“ಸೇವೆಯಿಂದ ಪುಣ್ಯ ಪ್ರಾಪ್ತಿ, ಮಾನಸಿಕ ನೆಮ್ಮದಿ’
Team Udayavani, Nov 3, 2017, 6:00 AM IST
ಕೋಟ: ಜನನಿ ಯುವ ಕನ್ನಡ ಸಂಘ ಸಾೖಬ್ರಕಟ್ಟೆ ಇದರ 11ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನ.1ರಂದು ಸಾೖಬ್ರಕಟ್ಟೆಯಲ್ಲಿ ನಡೆಯಿತು.
ಗರಿಕೆಮಠ ಅರ್ಕಗಣಪತಿ ದೇವಸ್ಥಾನದ ಮುಖ್ಯಸ್ಥ ರಾಮ್‌ಪ್ರಸಾದ್ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಸಂಘಟನೆ ಮೂಲಕ ಮಾಡುವ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಹಾಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಜನನಿ ಯುವ ಕನ್ನಡ ಸಂಘವು ಉಚಿತ ಆ್ಯಂಬುಲೆನ್ಸ್ ಸೇವೆಯ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯ ಮಾಡುತ್ತಿದೆ ಎಂದರು.
ಉಡುಪಿ ಜಿ.ಪಂ. ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ಕನ್ನಡ ಅಭಿಮಾನ ಪ್ರತಿಯೊಬ್ಬರ ಹೃದಯದಿಂದ ಹುಟ್ಟುಬೇಕು ಹೊರತು ಕಾಯ್ದೆ, ಕಾನೂನುಗಳಿಂದಲ್ಲ ಎಂದರು ಹಾಗೂ ಜನನಿ ಸಂಘಟನೆ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಹರೀಶ ಶೆಟ್ಟಿ ಕಾಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಜಿಲ್ಲಾ ಸಂಯೋಜಕ ಸಚ್ಚಿದಾನಂದ ಎಂ.ಎಲ್. ಅವರು ಇಲಾಖೆಯಿಂದ ಸಿಗುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಶತಾಯುಷಿ ಪುಟ್ಟ ನಾಯ್ಕ ಯಡ್ತಾಡಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾÌನಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನವನ್ನು ವಿತರಿಸಲಾಯಿತು. ಸಂಸ್ಥೆಯ ಉಚಿತ ಆ್ಯಂಬುಲೆನ್ಸ್‌ನ ಚಾಲಕರಾಗಿ ಸಹರಿಸಿದ ಶೇಖರ ಪೂಜಾರಿ, ವೈಕು. ಸುಂದರ್ ಎತ್ತಿನಟ್ಟಿ, ಜಯರಾಮ ಮರಕಾಲ, ದಿನೇಶ ಪೂಜಾರಿ, ಅಮೃತ್ ಪೂಜಾರಿ, ದಿನೇಶ ಕುಮಾರ್, ಶ್ರೀನಿವಾಸ್ ನಾಯ್ಕ, ರಾಘವೇಂದ್ರ ನಾಯಕ್ ಅವರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಆ್ಯಂಬುಲೆನ್ಸ್ ನಿರ್ವಹಣೆಗೆ ದಾನಿಗಳಾದ ಶಿರಿಯಾರ ಫ್ರೆಂಡ್ಸ್‌ನ ಎಂ.ಕೆ.ಗಣೇಶ್, ವಿನಯ್ ಪೂಜಾರಿ, ಅಶೋಕ್ ಆಚಾರ್ ಸಾೖಬ್ರಕಟ್ಟೆ ಹಾಗೂ ಶ್ರೀನಿವಾಸ್ ಹೆಗ್ಡೆ 20ಸಾವಿರ ಸಹಾಯಧನ ಹಾಗೂ ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಳ್ಕೆಬೈಲು 25 ಸಾವಿರ, ಅಶೋಕ್ ಪ್ರಭು ಸಾೖಬ್ರಕಟ್ಟೆ 10ಸಾವಿರ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಉದ್ಯಮಿ ಪ್ರಸಾದ್ ಆರ್. ಭಟ್ ಅವರು ಸಹಾಯಧನ ನೀಡಿದರು. ಕಟಿಲೇಶ್ವರೀ ಬಾಟಿÉಂಗ್ ಕಂಪನಿಯ ಶಿವರಾಮ ಕೊಠಾರಿ ಆ್ಯಂಬುಲೆನ್ಸ್‌ನ ಸರ್ವೀಸ್ ವೆಚ್ಚವನ್ನು ಹಾಗೂ ರವೀಂದ್ರನಾಥ ಕಿಣಿ ವಿಮಾ ಮೊತ್ತವನ್ನು ನೀಡುವುದಾಗಿ ಘೋಷಿಸಿದರು.
ದಾನಿಗಳಾದ ಉದ್ಯಮಿ ಕೊಳ್ಕೆಬೆ„ಲು ಗೋಪಾಲಕೃಷ್ಣ ಶೆಟ್ಟಿ, ಬೆಳ್ವೆ ಸತೀಶ್ ಕಿಣಿ, ಶಿವರಾಮ ಕೊಠಾರಿ, ಯಡ್ತಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಮುಂತಾದವರು ಉಪಸ್ಥಿತರಿದ್ಧರು.
ಸಂಘದ ಗೌರವಾಧ್ಯಕ್ಷ ಎಂ.ರವೀಂದ್ರನಾಥ ಕಿಣಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆನಂದ ಪ್ರಸ್ತಾವಿಕ ಮಾತನಾಡಿ, ರಾಘವೇಂದ್ರ ಹೆಸ್ಕೂತ್ತೂರು, ವಸಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸುರೇಶ ಭಟ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.