ಅವಿಭಜಿತ ದ.ಕ. ಜಿಲ್ಲೆ: ಭಾಗ್ಯಲಕ್ಷ್ಮೀ ಬಾಂಡ್‌ಗೆ ಉತ್ತಮ ಪ್ರತಿಕ್ರಿಯೆ

74,555 ಬಾಂಡ್‌ ವಿತರಣೆ ಉಡುಪಿಯಲ್ಲಿ 11 ಸಾವಿರ ವಿದ್ಯಾರ್ಥಿವೇತನ 298 ಡೆತ್‌ ಕ್ಲೇಮ್‌

Team Udayavani, Oct 26, 2019, 5:02 AM IST

a-87

ಉಡುಪಿ: ಹೆಣ್ಣು ಮಗುವಿನ ಜನನ ಉತ್ತೇಜಿಸಲು ಮತ್ತು ಉತ್ತಮ ಭವಿಷ್ಯ ಕಲ್ಪಿಸಲು ರಾಜ್ಯ ಸರಕಾರ 2006ರಲ್ಲಿ ಜಾರಿಗೆ ತಂದ “ಭಾಗ್ಯ ಲಕ್ಷ್ಮೀ’ ಯೋಜನೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 81,804 ಹೆಣ್ಣುಮಕ್ಕಳು ನೋಂದಾ ಯಿಸಿಕೊಂಡಿದ್ದು, 74,555 ಫ‌ಲಾನುಭವಿಗಳಿಗೆ ಬಾಂಡ್‌ ವಿತರಣೆಯಾಗಿದೆ. 2006ರ ಎಪ್ರಿಲ್‌ನಿಂದ 2019ರ ಸೆಪ್ಟಂಬರ್‌ ವರೆಗೆ ಉಡುಪಿ ಜಿಲ್ಲೆಯಲ್ಲಿ 41,428 ಅರ್ಜಿಗಳು, ದ.ಕ. ಜಿಲ್ಲೆಯಲ್ಲಿ 40,376 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಉಡುಪಿಯಲ್ಲಿ 37,488 ಮತ್ತು ದ.ಕ.ದಲ್ಲಿ 37,067 ಜನರಿಗೆ ಬಾಂಡ್‌ ವಿತರಿಸಲಾಗಿದೆ. ಸುಮಾರು 7,247 ಬಾಂಡ್‌ಗಳು ವಿತರಣೆಗೆ ಬಾಕಿಯಿವೆ.

ಕುಂದಾಪುರದಲ್ಲಿ ಹೆಚ್ಚು
ಕುಂದಾಪುರ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಯಾಗುತ್ತಿದೆ. ಇಲ್ಲಿಯವರೆಗೆ 18,593 ಅರ್ಜಿ ಸಲ್ಲಿಕೆಯಾಗಿದ್ದು, 16,584 ಜನರಿಗೆ ಬಾಂಡ್‌ ವಿತರಣೆಯಾಗಿದೆ. ಉಡುಪಿಯಲ್ಲಿ 5,745, ಕಾರ್ಕಳದಲ್ಲಿ 5,497, ಬ್ರಹ್ಮಾವರದಲ್ಲಿ 9,580 ಅರ್ಜಿಗಳು ಸಲ್ಲಿಕೆಯಾಗಿವೆ.

ಡೆತ್‌ ಕ್ಲೇಮ್‌
ಯೋಜನೆಯಡಿ ಫ‌ಲಾನುಭವಿಯ ತಂದೆ ಮೃತಪಟ್ಟರೆ ಹೆಣ್ಣು ಮಗುವಿಗೆ ಬಾಂಡ್‌ನ‌ ಶೇ. 75ರಷ್ಟು ಮೊತ್ತ ಸಿಗು ತ್ತದೆ. ಉಡುಪಿ ಜಿಲ್ಲೆಯಲ್ಲಿ ಡೆತ್‌ ಕ್ಲೇಮ್‌ಗೆ 447 ಜನರು ಅರ್ಜಿ ಸಲ್ಲಿಸಿ ದ್ದಾರೆ. ಉಡುಪಿ 54, ಕುಂದಾಪುರ 108, ಬ್ರಹ್ಮಾವರ 86, ಕಾರ್ಕಳದಲ್ಲಿ 50 ಫ‌ಲಾನುಭವಿಗಳು ಸೇರಿದಂತೆ ಒಟ್ಟು 298 ಅರ್ಜಿಗಳಿಗೆ ಹಣ ಪಾವತಿಯಾಗಿದೆ.

