Udupi; ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಳಕ್ಕೆ ಸರಕಾರದ ಆದೇಶ
Team Udayavani, Feb 11, 2024, 11:21 PM IST
ಉಡುಪಿ: ಕೆಲವು ತಿಂಗಳ ಹಿಂದೆ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದ ರಾಜ್ಯ ಸರಕಾರ ಇದೀಗ ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಫೆ. 6ರಿಂದ ಹೊಸ ಸ್ಟಾಂಪ್ ಡ್ಯೂಟಿ ದರ ಜಾರಿಗೆ ಬಂದಿದೆ. ಈಗಾಗಲೇ ಹೊಸ ದರದಲ್ಲಿ ಅಗ್ರಿಮೆಂಟ್, ಪ್ರಮಾಣ ಪತ್ರಗಳನ್ನು ನೋಂದಣಾಧಿಕಾರಿಗಳ ಕಚೇರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಪರಿಷ್ಕರಿಸಿದ ದರ ಪಾವತಿಸಬೇಕಾಗಿದೆ.
ಪ್ರಸ್ತುತ ಬಹುತೇಕ ದಾಖಲೆಯನ್ನು ದೃಢೀಕರಿಸಲು ಅಫಿದವಿತ್ ನೀಡಬೇ ಕಿದ್ದು, ಸಾರ್ವಜನಿಕರು ಒಂದಲ್ಲ ಒಂದು ಕೆಲಸಕ್ಕೆ ಅಫಿದವಿತ್‌ಗಳನ್ನು ಬಳಸುತ್ತಾರೆ. ಹಿಂದೆಲ್ಲ ಕೇವಲ 5 ರೂ. ಅಫಿದವಿತ್ ಬಳಸಿ ಕೈಬರಹದ ಮೂಲಕ ಕೇವಲ 10 ರೂ.ಗಳಲ್ಲಿ ಸಲ್ಲಿಸಬಹುದಾಗಿತ್ತು. ಆನಂತರ, 10, 15 ಹಾಗೂ 20 ರೂ.ಗಳವರೆಗೂ ಬಂದು ನಿಂತಿತ್ತು. ಈಗ ಸರಕಾರ ಅಫಿದವಿತ್ ದರ ದುಪ್ಪಟ್ಟು ಹೆಚ್ಚಿಸಿದ್ದು, 20 ರೂ.ಗೆ ಬದಲಾಗಿ 100 ರೂ. ಮೌಲ್ಯದ ಛಾಪಾ ಕಾಗದ ಬಳಸಬೇಕಾಗುತ್ತದೆ. ಪರಿಷ್ಕರಿಸಿ ಹೊರಡಿಸಿರುವ ಹೊಸ ಸ್ಟ್ಯಾಂಪ್ ಡ್ಯೂಟಿ ಆದೇಶದಂತೆ ಅಗ್ರಿಮೆಂಟ್ 200ರಿಂದ 500 ರೂ., ಇಂಡೆಮಿನಿಟಿ ಬಾಂಡ್ 200ರಿಂದ 500 ರೂ., ಬ್ಯಾಂಕ್ ಗ್ಯಾರಂಟಿ ಪತ್ರಗಳು 200ರಿಂದ 300 ರೂ., ಹೈಪೋಥೆಟಿಕಲ್ ಅಗ್ರಿಮೆಂಟ್‌ಗಳು ಪ್ರತಿ ಹತ್ತು ಲಕ್ಷಕ್ಕೆ 0.1 ಪ್ರಮಾಣದಿಂದ 0.5 ಪ್ರಮಾಣಕ್ಕೆ ಹೆಚ್ಚಳವಾಗಿದೆ. 10 ಲಕ್ಷ ರೂ. ಅನಂತರ ಅಗ್ರಿಮೆಂಟ್‌ಗಳಿಗೂ ಶೇ.0.5 ಪ್ರಮಾಣದ ದರವನ್ನು ಸಾರ್ವಜನಿಕರು ನೀಡಬೇಕಾಗುತ್ತದೆ.
ಜನರಲ್ ಪವರ್ ಆಫ್ ಅಟಾರ್ನಿ 1,000 ರೂ., ವಿಶೇಷ ಪವರ್ ಆಫ್ ಅಟಾರ್ನಿ 100 ರಿಂದ 500 ರೂ., ಲೆಟರ್ ಆಫ್ ಗ್ಯಾರಂಟಿ ದರ 200 ರಿಂದ 500 ರೂ., ಟ್ರೈಪಾರ್ಟಿ ಅಗ್ರಿಮೆಂಟ್ ದರ 500 ರೂ. ಗಳಿಂದ 1,500 ರೂ.ಗಳಿಗೆ ಹಾಗೂ ಸಾಲ ಪ್ರಮಾಣ ಪತ್ರದ ಧಾರಣೆ ಸಾಲದ ಮೊತ್ತದ ಶೇ.0.1ರಿಂದ ಶೇ.0.5 ಕ್ಕೆ ಹೆಚ್ಚಳವಾಗಿದೆ. ಹಿಂದಿನ ದರ ಪಟ್ಟಿಗೆ ಹೋಲಿಸಿದರೆ ರಿಜಿಸ್ಟರ್ಡ್ ಲೀಗಲ್ ಮಾಗೇಜ್ ದರವನ್ನು ಮಾತ್ರವೇ ಶೇ.0.5 ರಷ್ಟೇ ಉಳಿಸಲಾಗಿದೆ.
ಸರಕಾರವು ಕಾಲಕಾಲಕ್ಕೆ ಆಸ್ತಿ ತೆರಿಗೆ ಮತ್ತು ಸ್ಟ್ಯಾಂಪ್ ಡ್ಯೂಟಿ ದರ ಪರಿಷ್ಕರಿಸುತ್ತದೆ. ಹಲವಾರು ವರ್ಷಗಳ ಹಿಂದೆ ಸ್ಟ್ಯಾಂಪ್ ಡ್ಯೂಟಿ ದರ ಪರಿಷ್ಕರಿಸಲಾಗಿತ್ತು. ಮತ್ತೆ ಪರಿಷ್ಕರಿಸಲ್ಪಟ್ಟ ದರವು ಸಾರ್ವಜನಿಕರಿಗೆ ತೀವ್ರ ಹೊರೆಯಾಗಿ ಪರಿಣಮಿಸಿಲ್ಲ ಎಂದು ದಸ್ತಾವೇಜು ಬರಹಗಾರರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.