ದೇಶಿ ಭಿನ್ನ ಚೇತನರಿಗಾಗಿ ಮಿಡಿಯುವ ವಿದೇಶೀ ಮಾತೃಹೃದಯ


Team Udayavani, Mar 8, 2018, 12:40 PM IST

acharane.jpg

ಕುಂದಾಪುರ: ಅಮ್ಮ ಎಂಬ ಎರಡಕ್ಷರವೇ ಎಲ್ಲ ನೋವುಗಳಿಗೆ ಸಾಂತ್ವನದ ದಿವೌÂಷಧ. ಎದೆಯಾಳದ ಪ್ರೀತಿ ಮಮತೆಯನ್ನು ನಿಷ್ಕಲ್ಮಶವಾಗಿ ಧಾರೆ ಎರೆಯುವುದು ತಾಯಿ ಮಾತ್ರ. ಪಾಲನೆಗೆ ಸವಾಲಾದ ವಿಶಿಷ್ಟ ಚೇತನ, ಬುದ್ಧಿಮಾಂದ್ಯ ಮಕ್ಕಳನ್ನು 11 ವರ್ಷಗಳಿಂದ ಅಮ್ಮನಂತೆ ಸಲಹುತ್ತಿರುವವರು ವಿದೇಶಿ ಮಹಿಳೆಯೊಬ್ಬರು. ಈ ಕನಸಿಗೆ ಮತ್ತಷ್ಟು ವಿದೇಶಿ ಮಹಿಳೆಯರು ವರ್ಷವಿಡೀ ಬಣ್ಣವಾಗಿ ತುಂಬಿಕೊಳ್ಳುತ್ತಾರೆ. ಜತೆಗೆ ಸ್ಥಳೀಯರ ಸಾಥ್‌ ಇಡೀ ಕನಸನ್ನೇ ವರ್ಣರಂಜಿತಗೊಳಿಸಿದೆ.

ಕೋಣಿಯ ಮಾನಸಜ್ಯೋತಿ ವಿಶೇಷ ಶಾಲೆಯ ಒಳ ಹೊಕ್ಕರೆ ಅನುಭವಕ್ಕೆ ಬರುವುದು ಕರುಣಾ ಸೆಲೆಯ ಆದ್ರìತೆಯಷ್ಟೇ ಹೊರತು ದೇಶ-ವಿದೇಶವೆಂಬ ಭಾವವಲ್ಲ.

ನಾವೂ ಬಡವರೇ
ಹಾಲೆಂಡ್‌ನ‌ ಮಾರ್ಜೆ ವನ್‌ ಡೆನ್‌ ಬ್ರಾಂಡ್‌ ಈಗ ಕುಂದಗನ್ನಡ ಕಲಿತಿದ್ದು, ಉದಯವಾಣಿ ಜತೆ ಮಾತನಾಡುತ್ತಾ, ನಾನೇನೂ ಸಿರಿವಂತ ಕುಟುಂಬದಿಂದ ಬಂದವಳಲ್ಲ. ನನ್ನ ಅಮ್ಮ ಫಿಸಿಯೋಥೆರಪಿಸ್ಟ್‌. ನಾನು ಫಿಸಿಯೋಥೆರಪಿ, ಮನಶಾÏಸ್ತ್ರ ಕಲಿತಿದ್ದೇನೆ. ಅಧ್ಯಯನ ಪ್ರವಾಸಕ್ಕೆಂದು ಭಾರತಕ್ಕೆ ಬಂದಾಗ ಇಲ್ಲಿಯ ಜಪ್ತಿಯಲ್ಲಿದ್ದ ಮಾನಸ ಜ್ಯೋತಿ ಶಾಲೆಯನ್ನು ಗಮನಿಸಿದೆ. ಅನಂತರ ಅಮ್ಮನ ಬಳಿ ಅನುಮತಿ ಕೇಳಿ 1 ವರ್ಷ ಬುದ್ಧಿಮಾಂದ್ಯ, ಭಿನ್ನ ಸಾಮರ್ಥ್ಯದ ಮಕ್ಕಳ ಶುಶ್ರೂಷೆ, ಆರೈಕೆ, ಸೇವೆ ಮಾಡಲು ಅನುಮತಿ ಪಡೆದೆ. 11 ವರ್ಷಗಳಾದವು. ಇಂತಹವರ ಆರೈಕೆ, ಚಟುವಟಿಕೆಗಳಿಗೆ ಇಲ್ಲಿನ ದಾನಿಗಳ ಅನುದಾನ ಸಾಕಾಗದು. ದೊಡ್ಡಮಟ್ಟದಲ್ಲಿ ಕೊಡಲು ನಮ್ಮ ಮನೆಯವರೂ ಮಧ್ಯಮ ವರ್ಗ ಕುಟುಂಬಿಕರು. ಹಾಗಾಗಿ ನನ್ನ ಪರಿ ಚಿತರ ಮೂಲಕ ವಿದೇಶದಲ್ಲಿರುವ ಸಮರ್ಥ ರನ್ನು ಸ್ವಯಂಸೇವೆಗೆ ಆಹ್ವಾನಿಸುತ್ತಿದ್ದೇನೆ ಎನ್ನುತ್ತಾರೆ ಅವರು.

