ಹತ್ತೂರಿನ ಮಕ್ಕಳಿಗೆ ಅಕ್ಷರ ಕಲಿಸಿದ ಜ್ಞಾನ ದೇಗುಲಕ್ಕೆ 130ರ ಸಂಭ್ರಮ
ತಲ್ಲೂರು ಸರಕಾರಿ ಹಿ.ಪ್ರಾ. ಶಾಲೆ
Team Udayavani, Nov 8, 2019, 5:00 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಕುಂದಾಪುರ: ತಲ್ಲೂರಿನ ಸರಕಾರಿ ಮಾದರಿ ಹಿ.ಪ್ರಾ. ಶಾಲೆಗೆ 130 ವರ್ಷಗಳ ಇತಿಹಾಸವಿದೆ. 1890ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಈವರೆಗೆ ಅನೇಕ ಮಂದಿ ಮಹಾನ್ ಸಾಧಕರು ಜ್ಞಾನಾರ್ಜನೆ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.
ತಲ್ಲೂರು, ಹೆಮ್ಮಾಡಿ, ಹೊಸ್ಕಳಿ, ಸಂತೋಷ್ ನಗರ, ದೇವಲ್ಕುಂದ, ಕಟ್‌ಬೆಲೂ¤ರು, ಕರ್ಕಿ, ಕೂಡ್ಲು – ಕನ್ಯಾನ, ರಾಜಾಡಿ, ಸಬ್ಲಾಡಿ ಹೀಗೆ ಹತ್ತಾರು ಊರುಗಳಿಗೆ ಆಗ ಸ್ವಾತಂತ್ರತ್ರ್ಯ ಪೂರ್ವದಲ್ಲಿ ಇದ್ದದು ಇದೊಂದೇ ಶಿಕ್ಷಣ ಸಂಸ್ಥೆ. ಈಗ ಹೆಮ್ಮಾಡಿ, ಕೂಡ್ಲು – ಕನ್ಯಾನ, ದೇವಲ್ಕುಂದ. ಕಟ್‌ಬೆಲೂ¤ರು, ಸಬ್ಲಾಡಿ ಸಹಿತ ಹಲವೆಡೆಗಳಲ್ಲಿ ಶಾಲೆಗಳಾಗಿವೆ.
ಓದಿದ ಮಹನೀಯರು
ಇಂಗ್ಲೆಂಡ್‌ನಲ್ಲಿ ವೈದ್ಯರಾಗಿರುವ ಡಾ| ಮೈಕಲ್ ಮೆನೇಜಸ್, ಊರಲ್ಲಿಯೇ ವೈದ್ಯರಾಗಿರುವ ಡಾ| ರಂಜಿತ್ ಕುಮಾರ್ ಹೆಗ್ಡೆ, ಖ್ಯಾತ ವಕೀಲ ಟಿ.ಬಿ. ಶೆಟ್ಟಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡ ತಲ್ಲೂರು ಶಿವರಾಮ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಟಿ.ಕೆ. ಕೋಟ್ಯಾನ್, ಹೀಗೆ ಅನೇಕ ಮಂದಿ ಇಲ್ಲಿ ಕಲಿತವರು ಪ್ರಸಿದ್ಧರಾಗಿದ್ದಾರೆ.
ಈ ಶಾಲೆ ಶತಮಾನೋತ್ಸವ ಪೂರೈಸಿರುವ ಬಗ್ಗೆ ಹೆಮ್ಮೆಯಿದೆ. ಊರಿನ ದಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಗ್ರಾ.ಪಂ. ಸಹಕಾರದಿಂದ ಗುಣಮಟ್ಟದ ಶಿಕ್ಷಣದಲ್ಲಿಯೂ ಮುಂಚೂಣಿಯಲ್ಲಿದೆ. 2010ರಲ್ಲಿ 140 ಇದ್ದ ಮಕ್ಕಳ ಸಂಖ್ಯೆ ಈಗ 210 ಕ್ಕೆ ತಲುಪಿದೆ. ಹಾಗಾಗಿ ಶಾಲೆಗೆ ಹೆಚ್ಚುವರಿ ಕಟ್ಟಡದ ಅಗತ್ಯವಿದೆ. ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ 130ನೇ ವರ್ಷಾಚರಣೆ ಆಚರಿಸುವ ಯೋಜನೆಯಿದೆ.
-ಶಂಕರ್, ಮುಖ್ಯೋಪಾಧ್ಯಾಯರು
ಶತಮಾನೋತ್ಸವ ಸಮಿತಿ ಆಚರಣೆ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಈಗ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷನಾಗಿದ್ದೇನೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಶಾಲೆಯಿದು. ಈಗಲೂ ಅದೇ ಗುಣ ಮಟ್ಟವನ್ನು ಕಾಪಾಡಿಕೊಂಡಿದೆ. ಈ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ.
-ಟಿ.ಬಿ. ಶೆಟ್ಟಿ, ಹಿರಿಯ ನ್ಯಾಯವಾದಿ
(ಹಳೆ ವಿದ್ಯಾರ್ಥಿ)
1890ರಲ್ಲಿ ಆರಂಭ
1890ರಲ್ಲಿ ಆರಂಭವಾದ ಈ ಶಾಲೆ ಈಗ 129 ವಸಂತಗಳನ್ನು ಪೂರೈಸಿ, 130ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಶಾಂತಮೂರ್ತಿ ಅವರು ಇಲ್ಲಿನ ಮೊದಲ ಮುಖ್ಯೋಪಾಧ್ಯಾಯರು. ಆಗ ಉಪ್ಪಿನಕುದ್ರುವಿನಲ್ಲಿ ಹೊರತುಪಡಿಸಿದರೆ, ಆಸುಪಾಸಿನಲ್ಲಿ ಇದ್ದುದು ಇದೊಂದೇ ಶಾಲೆ. ಹಾಗಾಗಿ ದೂರ-ದೂರದ ಊರುಗಳಿಂದ ಇಲ್ಲಿಗೆ ವಿದ್ಯಾರ್ಜನೆಗೆ ಬರುತ್ತಿದ್ದರು.
210 ವಿದ್ಯಾರ್ಥಿಗಳು
ಸರಕಾರಿ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಹೆಚ್ಚಿನ ಕಡೆಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದರೂ ಈ ಶಾಲೆಗೆ ಮಾತ್ರ ಅಂತಹ ಯಾವುದೇ ಸಮಸ್ಯೆ ಎದುರಾಗಿಲ್ಲ. ಪ್ರಸ್ತುತ ಇಲ್ಲಿ 210 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ 1ನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 23. ಒಟ್ಟಾರೆ ಈ ವರ್ಷ 35 ಮಕ್ಕಳ ಹೊಸದಾಗಿ ದಾಖಲಾತಿಯಾಗಿದೆ. ಮುಖ್ಯ ಶಿಕ್ಷಕರು ಸೇರಿ, ಒಟ್ಟು 7 ಮಂದಿ ಬೋಧಕರಿದ್ದಾರೆ.
ಕಳೆದ 5 ವರ್ಷಗಳಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕೋಲಾಟದಲ್ಲಿ ಪ್ರತಿ ಬಾರಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈ ಶಾಲೆಯ ವಿದ್ಯಾರ್ಥಿಗಳದ್ದು.
- ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.