ಪದವೀಧರರು ಆಶಾವಾದಿಗಳಾಗಿರಿ: ಸೋದೆ ಶ್ರೀ
Team Udayavani, Nov 13, 2017, 11:56 AM IST
ಕಾಪು: ಪದವೀಧರರು ಆಶಾವಾದಿಯಾಗಿದ್ದು, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ನಶ್ವರವಾದ ಸಂಪತ್ತಿನ ಕಡೆಗೆ ಗಮನ ಹರಿಸದೇ ಕೀರ್ತಿವಂತರಾಗಿ ಬಾಳಬೇಕು. ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಪೀಠಾಧಿಪತಿ, ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ರವಿವಾರ ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ನಡೆದ 4ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿ, ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿ ಸಿದ್ದ ವಿಪ್ರೊ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರವೀಣ್ ಕಾಮತ್ ಮಾತನಾಡಿ, ಉತ್ತಮ ಸ್ವಭಾವ, ನಿರಂತರ ಅಧ್ಯಯನದ ಆಸಕ್ತಿ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಲು ಪೂರಕವಾಗಿರುತ್ತದೆ.
ಪದವೀಧರರು ತಮ್ಮ ಕುಟುಂಬದ ಜತೆ ಸ್ವಲ್ಪವಾದರೂ ಸಮಯ ಕಳೆಯಬೇಕು. ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು. ಕಷ್ಟದಲ್ಲಿ ರುವ ಪ್ರತಿಭಾನ್ವಿತರಿಗೆ ಸೇವಾಹಸ್ತ ಚಾಚಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಕೊಡುಗೆ ನೀಡುವುದೂ ಒಂದು ರೀತಿಯ ಸೇವೆ ಎಂದರು.
ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣಪರಿಷತ್ತಿನ ನೈಋತ್ಯ ವಿಭಾಗದ ಅಧಿ
ಕಾರಿ/ ನಿರ್ದೇಶಕ ರಮೇಶ್ ಯು. ಮಾತನಾಡಿ, ಪದವೀಧರರು ಸಾಮಾ ಜಿಕ ಜವಾಬ್ದಾರಿಯನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಅಲ್ಲದೇ ದೇಶದ ಪ್ರಗತಿಗೆ ಕಾರಣರಾಗಬೇಕು. ಪದವೀಧರರು ತಾವು ಕಲಿತ ಸಂಸ್ಥೆಯ ರಾಯಭಾರಿ ಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ವರ್ಷದಲ್ಲಿ ಕನಿಷ್ಠ ಒಮ್ಮೆಯಾ ದರೂ ತಾವು ಕಲಿತ ಸಂಸ್ಥೆಗೆ ಭೇಟಿ ನೀಡುವ ಪರಿಪಾಠ ಬೆಳೆಸಬೇಕು ಎಂದರು.
ಶ್ರೀ ಸೋದೆ ವಾದಿರಾಜ ಮಠಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಪಾಡಿಗಾರು
ಶ್ರೀನಿವಾಸ ತಂತ್ರಿ, ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಗಣಕಯಂತ್ರ ವಿಭಾಗದ ಶ್ವೇತಾ ಎಚ್., ಸಿವಿಲ್ ವಿಭಾಗದ ಗೀತಾ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರತೀಕ್ಷಾ ಮತ್ತು ಯಂತ್ರ ಶಿಲ್ಪ ವಿಭಾಗದ ಸುಜಿತ್ ಕುಮಾರ್ ಇವರಿಗೆ ಮಂಗಳೂರಿನ ಪ್ರತಿಷ್ಠಿತ ಮೆ| ಎಸ್.ಎಲ್. ಶೇಟ್ ಜುವೆಲರ್ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್ ಅವರಿಂದ ಪ್ರಾಯೋಜಿಸಲ್ಪಟ್ಟ ಚಿನ್ನದ ಪದಕಗಳನ್ನು ಪ್ರದಾನಿಸಲಾಯಿತು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರತ್ನ ಕುಮಾರ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರೊ| ಡಾ| ತಿರುಮಲೇಶ್ವರ ಭಟ್ ಪ್ರಮಾಣ ವಚನ ಬೋಧಿಸಿದರು. ಅನುಜ್ಞಾ ರಾವ್, ಕಾರ್ತಿಕ್ ಪರಿಚಯಿಸಿದರು. ಡಾ| ರೀನಾ ಕುಮಾರಿ ವಂದಿಸಿದರು. ಅನಂತ್ ಮಲ್ಯ, ಶರೀನ್ ನೊರೊನ್ಹಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.