ಉಡುಪಿ ಜಿಲ್ಲೆಯ ಪೊಲೀಸರ ಕಾರ್ಯಕ್ಷಮತೆ : ಐಜಿಪಿ ಶ್ಲಾಘನೆ, ಬಹುಮಾನ ಘೋಷಣೆ
Team Udayavani, Jan 12, 2021, 8:15 AM IST
ಉಡುಪಿ: ಉಡುಪಿ ಜಿಲ್ಲೆಯ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಗೆ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು (ಐಜಿಪಿ) ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಅತ್ಯುತ್ತಮ ಕೆಲಸ ನಿರ್ವಹಿಸಿ, ಪುರಸ್ಕಾರ ಪಡೆದುಕೊಂಡವರ ವಿವರ ಹೀಗಿದೆ.
ಹರೀಶ್ ಬಂಗೇರ ಪ್ರಕರಣ :
ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ರಾಜನ ಬಗ್ಗೆ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಸುಳ್ಳು ಸುದ್ದಿಗಳನ್ನು ಪಸರಿಸಿ, ಸೌದಿಯಲ್ಲಿ ಕೋಟೇಶ್ವರದ ಹರೀಶ್ ಬಂಗೇರ ಅವರ ಬಂಧನಕ್ಕೆ ಕಾರಣರಾದ ಇಬ್ಬರನ್ನು ದಸ್ತಗಿರಿ ಮಾಡುವಲ್ಲಿ ಶ್ರಮಿಸಿದ ಸೆನ್ ಅಪರಾಧ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಸೀತಾರಾಮ ಪಿ. ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್, ಪಿಎಸ್‌ಐಗಳಾದ ನಾರಾಯಣ, ಲಕ್ಷ್ಮಣ, ಸಿಬಂದಿ ಶ್ರೀಧರ್, ರಾಘವೇಂದ್ರ, ಕೃಷ್ಣಪ್ರಸಾದ್, ಜೀವನ್ ಹಾಗೂ ಪ್ರವೀಣ್ ಅವರು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಕಿಶನ್ ಹೆಗ್ಡೆ ಕೊಲೆ ಪ್ರಕರಣ :
ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಳಿ ನಡೆದ ಕಿಶನ್ ಹೆಗ್ಡೆ ಕೊಲೆ ಪ್ರಕರಣದ 9 ಆರೋಪಿಗಳನ್ನು ಶೀಘ್ರ ಬಂಧಿಸಿದ ಸಿಪಿಐಗಳಾದ ಬ್ರಹ್ಮಾವರದ ಅನಂತಪದ್ಮನಾಭ, ಆಗಿನ ಕಾಪು ಸಿಪಿಐ ಮಹೇಶ್ ಪ್ರಸಾದ್, ಉಡುಪಿಯ ಮಂಜುನಾಥ, ಡಿಸಿಐಬಿಯ ಮಂಜಪ್ಪ ಡಿ.ಆರ್., ಮಣಿಪಾಲದ ಮಂಜುನಾಥ, ಆಗಿನ ಬ್ರಹ್ಮಾವರ ಠಾಣೆಯ ಪಿಎಸ್‌ಐ ರಾಘವೇಂದ್ರ ಸಿ., ಕೋಟ ಪಿಎಸ್‌ಐ ಸಂತೋಷ್ ಬಿ.ಪಿ., ಎಎಸ್‌ಐ ಕೃಷ್ಣಪ್ಪ, ಡಿಸಿಐಬಿಯ ಎಎಸ್‌ಐ ರವಿಚಂದ್ರ, ಡಿಸಿಐಬಿ ಸಿಬಂದಿ ರಾಮು ಹೆಗ್ಡೆ, ರಾಘವೇಂದ್ರ, ಬ್ರಹ್ಮಾವರ ವೃತ್ತ ಕಚೇರಿ ಸಿಬಂದಿ ವಾಸುದೇವ, ಗಣೇಶ್, ಪ್ರದೀಪ್ ನಾಯಕ್ ಹಾಗೂ ಚಾಲಕ ಶೇಖರ, ಬ್ರಹ್ಮಾವರ ಠಾಣೆಯ ಸಿಬಂದಿ ದಿಲೀಪ್, ಅಣ್ಣಪ್ಪ ಮೊಗವೀರ ಮತ್ತು ರವೀಂದ್ರ, ಹಿರಿಯಡ್ಕ ಠಾಣೆಯ ಸಿಬಂದಿ ಇಂದ್ರೇಶ್ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಮಾದಕ ದ್ರವ್ಯ ತಡೆ :
