ಗಿಫ್ಟ್ ಆಫರ್, ಬ್ಯಾಂಕ್ ಎಟಿಎಂ ಪಿನ್ ಕರೆ ತಿರಸ್ಕರಿಸಿ: ಎಸ್.ಪಿ.
Team Udayavani, Sep 10, 2017, 7:00 AM IST
ಉಡುಪಿ: ಎಸ್ಪಿ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ 4ನೇ ವಾರದ ಫೋನ್-ಇನ್ ಕಾರ್ಯಕ್ರಮವು ಶನಿವಾರ ನಡೆಯಿತು. ಮೊಬೈಲಿಗೆ ಬಹುಮಾನ ಕರೆ, ಈ-ಮೇಲ್, ಬ್ಯಾಂಕಿನ ಅಧಿಕಾರಿಗಳೆಂದು ಹೇಳಿ ಎಟಿಎಂ ಪಿನ್ ನಂಬರ್ ಕೇಳಿದವರಿಗೆ ಕೊಡಬಾರದು. ಬ್ಯಾಂಕಿನವರು ಕರೆ ಮಾಡಿ ಮಾಹಿತಿ ಪಡೆಯುವುದೇ ಇಲ್ಲ. ಮುಖ್ಯವಾಗಿ ನಿದ್ದೆಯ ಮಂಪರಿನಲ್ಲಿರುವಾಗ ಮುಂಜಾನೆಯ ಹೊತ್ತು ಕರೆ ಬರುತ್ತದೆ. ಮೊಬೈಲ್ ಗ್ರಾಹಕರು ಅಂತಹ ಕರೆಗಳನ್ನು ತಿರಸ್ಕರಿಸಬೇಕು ಎಂದು ಎಸ್ಪಿ ಡಾ| ಸಂಜೀವ ಎಂ. ಪಾಟೀಲ್ ಅವರು ಹೇಳಿದರು.
ಮೊಬೈಲ್ ಕರೆ, ಮೆಸೇಜುಗಳ ಮೂಲಕ ಮೋಸಗೊಳಿಸುವವರು ಹೆಚ್ಚುತ್ತಿದ್ದಾರೆ. ಇಂತಹ ಕರೆ, ಮೆಸೇಜುಗಳನ್ನು ತಿರಸ್ಕರಿಸುವುದೇ ಇದಕ್ಕೆ ಪರಿಹಾರವಾಗಿದೆ. ಯಾವುದೇ ಕಾರಣಕ್ಕೂ ಅಂತಹ ಮೊಬೈಲ್ ಕರೆಗೆ ಮಾಹಿತಿ ಕೊಡಬೇಡಿ ಎಂದು ಎಸ್ಪಿ ತಿಳಿಸಿದರು.
ಗಂಗೊಳ್ಳಿ, ಕೋಟ, ಉಡುಪಿ ನಗರ ಮಟ್ಕಾ ಹಾವಳಿ ಹಾಗೂ ಬೈಂದೂರು ಗಾಂಜಾ ಮಾರಾಟದ ಬಗ್ಗೆ ದೂರು ಬಂದಿತ್ತು. ಮಲ್ಪೆ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ಕಿರಿಕಿರಿ, ಮೀಟರ್ ಬಡ್ಡಿ ಬಗ್ಗೆ, ಹಳ್ಳಿಹೊಳೆಯಲ್ಲಿ ಅಕ್ರಮ ಮದ್ಯ ಮಾರಾಟ, ಬ್ರಹ್ಮಾವರ ಅಕ್ರಮ ಮರಳುಗಾರಿಕೆ, ಸೋಲಾರ್ ಬ್ಯಾಟರಿ ಕಳ್ಳತನವಾಗುತ್ತಿರುವ ಬಗ್ಗೆ, ಜನ್ನಾಲು ಶಾಲೆ ಸಮೀಪ ಇರುವ ಕಲ್ಲುಕೋರೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ, ಕೊಲ್ಲೂರು ಅಕ್ರಮ ಮದ್ಯ ಮಾರಾಟ.
