ಉಡುಪಿ: ಜೆನರಿಕ್‌ ಔಷಧ ಮಳಿಗೆ, ಇ-ಆಸ್ಪತ್ರೆ ಆರಂಭ

Team Udayavani, Mar 14, 2017, 11:24 AM IST

medical.jpg

ಉಡುಪಿ: ಸಮಾಜದ ಎಲ್ಲ ವರ್ಗದ ಜನರಿಗೆ ಸಹಾಯವಾಗುವಂತೆ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ದರದಲ್ಲಿ ಜೆನರಿಕ್‌ ಮಳಿಗೆ ಆರಂಭಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರಿಗೂ ಅನುಕೂಲವಾಗುವಂತೆ ಸಮರ್ಪಕ ಆರೋಗ್ಯ ಸೇವೆ ಕಡಿಮೆ ದರಧಿದಲ್ಲಿ ಸಿಗುವಂತಾಗಲು ಈ ಔಷಧ ಮಳಿಗೆ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಸೋಮವಾರ ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಹಿಂದುಸ್ತಾನ್‌ ಲೀವರ್‌ ಲಿಮಿಟೆಡ್‌ (ಎಚ್‌ಎಲ್‌ಎಲ್‌) ಕಂಪೆನಿ ಸಹಯೋಗದೊಂದಿಗೆ ಜನಸಂಜೀವಿನಿ (ಜೆನರಿಕ್‌) ಔಷಧ ಮಳಿಗೆಗೆ ಚಾಲನೆ ನೀಡಿ ಮಾತನಾಡಿದರು.

ವದಂತಿಗಳಿಗೆ ಕಿವಿಗೊಡಬೇಡಿ
ಕಡಿಮೆ ಬೆಲೆಯಲ್ಲಿ ಔಷಧ ಸಿಗುತ್ತದೆ ಎಂದು ಅದರ ಗುಣಮಟ್ಟದ ಬಗ್ಗೆ ಜನರು ಯಾವುದೇ ಅನುಮಾನ ಪಡುವುದು ಬೇಡ. ಯಾವುದೇ ರೀತಿಯ ವದಂತಿಗೆ ಕಿವಿಗೊಡಬೇಡಿ. ಉತ್ತಮ ಗುಣಮಟ್ಟದ ಔಷಧಗಳನ್ನೇ ಮಾರಾಟ ಮಾಡಲಾಗುವುದು. ಶೇ. 90ರಷ್ಟು ಕಡಿಮೆ ಬೆಲೆಯಲ್ಲಿ ಬಿಪಿ, ಮಧುಮೇಹ, ಡಯಾಬಿಟಿಸ್‌ ಹೀಗೆ ಎಲ್ಲ ವಿಧದ ಔಷಧಗಳು ಸಿಗಲಿವೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧ ನೀಡುವ ಯೋಜನೆ ಇದಾಗಿದ್ದು, ಯಾರೂ ಕೂಡ ಈ ಬಗ್ಗೆ ಅಪಪ್ರಚಾರ ಮಾಡುವುದು ಬೇಡ. ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆ ಕೊಡುವುದು ಸರಕಾರದ ಉದ್ದೇಶ. ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಚಿವರು ಮನವಿ ಮಾಡಿಕೊಂಡರು. 

13 ಗಂಟೆಗಳ ಸೇವೆ
ಜನಸಂಜೀವಿನಿ-ಜೆನರಿಕ್‌ ಔಷಧ ಮಳಿಗೆ ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೆ ಒಟ್ಟು 13 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಜನರ ಬೇಡಿಕೆ, ಸಹಕಾರ ನೋಡಿಕೊಂಡು ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲ ಈ ಸೇವೆ ಒದಗಿಸಲಾಗುವುದು. ಕೆಲ ಔಷಧ ಲಭ್ಯವಿಲ್ಲದಿದ್ದರೂ ಪ್ರತಿದಿನ ಅದನ್ನು ಬೇಡಿಕೆಗೆ ಅನುಗುಣವಾಗಿ ತರಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಇದರ ಸಹಭಾಗಿತ್ವ ವಹಿಸಿಕೊಂಡಿರುವ ಎಚ್‌ಎಲ್‌ಎಲ್‌ ಕಂಪೆನಿಯ ಮಣಿ ಮಿತ್ತಲ್‌ ಹೇಳಿದರು. 

ಡಯಾಬಿಟೀಸ್‌ಗೆ ಗ್ರಾಮಾರ್‌-ಎಂ ಮಾತ್ರೆಗೆ 95 ರೂ. ಬೆಲೆಯಿದ್ದು, ಕೇವಲ 18 ರೂ.ಗೆ ಸಿಗಲಿದೆ. ಬಿಪಿ ಮಾತ್ರೆ ಟೆಲ್ಮಾ-40 ಬೆಲೆ 64 ರೂ. ಆಗಿದ್ದು, 13 ರೂ.ಗೆ ಸಿಗಲಿದೆ. ಕ್ಯಾಲ್ಸಿಯಂಗೆ ಜೆಮ್ಸ್‌ಸನೋ 10 ಮಾತ್ರೆಗೆ 125 ರೂ. ಇದ್ದು, ಅದು ಕೇವಲ 9 ರೂ.ಗೆ ಸಿಗಲಿದೆ. ಅದರ ಜತೆಗೆ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಸರ್ಜಿಕಲ್‌ ಪರಿಕರಗಳು ಸಿಗಲಿವೆ. 