ಶ್ರೀಮಂತರಿಗೆ ದಾಖಲಾತಿ ಇಲ್ಲ
ಈಗ ಶಾಲೆ ಕೋಣಿ ಎಂಬಲ್ಲಿ ಮೂರೂರು ದೇವಸ್ಥಾನ ರಸ್ತೆಯಲ್ಲಿದೆ. ನಿವೇದಿತಾ ಗಣಪಯ್ಯ ಮಧ್ಯಸ್ಥ  ಅವರು ಅವಳಿಮನೆ ಹಾಗೂ ಜಾಗವನ್ನು ನೀಡಿದ್ದಾರೆ. ವಿವಿಧ ದಾನಿಗಳ ಮೂಲಕ ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಕುಂದಾಪುರ, ಭಟ್ಕಳ, ಕೋಲಾರ, ಬ್ರಹ್ಮಾವರ, ತೀರ್ಥಹಳ್ಳಿ, ಪಡು ಬಿದ್ರೆ ಮತ್ತಿತರ ಕಡೆಯ 19 ಮಕ್ಕಳಿದ್ದಾರೆ.

ಮೂರೂವರೆ ವರ್ಷದ ಶಿವರಾಜ್‌ನಿಂದ ತೊಡಗಿ 20 ವರ್ಷ ದಾಟಿದವರೂ ಇದ್ದಾರೆ. ಇವರೆಲ್ಲರಿಗೂ ಉಚಿತ ಊಟ, ವಸತಿ ಹಾಗೂ ಅಗತ್ಯ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಬಡವರು. ಡೊನೇಶನ್‌ ಕೊಟ್ಟರೂ ಶೀÅಮಂತರ ಮಕ್ಕಳಿಗೆ ಇಲ್ಲಿ ಅವಕಾಶವಿಲ್ಲ. ನಮ್ಮದು ಸೇವೆ ಮಾತ್ರ ಕೆಲಸ ಅಲ್ಲ ಎನ್ನುತ್ತಾರೆ ಆಡಳಿತಾಧಿಕಾರಿ ಶೋಭಾ ಮಧ್ಯಸ್ಥ.

ವಿದೇಶೀ ಮಾತೆಯರು
ನೆದರ್‌ಲ್ಯಾಂಡ್‌, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಬ್ರೆಜಿಲ್‌ ಮೊದಲಾದ ದೇಶಗಳಿಂದ ಮಹಿಳೆಯರು ಇಲ್ಲಿನ ಮಕ್ಕಳ ಸೇವೆಗಾಗಿ ಸಮಯ ಮೀಸಲಿಟ್ಟು ಬರುತ್ತಾರೆ. ಹೀಗೆ ಬಂದು ಮಕ್ಕಳಿಗೆ ತರಬೇತಿ ನೀಡುತ್ತಿರುವ ಹಾಲೆಂಡಿನ ಸಸ್ಟಿಯಾ (70) ಅವರು, ಕಳೆದ ವರ್ಷ ಬಂದಿದ್ದೆ. ಮಾನಸಿಕ ಖನ್ನತೆಯ ಮಕ್ಕಳಿಗೆ ತರಬೇತಿ ಕೊಡುವುದರಲ್ಲಿ ಸಿಗುವ ಮಾನಸಿಕ ನೆಮ್ಮದಿಯೇ ಬೇರೆ. ಇದರಲ್ಲೇ ನಾವು ಖುಷಿ ಕಾಣುತ್ತೇವೆ. ಆದ್ದರಿಂದ ಈ ವರ್ಷ ಮರಳಿ ಬಂದಿದ್ದೇನೆ ಎನ್ನುತ್ತಾರೆ.