ಮಾದಕ ದ್ರವ್ಯ ತಡೆ ಕಾಯ್ದೆಯಡಿ ಆರೋಪಿಗಳನ್ನು ಪತ್ತೆಹಚ್ಚಿ, ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡ ಮಣಿಪಾಲದ ಸಿಪಿಐ ಮಂಜುನಾಥ ಎಂ., ಉಪನಿರೀಕ್ಷಕ ರಾಜಶೇಖರ ವಂದಲಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಹಲವು ಪ್ರಕರಣ ಶೀಘ್ರ ಇತ್ಯರ್ಥ :
2019 ಮತ್ತು ಅದಕ್ಕೂ ಹಿಂದೆ ವರದಿಯಾಗಿರುವ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿದ ಮಣಿಪಾಲದ ಮಂಜುನಾಥ ಎಂ., ದಿವಾಕರ ಶರ್ಮ, ರಾಜಶೇಖರ ವಂದಲಿ, ಆದರ್ಶ, ಕಾಪು ಠಾಣೆಯ ರಾಜಶೇಖರ ಬಿ. ಸಾಗನೂರು, ಮಹಾಬಲ ಶೆಟ್ಟಿಗಾರ್ ಮತ್ತು ಅರುಣ್ ಕುಮಾರ್, ಬೈಂದೂರಿನ ಸಂಗೀತಾ, ಮಂಜುನಾಥ, ನಾಗರಾಜ್, ಕೋಟದ ಸಂತೋಷ್ ಬಿ.ಪಿ., ಗಣೇಶ್ ಮತ್ತು ಕೃಷ್ಣ, ಉಡುಪಿ ನಗರ ಠಾಣೆಯ ಪಿಎಸ್‌ಐ ಸಕ್ತಿವೇಲು, ರಿಯಾಜ್ ಅಹ್ಮದ್ ಮತ್ತು ವಿಶ್ವನಾಥ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
67 ಪ್ರಕರಣ ಇತ್ಯರ್ಥ :
2020ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಲೋಕಅದಾಲತ್‌ನಲ್ಲಿ 67 ಪ್ರಕರಣಗಳನ್ನು ಇತ್ಯರ್ಥಪಡಿಸಿದ ತಂಡದಲ್ಲಿದ್ದ ಬೈಂದೂರು ಪಿಎಸ್‌ಐ ಸಂಗೀತಾ, ಶಂಕರನಾರಾಯಣ ಠಾಣೆಯ ಶ್ರೀಧರ ನಾಯ್ಕ, ಪಡುಬಿದ್ರಿಯ ದಿಲೀಪ್, ಕುಂದಾಪುರದ ಸದಾಶಿವ ಗವರೋಜಿ, ಬ್ರಹ್ಮಾವರದ (ಪ್ರಸ್ತುತ ಕಾಪು ಠಾಣೆ) ರಾಘವೇಂದ್ರ, ಉಡುಪಿ ಸಂಚಾರ ಠಾಣೆಯ ಅಬ್ದುಲ್ ಖಾದರ್ ಪುರಸ್ಕೃತರಾಗಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ :
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದ ಸಿಬಂದಿ ಕೊಲ್ಲೂರು ಠಾಣೆಯ ನವೀನ್ ದೇವಾಡಿಗ, ಮಲ್ಪೆಯ ರವಿರಾಜ್, ಪಡುಬಿದ್ರಿಯ ಬಸಪ್ಪ, ಶಿರ್ವಾದ ಅಂದಪ್ಪ ಹಾಗೂ ಕುಂದಾಪುರ ಠಾಣೆಯ ಪ್ರಸನ್ನ ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.