ಮಾಸಿವೆ ಮಾರ್ಗಸೂಚಿ ಫ‌ಲಕಗಳ ಮಾಹಿತಿ

ಅಸ್ಪಷ್ಟ ಮಾಹಿತಿ, ಕೆಲವೆಡೆ ಫ‌ಲಕಗಳೇ ಕಾಣದ ಜಾಗದಲ್ಲಿದೆ

Team Udayavani, May 27, 2022, 10:17 AM IST

name-plates

ಕಾರ್ಕಳ: ಕಾರ್ಕಳಕ್ಕೆ ಆಗಮಿಸುವ, ಇಲ್ಲಿನ ಮಾರ್ಗಗಳ ಮೂಲಕ ವಿವಿಧ ಕಡೆಗಳಿಗೆ ತೆರಳುವ ಪ್ರವಾಸಿಗರು ಸ್ಥಳೀಯರಲ್ಲಿ ತಲುಪಬೇಕಾದ ಊರಿನ ಮಾರ್ಗದ ಮಾಹಿತಿ ಕೇಳುವುದು ನಗರದಲ್ಲಿ ಸಾಮಾನ್ಯವಾಗಿದೆ.

ನಗರದ ಕೆಲವು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸರಿಯಾದ ಮಾರ್ಗಸೂಚಿಗಳಿಲ್ಲ. ಕೆಲವು ಸ್ಥಳಗಳಲ್ಲಿ ಇದ್ದರೂ ಅದು ಸರಿಯಾದ ಜಾಗದಲ್ಲಿಲ್ಲದೆ ಸಮಸ್ಯೆಯಾಗುತ್ತಿದೆ. ಮಳೆಗೆ ಫ‌ಲಕಗಳ ಅಕ್ಷರಗಳು, ಚಿಹ್ನೆಗಳು ಮಾಸಿ ಹೋಗಿವೆ. ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿ ಸ್ಥಳೀಯರಲ್ಲಿ ವಿಚಾರಿಸುವ ಸ್ಥಿತಿಯಿದೆ.

ಪುರಸಭೆ ವ್ಯಾಪ್ತಿಯಲ್ಲಿ ಉಡುಪಿ ಭಾಗದಿಂದ ಹಾಗೂ ಹೆಬ್ರಿ ಕಡೆಯಿಂದ ಬಂದು ಸೇರುವ ಜೋಡುರಸ್ತೆ ಜಂಕ್ಷನ್‌ನಲ್ಲಿ 3 ಕಡೆ ಮಾರ್ಗಸೂಚಿ ನಾಮಫ‌ಲಕವಿದ್ದರೂ ಅದು ಸಣ್ಣದಾಗಿದ್ದು, ತತ್‌ಕ್ಷಣಕ್ಕೆ ವಾಹನದಲ್ಲಿ ತೆರಳುವವರಿಗೆ ಕಾಣುತ್ತಿಲ್ಲ. ಕಾಣುವ ಜಾಗದಲ್ಲಿಯೂ ಅವುಗಳಿಲ್ಲ. ಕಮಾನು ಆಕಾರದ ಮಾರ್ಗಸೂಚಿ ಇಲ್ಲಿ ನಿರ್ಮಾಣವಾಗಬೇಕಿದೆ.

