ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಸಾವು
Team Udayavani, Feb 9, 2018, 11:20 AM IST
ಬೈಂದೂರು: ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬೈಂದೂರಿನ ಅನುಷಾ ಗೌಡ (12) ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಕಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅರೆಶಿರೂರಿನ ಸಂಜೀವ ಗೌಡ ಅವರ ಪುತ್ರಿಯಾಗಿದ್ದ ಈಕೆಯ ಲಿವರ್ ನಿಷ್ಕ್ರಿಯಗೊಂಡಿದ್ದ ಕಾರಣ ಬದಲಿ ಲಿವರ್ ಜೋಡಣೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಲಿವರ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮನೆಗೆ ಕರೆತರಲಾಗಿತ್ತು.
ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಈಕೆಯ ಚಿಕಿತ್ಸೆಗಾಗಿ ಅನೇಕ ಮಂದಿ ನೆರವು ನೀಡಿದ್ದರು. ಬಾಲಕಿಗೆ ಉಡುಪಿ, ಮಣಿಪಾಲ, ಇತರೆಡೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬದಲಿ ಲಿವರ್ ಜೋಡಣೆಗಾಗಿ ಡಿ. 21ರಂದು ಜಿಲ್ಲಾಡಳಿತದಿಂದ ಝೀರೋ ಟ್ರಾಫಿಕ್ ವ್ಯವಸ್ಥೆಯೊಂದಿಗೆ ಮಂಗಳೂರಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆಕೆ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.