ಬಿಇಒ ಕಚೇರಿಗೆ ಹೊಸ ಕಟ್ಟಡದ ಮೆರುಗು
Team Udayavani, Mar 23, 2019, 12:30 AM IST
ವಿಶೇಷ ವರದಿ- ಕಾರ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಮೂಲಕ ಬಿಇಒ ಕಚೇರಿ ಸ್ವಂತ ಕಟ್ಟಡ ಹೊಂದಲಿದೆ. ಮೆಸ್ಕಾಂ ಕಚೇರಿ ಮುಂಭಾಗ ನಿರ್ಮಾಣವಾಗುತ್ತಿರುವ ಈ ಕಟ್ಟಡದ ಕಾಮಗಾರಿ ಎಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದೆ.
67 ಲಕ್ಷ ರೂ. ವೆಚ್ಚ
ನಿರ್ಮಿತಿ ಕೇಂದ್ರ ಅನುಷ್ಠಾನ ಸಂಸ್ಥೆಯ ಉಸ್ತುವಾರಿಯಲ್ಲಿ ನೂತನ ಕಟ್ಟಡವು 67 ಲಕ್ಷ ರೂ. ವೆಚ್ಚದಲ್ಲಿ 3200 ಚದರಡಿ ವಿಸ್ತೀರ್ಣದೊಂದಿಗೆ ನಿರ್ಮಾಣವಾಗುತ್ತಿದೆ. ಬಿಇಒ ಕಚೇರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಶಿಕ್ಷಣ ಸಂಯೋಜಕರ, ಸೂಪರಿಂಟೆಂಡೆಂಟ್, ಮ್ಯಾನೇಜರ್, ಕೇಸ್ ವರ್ಕರ್ ಕಚೇರಿ, ರೆಕಾರ್ಡ್ ರೂಂ, ಶೌಚಾಲಯ, ವೀಕ್ಷಕರ ಹಾಲ್ ಇರಲಿದೆ.
ಶಿಥಿಲಾಸ್ಥೆಯಲ್ಲಿದೆ ಪ್ರಸ್ತುತ ಕಟ್ಟಡ
ಬಿಇಒ ಹಳೆ ಕಚೇರಿ ಕಾರ್ಕಳ ಬಸ್ ಸ್ಟಾಂಡ್ ಬಳಿಯಿತ್ತು. ತೀರಾ ಹಳೆ ಕಟ್ಟಡವಾಗಿದ್ದ ಕಾರಣ ಆ ಕಟ್ಟಡವನ್ನು ಪುರಸಭೆ ಕೆಡವಿತ್ತು. ಅನಂತರ 2009ರ ಬಳಿಕ ತಾಲೂಕು ಕಚೇರಿಯ ಹಳೆ ಕಟ್ಟಡದಲ್ಲಿ ಬಿಇಒ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಇಲಾಖೆಯ ಆಡಳಿತ ಯಂತ್ರ ಎಂದೆನಿಸಿರುವ ಇಲ್ಲಿ ಕೆಲವೊಂದು ಮೂಲಭೂತ ಸೌಕರ್ಯಗಳೇ ಇಲ್ಲ. ಅದಲ್ಲದೇ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ದುಃಸ್ಥಿತಿಯಲ್ಲಿತ್ತು. ಇದೀಗ ಹೊಸ ಕಟ್ಟಡ ನಿರ್ಮಾಣದೊಂದಿಗೆ ಕಾರ್ಕಳ ಬಿಇಒ ಕಚೇರಿಗೆ ಹೊಸ ಮೆರುಗು ದೊರೆಯುತ್ತಿದೆ.
ಸ್ಟೇರ್ ಕೇಸಿಂಗ್
ಸದ್ಯ ನೆಲ ಅಂತಸ್ತಿನ ಕಟ್ಟಡವಾಗಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಹಾಲ್ ಬೇಕಾದಲ್ಲಿ ಮೇಲಂತಿಸ್ತಿನಲ್ಲಿ ತೆರೆಯುವ ನಿಟ್ಟಿನಲ್ಲಿ ಸ್ಟೇರ್ ಕೇಸ್ ರಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.