![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 22, 2019, 12:50 AM IST
ಉಡುಪಿ: ವಿಶ್ವ ಹಿಂದೂ ಪರಿಷತ್ತಿನ ಪ್ರಥಮ ಪ್ರಾಂತ ಸಮ್ಮೇಳನ ಮತ್ತು ಸಂತ ಸಮ್ಮೇಳನ 1969ರ ಡಿಸೆಂಬರ್ 12, 13, 14ರಂದು ನಡೆದ ಸಂದರ್ಭ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಎರಡು ದಿನ ಪೂರ್ತಿ ಇದ್ದು ಮಾರ್ಗದರ್ಶನ ಮಾಡಿದ್ದರು.
ಆ ಸಮ್ಮೇಳನವು ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು “ಮರಳಿ ಮಾತೃಧರ್ಮ’ಕ್ಕೆ ಕರೆತರುವ ಮತ್ತು ಅಸ್ಪೃಶ್ಯತೆ ವಿರುದ್ಧ ಪ್ರಥಮ ಬಾರಿ ಅಧಿಕೃತ ನಿರ್ಣಯವನ್ನು ತಳೆದಿತ್ತು. “ಇದೊಂದು ಶೈವ-ವೈಷ್ಣವ ಸಮಾವೇಶ’ ಎಂದೂ ಲಿಂಗಾಯತ-ವೀರಶೈವ ಪಂಥಕ್ಕೆ ಸೇರಿದ ಶ್ರೀ ಶಿವಕುಮಾರ ಸ್ವಾಮೀಜಿ ಬಣ್ಣಿಸಿದ್ದರು.
ಆ ಬಳಿಕ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೂ ಸಿದ್ಧಗಂಗಾ ಸ್ವಾಮೀಜಿಯವರಿಗೂ ಆತ್ಮೀಯ ಸಂಬಂಧ ಮುಂದುವರಿಯಿತು. ಪೇಜಾವರ ಮತ್ತು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ವಿಹಿಂಪ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಿದ್ಧಗಂಗಾ ಮಠದ ಸ್ವಾಮೀಜಿಯವರ ಜತೆ ಪಾಲ್ಗೊಂಡಿದ್ದರು.
2017ರಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ 5ನೇ ಪರ್ಯಾಯ ಅವಧಿಯಲ್ಲಿ ನಡೆದ ಧರ್ಮಸಂಸದ್ ಅಧಿವೇಶನದ ಉದ್ಘಾಟನೆಗೆ ಡಾ| ಶಿವಕುಮಾರ ಸ್ವಾಮೀಜಿ ಪಾಲ್ಗೊಳ್ಳುವುದು ನಿಗದಿಯಾಗಿದ್ದರೂ ಆರೋಗ್ಯದ ಕಾರಣದಿಂದ ಬರಲಿಲ್ಲ. 2015ರಲ್ಲಿ ಸಿದ್ಧಗಂಗಾ ಮಠದಲ್ಲಿ ಸ್ವಾಮೀಜಿಯವರ ಆಶಯದಂತೆ ಸಂತ ಸಮ್ಮೇಳನವನ್ನೂ ಆಯೋಜಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.