ಸೇಕ್ರೇಡ್ ಹಾರ್ಟ್ ಚರ್ಚ್: ಶುಭ ಶುಕ್ರವಾರ ಆಚರಣೆ
Team Udayavani, Apr 20, 2019, 6:10 AM IST
ಉಡುಪಿ : ಯೇಸುಕ್ರಿಸ್ತರು ಶಿಲುಬೆಗೆ ಏರಿ ಮರಣ ಹೊಂದಿದ ದಿನವಾದ ಶುಭ ಶುಕ್ರವಾರ ಅಥವಾ ಗುಡ್‌ಫ್ರೈಡೆಯನ್ನು ಕೊಳಲಗಿರಿಯ ಸೇಕ್ರೇಡ್ ಹಾರ್ಟ್ ಚರ್ಚಿನಲ್ಲಿ ಪ್ರಾರ್ಥನಾ ವಿಧಿಯ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು.
ಚರ್ಚಿನ ಧರ್ಮಗುರು ಅನಿಲ್ ಪ್ರಕಾಶ್ ಡಿ ಸಿಲ್ವಾ , ಸಹಾಯಕ ಧರ್ಮಗುರು ಜೆರಾಲ್ಡ… ಸಂದೀಪ್ ನೇತೃತ್ವದಲ್ಲಿ ಐಸಿವೈಎಂ ಸಂಘಟನೆಯ ಸಹಭಾಗಿತ್ವದೊಂದಿಗೆ ಯುವಕರು ಮತ್ತು ಇತರರು ಸೇರಿ ಒಟ್ಟು 50 ಮಂದಿ ಕಲಾವಿದರು ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆಸಾಗಿ ಅಲ್ಲಿ ಶಿಲುಬೆಗೆ ಏರಿ ಮರಣವನ್ನಪ್ಪುವ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಅವಲೋಕಿಸಿ ಪ್ರಾರ್ಥಿಸುತ್ತಾ ಸಾಗುವ ಶಿಲುಬೆಯ ಹಾದಿಯ ಪ್ರಕ್ರಿಯೆಯನ್ನು ನಟನೆಯ ಮೂಲಕ ಚರ್ಚಿನ ಮೈದಾನದಲ್ಲಿ ನಡೆಸಿಕೊಟ್ಟರು.
ಈ ಮೂಲಕ ಕ್ರೈಸ್ತ ಭಕ್ತಾದಿಗಳಿಗೆ ಯೇಸು ಶಿಲುಬೆಯ ಹಾದಿಯಲ್ಲಿ ಅನುಭವಿಸಿದ ಕಷ್ಟ , ನೋವು, ಯಾತನೆ, ಮರಣವನ್ನು ತೋರಿಸಿಕೊಡುವ ವಿಶಿಷ್ಟ ಪ್ರಯತ್ನ ಮಾಡಲಾಯಿತು. ಜಿÇÉೆಯ ಎÇÉಾ ಚರ್ಚುಗಳಲ್ಲಿ ಬಲಿಪೂಜೆಯ ಬದಲು ಯೇಸುವಿನ ಶಿಲುಬೆಯ ಹಾದಿಯನ್ನು ಸಂಪೂರ್ಣವಾಗಿ ಪರಿಚಯಿಸುವ ಹೊಸ ಒಡಂಬಡಿಕೆಯ ಪವಿತ್ರ ಬೈಬಲಿನ ಪಠಣಗಳು ಕೂಡ ನಡೆಸಲಾಯಿತು.
ಸುಮಾರು 350 ಕ್ಕೂ ಅಧಿಕ ಭಕ್ತಾದಿಗಳು ಉರಿ ಬಿಸಿಲಿನ ದಣಿವಿನ ಅರಿವಿಲ್ಲದೆ ಭಕ್ತಿ ಕಾರ್ಯಕ್ರಮದಲ್ಲಿ
ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.