ಆಧುನಿಕ ನಾಗಬನಕ್ಕೆ ಹೂಬಳ್ಳಿಗಳ ಮೆರುಗು
Team Udayavani, Aug 4, 2019, 5:54 AM IST
ಬೆಳ್ಮಣ್: ಆಧುನಿಕತೆ ನೆಪದಲ್ಲಿ ನಾಗಬನಗಳ ಮರಗಳನ್ನು ಕಡಿದು ಕಾಂಕ್ರೀಟೀಕರಣಗೊಳಿಸುತ್ತಿರುವ ಕಾಲದಲ್ಲಿ ಮುಂಡ್ಕೂರಿನಲ್ಲೊಂದು ನಾಗ ಬನಕ್ಕೆ ಬಗೆ ಬಗೆಯ ಹೂ-ಬಳ್ಳಿಗಳನ್ನು ಬಿಡಲಾಗಿದೆ. ಕಿನ್ನಿಗೋಳಿ-ಬೆಳ್ಮಣ್ ಮುಖ್ಯ ರಸ್ತೆಯ ಸಂಕಲಕರಿಯದ ಪಕ್ಕ ಕಾಣ ಸಿಗುವ ಈ ನಾಗಬನ ಆಕರ್ಷಣೆಗೆ ಕಾರಣವಾಗಿದೆ.
ಮುಂಡ್ಕೂರಿನ ಈ ಪುರಾತನ ನಾಗಬನವನ್ನು ಕಳೆದ 5 ವರ್ಷಗಳ ಹಿಂದೆ ನವೀಕರಿಸಿದಾಗ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿತ್ತು. ಬಳಿಕ ಬೇಸಗೆ ಕಾಲದಲ್ಲಿ ಈ ನಾಗಸನ್ನಿಧಿಯ ನಾಗ ಕಲ್ಲುಗಳಿಗೆ ನೇರ ಬಿಸಿಲು ಬೀಳುವುದನ್ನು ಕಂಡ ಈ ನಾಗ ಮೂಲದ ಮುಂಡ್ಕೂರು ದೊಡ್ಡಮನೆ ಕುಟುಂಬಿಕರಾದ ರೂಪರಾಜ ಶೆಟ್ಟಿ ಎಂಬವರು ಈ ನಾಗಬನಕ್ಕೆ ಹೂಬಳ್ಳಿಗಳನ್ನು ಬಿಡಲು ಆಲೋಚಿಸಿದರು. ಅದರಂತೆ ಬಳ್ಳಿಗಳಲ್ಲಿ ಪರಿಮಳದ ಹೂಗಳು ಅರಳಿದ್ದು ಇಡೀ ಪರಿಸರ ಸುವಾಸನೆಯಿಂದ ಕೂಡಿದೆ. ಇದೇ ಕುಟುಂಬಕ್ಕೆ ಸೇರಿದ ಇನ್ನೊಂದು ನಾಗಬನದಲ್ಲಿಯೂ ಇದೇ ರೀತಿ ಹೂಬಳ್ಳಿಗಳನ್ನು ಬಿಡಲಾಗಿದೆ.
ಈ ಎರಡೂ ನಾಗಬನಗಳ ಹೂಗಿಡ ಗಳ ನಿರ್ವಹಣೆಯನ್ನು ಲಕ್ಷ್ಮೀ ರೈ ಎಂಬವರು ನಡೆಸುತ್ತಿದ್ದು ಬೇಸಗೆಯಲ್ಲಿ ಈ ಬಳ್ಳಿಗಳಿಗೆ ನೀರುಣಿಸುವ ಕಾಯಕ ದಲ್ಲಿ ತೊಡಗುತ್ತಾರೆ. ನಾಗಬನ ಆಧುನಿಕತೆಯ ಸ್ಪರ್ಶ ಕಂಡರೂ ಹೂ ಬಳ್ಳಿಗಳಿಂದ ಕೂಡಿ ತಂಪಾಗಿರುವುದು ಇತರ ನಾಗಬನಗಳಿಗೆ ಮಾದರಿ.
ನಾಗಬನ ಕಡಿಯಬಾರದು
ನಾಗಬನಗಳನನ್ನು ಕಡಿಯುವುದೇ ಅಪರಾಧ, ಕಡಿದರೆ ನಾಗರ ಕಲ್ಲುಗಳಿಗೆ ಬಿಸಿಲು ಬೀಳದಂತೆ ರಕ್ಷಿಸುವುದೂ ನಮ್ಮ ಧರ್ಮ. ಇಲ್ಲಿ ಬಗೆಬಗೆಯ ಹೂಗಳಿಂದ ನಾಗ ಸನ್ನಿಧಿಯ ವಾತಾವರಣ ಪರಿಮಳ ಹಾಗೂ ತಂಪಿನಿಂದ ಕೂಡಿದೆ.
-ಡಾ| ಎನ್.ಎಸ್. ಶೆಟ್ಟಿ , ಅಧ್ಯಕ್ಷರು, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.