ಬ್ರಹ್ಮಾವರದಲ್ಲಿ  ಮೆಡಿಕಲ್‌ ಕಾಲೇಜು
ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಲಿದೆ. ಅದಕ್ಕಾಗಿ ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಇರುವ 150 ಎಕರೆ ಪ್ರದೇಶದಲ್ಲಿ 25 ಎಕರೆ ಮೆಡಿಕಲ್‌ ಕಾಲೇಜಿಗೆ ಜಾಗ ಕಾದಿರಿಸಲಾಗಿದೆ. ಈ ಬಜೆಟ್‌ನಲ್ಲಿ ಹಿಂದೆ ಮಂಜೂರಾದ ಮೆಡಿಕಲ್‌ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಸಿಎಂ ಹೇಳಿರುವುದರಿಂದ ಮುಂದಿನ ಬಜೆಟ್‌ನಲ್ಲಿ ಉಡುಪಿಯಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಇನ್ನು ಉಪ್ಪೂರಿನಲ್ಲಿ 40 ಕೋ.ರೂ. ವೆಚ್ಚದಲ್ಲಿ ಜಿಟಿಡಿಸಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು. 
ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ಸ್ವಾಗತಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ ವಂದಿಸಿದರು.

ರಾಜ್ಯದ ಮೊದಲ ಸರಕಾರಿ ಇ-ಆಸ್ಪತ್ರೆಗೆ ಚಾಲನೆ
ಅಜ್ಜರಕಾಡಿನ ಸರಕಾರಿ ಜಿಲ್ಲಾಸ್ಪತ್ರೆ ರಾಜ್ಯದ ಮೊದಲ ಸರಕಾರಿ ಇ-ಆಸ್ಪತ್ರೆಯಾಗಿ ಸೋಮವಾರ ಮಾರ್ಪಾಡಾಗಿದ್ದು, ಸಚಿವ ಪ್ರಮೋದ್‌ ಮಧ್ವರಾಜ್‌ ಚಾಲನೆ ನೀಡಿದರು. ಆಧಾರ್‌ ಕಾರ್ಡ್‌, ಫೋನ್‌ ನಂಬರ್‌, ಬಿಪಿಎಲ್‌ ಪಡಿತರ ಸಂಖ್ಯೆಯನ್ನು ಈ ಜಿಲ್ಲಾಸ್ಪತ್ರೆಯಲ್ಲಿ ನೋಂದಣಿ ಮಾಡಿದರೆ 6 ಡಿಜಿಟ್‌ ನಂಬರ್‌ ಕೊಡುತ್ತಾರೆ. ಇದರಿಂದ ಮುಂದೆ ಈ ಆಸ್ಪತ್ರೆ ಅಥವಾ ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಈ ನಂಬರ್‌ ನೀಡಿದರೆ ಸಾಕು ಅವರ ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಸಾರ್ವಜನಿಕರಿಗೆ, ರೋಗಿಗಳಿಗೆ ಯಾವುದೇ ರೀತಿಯ ಗೊಂದಲ, ತೊಂದರೆ ಉಂಟಾಗದಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು 16 
ವಿಭಾಗಗಳಲ್ಲಿ ಮೊದಲಿಗೆ 3 ವಿಭಾಗಗಳಲ್ಲಿ ಆನ್‌ಲೈನ್‌ ಸೇವೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಳರೋಗಿ ವಿಭಾಗ, ಹೊರರೋಗಿ ವಿಭಾಗ, ಬಿಲ್ಲಿಂಗ್‌ ವಿಭಾಗ ಸಂಪೂರ್ಣ ಪೇಪರ್‌ಲೆಸ್‌ ಆಗಲಿದೆ.

ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ: ಪ್ರಮೋದ್‌
ಇದುವರೆಗೆ ಉಡುಪಿ ಅಜ್ಜರಕಾಡಿನ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿದ್ದು, ಈಗ ಅದು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆ ಹೊಂದಿದೆ. ಇದರಿಂದ ವೈದ್ಯರು, ನರ್ಸ್‌ಗಳ ಸಂಖ್ಯೆ ಹೆಚ್ಚಳವಾಗಲಿದೆ. ಇದುವರೆಗೆ 124 ಇದ್ದ ಬೆಡ್‌ಗಳ ಸಂಖ್ಯೆ 250ಕ್ಕೆ ಏರಿಸಲಾಗಿದ್ದು, ಸದ್ಯ 190 ಬೆಡ್‌ಗಳಿವೆ. 27 ವೈದ್ಯರ ಅಗತ್ಯವಿದ್ದು, ಈಗಾಗಲೇ 26 ವೈದ್ಯರ ನೇಮಕಾತಿ ಮಾಡಲಾಗಿದೆ. ಅದೇ ರೀತಿ 16 ನರ್ಸ್‌ಗಳಿದ್ದು, 50ಕ್ಕೆ ಏರಿಸುವ ಅವಕಾಶವಿದೆ. ಅಲ್ಲದೆ ಉತ್ತಮ ಸೌಲಭ್ಯ, ಹೆಚ್ಚುವರಿ ಅನುದಾನ ಕೂಡ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಟಾಪ್ ನ್ಯೂಸ್

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.