11 ಸಾವಿರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ
2006ರಿಂದ 2008ರ ಜು. 31 ರೊಳಗೆ 11,093 ಮಂದಿ ಯೋಜನೆ ಯಡಿ ನೋಂದಾ ಯಿಸಿ ಕೊಂಡಿದ್ದಾರೆ. ಅವರಿಗೆ ಸರಕಾರದಿಂದ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ನೋಂದಾ ಯಿಸಿಕೊಂಡವರಿಗೆ ಸರಕಾರ 10,000 ರೂ. ಠೇವಣಿಯಿ ರಿಸಿದ್ದು, 18 ವರ್ಷ ಪೂರ್ಣಗೊಂಡ ಅನಂತರ ಹೆಣ್ಣು ಮಕ್ಕಳಿಗೆ 34,365 ರೂ. ದೊರಕಲಿದೆ.

ಏನಿದು ಯೋಜನೆ?
ಬಡತನ ರೇಖೆಗಿಂತ ಕೆಳಗಿರುವ, ಪಡಿತರ ಚೀಟಿ ಹೊಂದಿರುವ ಕುಟುಂಬದ ಎರಡು ಹೆಣ್ಣು ಮಕ್ಕಳು
ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲು ಅರ್ಹ ರಾಗಿರುತ್ತಾರೆ. ನೋಂದಣಿಯಾದ ಕುಟುಂಬದಲ್ಲಿನ ಮೊದಲ ಹೆಣ್ಣು ಮಗುವಿನ ಹೆಸರಲ್ಲಿ 19,300 ರೂ., ಎರಡನೇ ಹೆಣ್ಣು ಮಗುವಿನ ಹೆಸರಲ್ಲಿ 18,350 ರೂ. ಮೊತ್ತವನ್ನು ಸರಕಾರ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡುತ್ತದೆ. 18 ವರ್ಷ ಪೂರ್ಣಗೊಂಡ ಅನಂತರ
ಹೆಣ್ಣು ಮಕ್ಕಳು 1 ಲ.ರೂ. ಪಡೆಯ ಬಹುದು. ಆರ್ಥಿಕ ಸಹಾಯವನ್ನು ಎಲ್‌ಐಸಿ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ.

ತ್ತೈಮಾಸಿಕ ಅನುದಾನ
ಫ‌ಲಾನುಭವಿಗಳ ನೋಂದಣಿ ಆಧಾರದ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಅನುದಾನವನ್ನು ಎಲ್‌ಐಸಿಗೆ ನೀಡಿ ಬಾಂಡ್‌ ಮುದ್ರಿಸಿ ಫ‌ಲಾನುಭವಿಗಳಿಗೆ ನೀಡಲಾಗುತ್ತದೆ. ಹೆಣ್ಣು ಮಗು (ಫ‌ಲಾನುಭವಿ) 15ನೇ ವರ್ಷ ತಲು
ಪಿದ ಅನಂತರ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚುವರಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ನಿಶ್ಚಿತ ಠೇವಣಿ ಬಾಂಡ್‌ ಅನ್ನು ಅಂಗೀಕೃತ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿ ಗರಿಷ್ಠ 50,000 ರೂ. ಸಾಲ ಪಡೆಯಬಹುದು.

ತಾಂತ್ರಿಕ ಸಮಸ್ಯೆಯಿಂದ ಬಾಂಡ್‌ ವಿತರಣೆ ವಿಳಂಬ
ಭಾಗ್ಯಲಕ್ಷ್ಮೀ ಬಾಂಡ್‌ಗಳು ಸಕಾಲದಲ್ಲಿ ದೊರಕುತ್ತಿಲ್ಲ ಎನ್ನುವ ಆರೋಪವಿದೆ. ಆದರೆ ಇಲಾಖೆ ಅಧಿಕಾರಿ ನೀಡುವ ಮಾಹಿತಿ ಪ್ರಕಾರ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗುತ್ತಿದೆ.

ಜಿಲ್ಲೆಯಲ್ಲಿ ಭಾಗ್ಯ ಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸರಿಯಾದ ಸಮಯದಲ್ಲಿ ಬಾಂಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
– ಗ್ರೇಸಿ ಗೊನ್ಸಾಲ್ವಿಸ್‌, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ

ದ.ಕ. ಜಿಲ್ಲೆಯಲ್ಲಿ ಸಕಾಲದಲ್ಲಿ ಬಾಂಡ್‌ ವಿತರಣೆಯಾಗುತ್ತಿದೆ.
ಸರಕಾರ ಫ‌ಲಾನುಭವಿಗಳ ನೋಂದಣಿ ಆಧಾರದ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಅನುದಾನವನ್ನು ಎಲ್‌ಐಸಿ ಸಂಸ್ಥೆಗೆ ನೀಡಿ ಬಾಂಡ್‌ ಮುದ್ರಿಸಿ ಫ‌ಲಾನುಭವಿಗಳಿಗೆ ನೀಡುತ್ತಿದೆ.
– ಸುಂದರ ಪೂಜಾರಿ,
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.