ಉತ್ತಮ ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಸೋದೆ ಶ್ರೀ
ಬಂಟಕಲ್ ತಾಂತ್ರಿಕ ಕಾಲೇಜು ಪದವಿ ಪ್ರದಾನ
Team Udayavani, Nov 8, 2021, 5:19 AM IST
ಶಿರ್ವ: ವಿದ್ಯಾರ್ಥಿಗಳು ವಿದ್ಯೆ, ಬುದ್ಧಿ, ಧರ್ಮ, ಗುಣ, ನಡತೆ ಹೊಂದಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುವುದರೊಂದಿಗೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಉತ್ತಮ ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಸಂಸ್ಥೆಯ ಅಧ್ಯಕ್ಷ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಅವರು ರವಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ 8ನೇ ವರ್ಷದ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂದೇಶ ನೀಡಿದ ಮಣಿಪಾಲ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮ ನಾಯಕ್ ಅವರು ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆಗಳಾದ ನಾಗರಿಕ ಸೇವಾ ಪರೀಕ್ಷೆ ಮತ್ತು ಬ್ಯಾಂಕ್ ಪರೀಕ್ಷೆಗಳತ್ತ ಗಮನ ಹರಿಸಬೇಕು ಎಂದರು. ಮಣಿಪಾಲ ಮಾಹೆಯ ಕುಲಸಚಿವ ಡಾ| ನಾರಾಯಣ್ ಸಭಾಹಿತ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ನಿರಂತರ ವಾಗಿ ಅಧ್ಯಯನ ಶೀಲರಾಗಿರಬೇಕು ಎಂದರು.
ಗಣಕಯಂತ್ರ ವಿಭಾಗದ ಪ್ರಜ್ಞಾ ಯು., ಸಿವಿಲ್ ವಿಭಾಗದ ರಿಯಾ ಸರಮನಿ ಸ್ಯಾಲಿನ್ಸ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಮನಾ ಹಾಗೂ ಯಂತ್ರಶಿಲ್ಪ ವಿಭಾಗದ ನಾಗರಾಜ್ ಅವರಿಗೆ ಮಂಗಳೂರಿನ ಎಸ್. ಎಲ್. ಶೇಟ್ ಜುವೆಲರ್ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್ ಪ್ರಾಯೋಜಿತ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ನಿಶಾಂತ್ ಪ್ರಭು ಕೆ. ಮತ್ತು ವೈಭವಲಕ್ಷ್ಮೀ ಅವರಿಗೆ ಶೈಕ್ಷಣಿಕ ಸಾಧನೆಗಾಗಿ ಶ್ರೀ ಮಧ್ವ ವಾದಿರಾಜ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಪಿಎಚ್‌ಡಿ ಪದವಿ ಪಡೆದ ವಿಜಯಕುಮಾರಿ ಅವರನ್ನು ಗೌರವಿಸ ಲಾಯಿತು.
ಗಣಕಯಂತ್ರ ವಿಭಾಗದ ಗಣೇಶ್ ಹತ್ವಾರ್ ಮತ್ತು ತಂಡ ತಯಾರಿಸಿದ ಸೋದೆ ಶ್ರೀ ವಾದಿರಾಜ ಮಠದ ಪಂಚಾಂಗ ಆಧಾರಿತ ತಿಥಿ ನಿರ್ಣಯ ಮೊಬೈಲ್ ಅಪ್ಲಿಕೇಶನ್ ಅನ್ನು ಸೋದೆ ಶ್ರೀಪಾದರು ಲೋಕಾ ರ್ಪಣೆಗೊಳಿಸಿದರು.
ಇದನ್ನೂ ಓದಿ:ಕೇಂದ್ರದ ತನಿಖಾ ಸಂಸ್ಥೆಗಳಿಂದ ಶ್ರೀಕಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ಸಾಧ್ಯತೆ
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಶುಭ ಹಾರೈಸಿದರು. ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್ ಪ್ರಮಾಣ ವಚನ ಬೋಧಿಸಿದರು. ಶ್ರೀ ಸೋದೆ ವಾದಿರಾಜ ಮಠದ ದಿವಾನ ಶ್ರೀನಿವಾಸ ತಂತ್ರಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಡೀನ್ ಡಾ| ವಾಸುದೇವ ವಿದ್ಯಾರ್ಥಿವೇತನ ಪಡೆದವರ ವಿವರ ಮತ್ತು ಡೀನ್ ಡಾ| ಸುದರ್ಶನ್ ರಾವ್ ಚಿನ್ನದ ಪದಕ ಗಳಿಸಿದವರ ಪಟ್ಟಿ ವಾಚಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ರೀನಾ ಕುಮಾರಿ ಮತ್ತು ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಲೊಲಿಟಾ ಪ್ರಿಯ ಕ್ಯಾಸ್ತಲಿನೊ ಪರಿಚಯಿಸಿದರು.
ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಹರ್ಷಿತಾ ಮತ್ತು ಮೆಕ್ಯಾನಿಕಲ್ ವಿಭಾಗದ ಅನಂತ ಮಲ್ಯ ಕಾರ್ಯಕ್ರಮ ನಿರೂಪಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ರವೀಂದ್ರ ಎಚ್.ಜೆ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.