ಮಕ್ಕಳಿಗೆ ತರಬೇತಿ ನೀಡುತ್ತಿದ್ದು ಮಾತನಾಡಲು ಸಮಯವಿಲ್ಲವೆಂದು ನಯವಾಗಿ ನಿರಾಕರಿಸಿ ಕೆಲಸದ ಮೇಲಿನ ಬದ್ಧತೆ, ಮಕ್ಕಳ ಮೆಲೆ ಕಕ್ಕುಲಾತಿ ತೋರಿಸಿದ್ದು ಇಂಗ್ಲೆಂಡಿನ ಫ್ರಾಂಕಿ.  

ಉಚಿತ ಚಿಕಿತ್ಸೆ
ನಮ್ಮಲ್ಲಿ ಜಾತಿ ಧರ್ಮದ ಭೇದವಿಲ್ಲ. ಎಲ್ಲ ವರ್ಗದವರೂ ಇದ್ದಾರೆ. ದೊಡ್ಡ ಆಸ್ಪತ್ರೆಗಳಲ್ಲಿ ಫಿಸಿಯೋಥೆರಪಿ ಅವಶ್ಯವಿದ್ದರೂ ಹೋಗಲಾರದ ಬಡವರ ಮಕ್ಕಳಿಗೆ ಇಲ್ಲಿ ಉಚಿತವಾಗಿ ಫಿಸಿಯೋಥೆರಪಿ ನೀಡಲಾಗು ತ್ತಿದೆ ಎನ್ನುತ್ತಾರೆ ಮ್ಯಾನೇಜರ್‌ ಚೇತನಾ ಹೆಗ್ಡೆ.

ಪವಾಡ ಮಾಡಿದ ವಿಘ್ನೇಶ
ಇನ್ನೆರಡು ತಿಂಗಳು ತಡವಾಗುತ್ತಿದ್ದರೆ ಶಂಕರನಾರಾಯಣದ ಗಾವಳಿಯ ವಿಘ್ನೇಶ ಎಂಬ ಬಾಲಕ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಮಾತು ಬರುತ್ತಿರಲಿಲ್ಲ. ನಡೆಯಲಾಗುತ್ತಿರಲಿಲ್ಲ. ಕಾಯಿಲೆಯಿಂದ ಬಳಲುತ್ತಿದ್ದ. ಈಗ 7 ವರ್ಷವಾಯಿತು. ಇಲ್ಲಿನ ತರಬೇತಿಯಿಂದ ಮಾತನಾಡುತ್ತಾನೆ, ಆರೋಗ್ಯದಿಂದಿದ್ದಾನೆ, ನಡೆಯುತ್ತಾನೆ. ಚಟುವಟಿಕೆಯಿಂದ ಇದ್ದಾನೆ. ಎಂಡೋ ಪೀಡಿತೆ ಸಂತ್ರಸ್ತೆ ಪಡುಬಿದ್ರೆಯ ವಿದ್ಯಾ ಶೆಣೈ ಎಸೆಸೆಲ್ಸಿ ಪರೀಕ್ಷೆ ಬರೆದಿರುವುದು ವಿಶೇಷ.

ಧನ್ಯತೆ ಪಡೆದಿದ್ದೇನೆ
ಈ ಮಕ್ಕಳ ಬೆಳವಣಿಗೆ ಯನ್ನು ನೋಡುತ್ತಲೇ ಎಲ್ಲ ಕಹಿ ಅನುಭವಗಳನ್ನು ಮರೆಯು ತ್ತಿದ್ದೇನೆ. ಇಂತಹ ಮಕ್ಕಳ ಸೇವೆ ಮೂಲಕ ಧನ್ಯತೆ ಪಡೆದಿದ್ದೇನೆ.
– ಮಾರ್ಜೆ ವನ್‌ ಡೆನ್‌ ಬ್ರಾಂಡ್‌, ಹಾಲೆಂಡ್‌

ವೈದ್ಯರ ಸಹಕಾರ
2000ದಲ್ಲಿ ಪ್ರಾರಂಭವಾದ ಮಾನಸ ಜ್ಯೋತಿ ಟ್ರಸ್ಟಿಗೆ ಈಗ ಅಧ್ಯಕ್ಷ ರಾಗಿ ಡಾ|ಬಿ.ವಿ.ಉಡುಪ, ಕಾರ್ಯದರ್ಶಿಯಾಗಿ ಪಿ. ಪ್ರಭಾಕರ ಪೈ, ಕೋಶಾಧಿಕಾರಿಯಾಗಿ ಬಿ.ಶೀÅನಿವಾಸ ಉಡುಪ ಹಾಗೂ ಟ್ರಸ್ಟಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕುಂದಾಪುರದ ಎಲ್ಲ ವೈದ್ಯರೂ ಈ ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.