಕಸ ವಿಲೇವಾರಿ ಸಮಸ್ಯೆಯಾಗಿದೆ. ಗಂಗೊಳ್ಳಿಯ ಸಮೀಪದ ಮೇಲ್ ಗಂಗೊಳ್ಳಿ ಭಾಗದಲ್ಲಿ ಅನೇಕ ಮನೆಗಳಿದ್ದು, ಅಲ್ಲಿಯವರೆಲ್ಲ ಕಸ ವಿಲೇವಾರಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯೇ ಕಸ ಎಸೆಯುತ್ತಿದ್ದಾರೆ. ಅದಲ್ಲದೆ ಬೇರೆ ಕಡೆಯಿಂದಲೂ ಬಂದು ಇಲ್ಲಿಯೇ ಕಸ ಎಸೆಯುತ್ತಿದ್ದಾರೆ.
ದುರ್ವಾಸನೆ
ತ್ಯಾಜ್ಯ ರಾಶಿಯಿಂದಾಗಿ ಮೇಲ್ ಗಂಗೊಳ್ಳಿ ಭಾಗದ ಪರಿಸರವಿಡೀ ದುರ್ವಾಸನೆ ಆವರಿಸಿದ್ದು, ಮೂಗು ಮುಚ್ಚಿಕೊಂಡೇ ದಿನ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ.
ರೋಗ ಭೀತಿ
ಕೊಳೆತ ತರಕಾರಿ, ಪ್ಲಾಸ್ಟಿಕ್ ಕಸಗಳನ್ನು ಇಲ್ಲಿಯೇ ಎಸೆಯಲಾಗುತ್ತಿದ್ದು, ಇದರಿಂದ ಈ ಪರಿ ಸರವು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಾಡಾಗುವ ಸಂಭವವಿದ್ದು, ರೋಗ ಹರಡುವ ಭೀತಿ ಆವರಿಸಿದೆ.
ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆಯಿಲ್ಲ
ಗಂಗೊಳ್ಳಿ ಗ್ರಾ.ಪಂ. ವತಿಯಿಂದ ಕಳೆದ ಆಗಸ್ಟ್‌ನಲ್ಲಿ ಘನ-ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಆರಂಭಿಸಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ಕೇವಲ 210 ಮನೆಗಳಿಂದ ಹಸಿ- ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ಇರುವ 13 ವಾರ್ಡ್ ಗಳಲ್ಲಿ ಒಟ್ಟು 4,600 ಮನೆ ಹಾಗೂ ವಾಣಿಜ್ಯ ಮಳಿಗೆಗಳಿವೆ. ಅದರಲ್ಲಿ 275 ಅಂಗಡಿಗಳು, 10-12 ಹೊಟೇಲ್‌ಗಳು, 30 ಮಾಂಸದ ಅಂಗಡಿಗಳಿವೆ.
ಪಂ. ಸೂಕ್ತ ಕ್ರಮ ಕೈಗೊಳ್ಳಲಿ
ಇಲ್ಲಿ ಈಗ ಕಸದ ರಾಶಿಯೇ ಆಗಿದೆ. ಎಲ್ಲರೂ ಬಂದು ಇಲ್ಲಿ ಕಸ ಎಸೆದು ಹೋಗುತ್ತಾರೆ. ಪಂಚಾಯತ್‌ಗೂ ಈ ಬಗ್ಗೆ ಗೊತ್ತಿದ್ದರೂ, ಕಸ ಎಸೆಯದಂತೆ ಯಾವುದೇ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಎಸೆದ ಕಸವನ್ನು ವಿಲೇವಾರಿ ಮಾಡುವ ಕೆಲಸವನ್ನು ಕೂಡ ಅವರು ಮಾಡುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಗ್ರಾ.ಪಂ.ನವರು ಸೂಕ್ತ ಕ್ರಮಕೈಗೊಳ್ಳಲಿ.
– ದಿನೇಶ್ ನಾಯಕ್, ಮೇಲ್‌ಗಂಗೊಳ್ಳಿ
ಶೀಘ್ರ ಕಸ ವಿಲೆೇವಾರಿಗೆ ಕ್ರಮ
ಮೊದಲಿಗೆ 210 ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದ್ದು, ಈಗ ಅದನ್ನು 640 ಮನೆಗಳಿಗೆ ವಿಸ್ತರಿಸಲಾಗಿದೆ. ಪಂಚಾಯತ್‌ಗೆ ಕಸ ಸಂಗ್ರಹ ವಾಹನವೊಂದು ಸಿಕ್ಕರೆ ಎಲ್ಲ ಮನೆಗಳಿಂದಲೂ ತ್ಯಾಜ್ಯ ಸಂಗ್ರಹಿಸಲಾಗುವುದು. ಬ್ಯಾಂಕ್, ಉದ್ಯಮಿಗಳು ಅದನ್ನು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ಗ್ರಾ.ಪಂ. ವ್ಯಾಪ್ತಿಯ ಎಲ್ಲ ಕಡೆಗಳ ಕಸ ವಿಲೇವಾರಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು.
– ಮಾಧವ ಬಿ., ಗಂಗೊಳ್ಳಿ ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.