ಸಂಚಾರ, ಪಾರ್ಕಿಂಗ್ ಸಮಸ್ಯೆ
ಶನಿವಾರ ಬಂದ 26 ಕರೆಗಳ ಪೈಕಿ ಸಂಚಾರ, ಪಾರ್ಕಿಂಗ್ ಸಮಸ್ಯೆ ಕುರಿತು ಹೆಚ್ಚಿನ ದೂರುಗಳು ಬಂದಿದ್ದವು. ಬ್ರಹ್ಮಾವರ ಆಕಾಶವಾಣಿ ಸರ್ಕಲ್ ಬಳಿ ಸಂಚಾರಕ್ಕೆ ತೊಂದರೆ, ಬ್ರಹ್ಮಾವರ ರಥಬೀದಿಯಲ್ಲಿ ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು, ಉದ್ಯಾವರ ಗುಡ್ಡೆಯಂಗಡಿ ಬಲಾಯಿಪಾದೆಯಲ್ಲಿ ಸಂಚಾರ ಸಮಸ್ಯೆ, ಸಚಿವರ ಕಾರ್ಯಾಲಯ ಎದರು ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್, ಉಡುಪಿ ಪೈ ಇಂಟರ್ ನ್ಯಾಷನಲ್-ಉಡುಪಿ ಸಂಚಾರ ಠಾಣೆವರೆಗೆ ಎರಡೂ ಕಡೆ ಪಾರ್ಕಿಂಗ್, ಆಶೀರ್ವಾದ್-ಮಲ್ಪೆ ರಸ್ತೆಯಲ್ಲಿ ಟ್ರಾನ್ಸ್ಪೊàರ್ಟ್ ಏಜೆನ್ಸಿಯಿಂದ ರಸ್ತೆ ಸಂಚಾರಕ್ಕೆ ತೊಂದರೆ, ಮಣಿಪಾಲ ಆರ್ಎಸ್ಬಿ ಸಭಾ ಭವನ ಬಳಿ ಟ್ರಾಫಿಕ್ ಜಂಕ್ಷನ್ಗೆ ಆಗ್ರಹ, ಸೂಚನಾ ಫಲಕ ಅಳವಡಿಸದೆ ಅಪಾಯಕಾರಿಯಾಗಿ ಬಿಟ್ಟಿರುವುದು. ಇಡೂರು-ಕುಂಜಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಪಾಯಕಾರಿ ತಿರುವು, ಕೂರಾಡಿ ಕೊಕ್ಕರ್ಣೆ ಮಧ್ಯೆ ಬೆಳಗ್ಗಿನ ಅವಧಿಯಲ್ಲಿ ಬಸ್ ಸಂಚಾರ ಹೆಚ್ಚಿಸುವ ಬಗ್ಗೆ, ಶಿರ್ವ ಕುಂಜಾರುಗಿರಿ ಬಸ್ ವೇಳಾಪಟ್ಟಿ ಸರಿಯಿರುವುದಿಲ್ಲ ಮತ್ತು ಬಸ್ ಸಂಚಾರ ಹೆಚ್ಚಿಸುವ ಬಗ್ಗೆ, ಅಂಬಲಪಾಡಿ ಸರ್ವಿಸ್ ರೋಡ್ನಲ್ಲಿ ವಾಹನ ನಿಲುಗಡೆ ಮಾಡುತ್ತಿರುವ ಬಗ್ಗೆ, ಸಿಂಡಿಕೇಟ್ ಬ್ಯಾಂಕ್ ಕೆಥೊಲಿಕ್ ಸೆಂಟರ್-ಟೀಚರ್ಸ್ ಟ್ರೈನಿಂಗ್ ಶಾಲೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ, ಉಪ್ಪುಂದ ಪೇಟೆಯಲ್ಲಿ ಮೀನು ಮಾರ್ಕೆಟ್ ಬಳಿ ಪಾರ್ಕಿಂಗ್ ಹಾಗೂ ಮುದ್ದೂರು ಕೂರಾಡಿಗೆ ಬೆಳಗ್ಗೆ ಬಸ್ ಪರ್ಮಿಟ್ ಇದ್ದರೂ ಬಸ್ ಬಿಡುತ್ತಿಲ್ಲ ಎನ್ನುವ ದೂರುಗಳು ಬಂದವು.
ಬ್ಲೂವೇಲ್ ಗೇಮ್ ಬಗ್ಗೆ ಪ್ರಕಟನೆ
ಬ್ಲೂವೇಲ್ ಗೇಮ್ ಬಗ್ಗೆ ಆಯಾ ಶಾಲೆಗಳ ನೊಟೀಸು ಬೋರ್ಡಿನಲ್ಲಿ ಪ್ರಕಟನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದರು.ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ, ಡಿಸಿಐಬಿ ಇನ್ಸ್ಪೆಕ್ಟರ್ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಅಕ್ರಮ ಗಣಿಗಾರಿಕೆ: ಮನೆಗಳಿಗೆ ಹಾನಿ
ಶಂಕರನಾರಾಯಣ 74ನೇ ಉಳ್ಳೂರಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬಂಡೆ ಒಡೆಯುತ್ತಿರುವುದರಿಂದ ಮನೆಗಳಿಗೆ ಹಾನಿ, ಕೋಟ ಸಾಸ್ತಾನದಲ್ಲಿ ಲಾರಿಯಲ್ಲಿ ಮರಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ತುಂಬುತ್ತಿರುವ ಬಗ್ಗೆ, ಗಂಗೊಳ್ಳಿ ಆಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಅನಂತರ ಹೊಂಡಕ್ಕೆ ಯಾವುದೇ ರೀತಿಯ ತಡೆಗೋಡೆ ನಿರ್ಮಿಸದಿರುವ ಬಗ್ಗೆ ದೂರು ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.