ಮಾಹೆಗೆ ಗ್ರೀನ್ ಆ್ಯಪಲ್ ರಜತ ಪ್ರಶಸ್ತಿ
Team Udayavani, Nov 22, 2018, 9:43 AM IST
ಉಡುಪಿ: ಮಣಿಪಾಲದ ಮಾಹೆ ವಿವಿಯು ಪರಿಸರಕ್ಕಾಗಿ ತೋರಿಸಿದ ಕಾಳಜಿಗಾಗಿ 2018ರ ಇಂಟರ್‌ನ್ಯಾಶನಲ್ ಗ್ರೀನ್ ಆ್ಯಪಲ್ ರಜತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಲಂಡನ್‌ನ ಸಂಸದ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಮಾಹೆಯ ಸಹಾಯಕ ನಿರ್ದೇಶಕ (ಸುಸ್ಥಿರ ಪರಿಸರ) ಡೆರಿಕ್ ಜೋಶುವ ಸ್ವೀಕರಿಸಿದರು.
ವೈಯಕ್ತಿಕ, ಕಂಪೆನಿಗಳು, ಮಂಡಳಿಗಳು, ಸಮುದಾಯಗಳೂ ಸಹಿತ ಜಗತ್ತಿನ 800 ಸ್ಪರ್ಧಾಳುಗಳಲ್ಲಿ ಮಾಹೆ ಈ ಪ್ರಶಸ್ತಿಗೆ ಭಾಜನವಾಗಿದೆ. ಭಾರತದ ಈ ಖಾಸಗಿ ವಿ.ವಿ. ವಿಶ್ವ ದರ್ಜೆಯ ಹಸಿರು ಕ್ಯಾಂಪಸ್ ಹೊಂದಿದೆ. ನವೀಕರಿಸಬಹುದಾದ ಇಂಧನ, ಗ್ರೇ ವಾಟರ್ ಸಿಸ್ಟಮ್, ತ್ಯಾಜ್ಯ ನಿರ್ವಹಣೆ ಕ್ರಮ, ಮರಗಳ ಪೋಷಣೆ ವಿಷಯಗಳಲ್ಲಿ ಏಶ್ಯಾದಲ್ಲಿಯೇ ಅತಿ ಸುಸ್ಥಿರ ವಿವಿ ಎನಿಸಿದೆ. ಈ ಪ್ರಶಸ್ತಿಯಿಂದಾಗಿ ಮಾಹೆ ಗ್ರೀನ್ ಬುಕ್‌ನಲ್ಲಿ ಪ್ರಬಂಧ ಮಂಡನೆಯಾಗಲಿದೆ. 2019ರ ಗ್ರೀನ್ ವರ್ಲ್ಡ್ ಪ್ರಶಸ್ತಿಗೆ ಭಾಗವಹಿಸಬಹುದಾಗಿದೆ ಮತ್ತು ವಿಶ್ವ ಸಂಸ್ಥೆಯ ಬಿಲಿಯ ವೃಕ್ಷಾರೋಪಣದಲ್ಲಿ 100 ಗಿಡಗಳನ್ನು ನೆಡುವ ಅವಕಾಶವಿದೆ.
ಗ್ರೀನ್ ಆ್ಯಪಲ್ ಪ್ರಶಸ್ತಿ 1994ರಲ್ಲಿ ಆರಂಭಗೊಂಡಿತು. ಅಂತಾರಾಷ್ಟ್ರೀಯ ಸ್ತರದ ರಾಜಕೀಯೇತರ, ಲಾಭರಹಿತ ಪರಿಸರ ತಂಡವಾದ ಗ್ರೀನ್ ಆರ್ಗನೈಸೇಶನ್ ಪ್ರಾಯೋಜಿಸುತ್ತಿದೆ. ತ್ಯಾಜ್ಯ, ನೀರು, ಹಸಿರು ಹೊದಿಕೆ, ಶುದ್ಧ ಇಂಧನ, ಒಣ-ದ್ರವ, ಇಲೆಕ್ಟ್ರಾನಿಕ್, ಬಯೋಮೆಡಿಕಲ್ ಇತ್ಯಾದಿ ಘನ ತ್ಯಾಜ್ಯ ನಿರ್ವಹಣೆ, ನೀರಿನ ಮರು ಬಳಕೆ, ತ್ಯಾಜ್ಯ ನೀರಿನ ಮರುಬಳಕೆ, ವೃಕ್ಷಾರೋಪಣ, ಶುದ್ಧ ಗಾಳಿಯ ಅವಲೋಕನ, ಸೌರ ವಿದ್ಯುತ್ ಬಳಕೆ ಮೂಲಕ ಪರಿಸರಕ್ಕೆ ಸಲ್ಲಿಸಿದ ಪ್ರಯೋಗಗಳಿಂದಾಗಿ ಪ್ರಶಸ್ತಿ ಬಂದಿದೆ ಎಂದು ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.