ಬಂಡಿಮಠ ಜಂಕ್ಷನ್‌ನಲ್ಲಿ ಒಂದು ರಸ್ತೆ ನೇರ ಕಾರ್ಕಳ ಪೇಟೆಗೆ ಸಂಪರ್ಕಿಸಿದರೆ ಇನ್ನೊಂದು ಬೈಪಾಸ್‌ ಮೂಲಕ ವಿವಿಧ ಕಡೆಗಳಿಗೆ ತೆರಳುವುದಾಗಿದೆ. ಇಲ್ಲಿ ಜಂಕ್ಷನ್‌ ಪಕ್ಕದ ಬೇಕರಿ ಬದಿ ಪುರಸಭೆ ವತಿಯಿಂದ ಮಾರ್ಗಸೂಚಿ ನಾಮ ಫ‌ಲಕವಿದ್ದರೂ ಮಳೆಗೆ ಅಕ್ಷರಗಳು ಮಾಸಿ ಕಾಣಿಸುತ್ತಿಲ್ಲ. ಫ‌ಲಕದಲ್ಲಿ ಮಂಗಳೂರು, ಧರ್ಮಸ್ಥಳ, ಮೂಡುಬಿದಿರೆ, ಕುದುರೆಮುಖ ಕಡೆಗಿನ ದಾರಿಯನ್ನು ಚಿಹ್ನೆ ಮೂಲಕ ತೋರಿಸಲಾಗಿದೆ. ಅವುಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ಬಂಡಿಮಠ ಡಾ| ಬಿ. ಆರ್‌ ಅಂಬೇಡ್ಕರ್‌ ಪ್ರತಿಮೆ ಜಂಕ್ಷನ್‌ನಲ್ಲಿ ಮಾರ್ಗಸೂಚಿ ನಾಮಫ‌ಲಕವೇ ಇಲ್ಲ. ಇಲ್ಲಿಂದ ಒಂದು ರಸ್ತೆ ತಾ| ಕಚೇರಿಗೂ ಇನ್ನೊಂದು ಮುಖ್ಯ ಪೇಟೆ ಸಂಪರ್ಕಿಸುತ್ತದೆ. ಪ್ರಯಾಣಿಕರು ಈ ಮೂರು ಜಂಕ್ಷನ್‌ಗಳಲ್ಲಿ ಸರಿಯಾದ ಮಾಹಿತಿ ಸಿಗದೆ ಪೇಟೆ ಬಂದಲ್ಲಿ ಕಿರಿದಾದ ಪೇಟೆಯಲ್ಲಿ ಸಿಲುಕಿಕೊಂಡು ಹೊರಬರಲು ಒದ್ದಾಡುವ ಸ್ಥಿತಿಯಿದೆ. ಒಮ್ಮೆ ಪೇಟೆ ಯೊಳಗೆ ಪ್ರವೇಶಿಸಿದರೆ ಮತ್ತೆ ಹೊರಬರಲು ತ್ರಾಸಪಡಬೇಕು. ಬೈಪಾಸ್‌ ರಸ್ತೆ ಹಾಗೂ ಪೇಟೆಯಿಂದ ಹೊರಟು ಆನೆಕೆರೆ ಕಡೆಯಿಂದ ಬಂದು ಸೇರುವ ಪುಲ್ಕೇರಿ ಆಸುಪಾಸಿನ ಜಂಕ್ಷನ್‌, ರಸ್ತೆಬದಿ ಮೂರ್‍ನಾಲ್ಕು ಕಡೆ ಮಾರ್ಗಸೂಚಿ ಫ‌ಲಕಗಳಿದ್ದು ಅವುಗಳು ಸುವ್ಯವಸ್ಥಿತವಾಗಿದೆ ಪ್ರವಾಸಿ ಕೇಂದ್ರಗಳಿಗೆ ತೆರಳುವ ಮಾರ್ಗಗಳಲ್ಲಿ ಈ ಹಿಂದೆ ಹಾಕಿರುವ ಮಾರ್ಗಸೂಚಿಗಳು ಕೆಲವೊಂದು ಕಡೆ ಮಳೆ, ಗಾಳಿಗೆ ಬಿದ್ದು ಹೋಗಿದ್ದರೆ ಇನ್ನೂ ಕೆಲವೆಡೆ ಅಕ್ಷರಗಳು ಮಾಸಿಹೋಗಿವೆ. ಇವುಗಳನ್ನು ಸರಿಪಡಿ ಸುವ ಕೆಲಸಗಳು ಆದಲ್ಲಿ ಪ್ರವಾಸಿಗರಿಗೆ ಮಾಹಿತಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಭಾಗದ ಪಂಚಾಯತ್‌ ವ್ಯಾಪ್ತಿ ಗಳಲ್ಲಿ ಕೂಡ ಇಂತದ್ದೇ ಸಮಸ್ಯೆಯಿದ್ದು. ಮಾರ್ಗಸೂಚಿ ನಾಮಫ‌ಲಕಗಳ ಮರು ದುರಸ್ತಿಯ ಆವಶ್ಯಕತೆಯಿದೆ.

ಹೆದ್ದಾರಿ ಕಮಾನುಗಳ ಮಾಹಿತಿಗಳೇ ಗೋಚರಿಸುತ್ತಿಲ್ಲ

ಮಂಗಳೂರು- ಮೂಡುಬಿದಿರೆ, ಧರ್ಮಸ್ಥಳ ಭಾಗದಿಂದ ಬಂದು ಸೇರುವ ರಾಷ್ಟ್ರೀಯ ಹೆದ್ದಾರಿಯ ನವೋದಯ ವೃತ್ತದ ಬಳಿ ಕಾರ್ಕಳ ಕಡೆಗೆ ತೆರಳುವ ಮಾರ್ಗದಲ್ಲಿ ಅಳವಡಿಸಲಾದ ಕಮಾನು ಶಿಥಿಲಗೊಂಡಿದೆ.

ಇದರಲ್ಲಿ ತಲುಪಬೇಕಾದ ನಗರಗಳ ಕಿ.ಮೀ. ಅಳಿಸಿಹೋಗಿ ಸರಿಯಾದ ಮಾಹಿತಿ ಸಿಗುತ್ತಿಲ್ಲ. ನಗರ ಪ್ರವೇಶಿಸುವ ಕರಿಯಕಲ್ಲು ಪ್ರವೇಶ ದ್ವಾರದ ಕಮಾನು ಕೂಡ ನಶಿಸುತ್ತ ಬರುತ್ತಿದೆ. ಇನ್ನು ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಜಂಕ್ಷನ್‌ಗಳ ಹಲವೆಡೆ ಕಮಾನು ನಾಮ ಫ‌ಲಕಗಳಲ್ಲಿ ಮಾರ್ಗಸೂಚಿ ಮಾಹಿತಿಗಳು ಮಾಸಿ ಹೋಗಿವೆ. ಕೆಲವೊಂದು ಕಡೆ ಉತ್ತಮ ಸ್ಥಿತಿಯಲ್ಲಿವೆ. ಶಿಥಿಲಗೊಂಡಿರುವುದನ್ನು ದುರಸ್ತಿಗೊಳಿಸಬೇಕಿದೆ.

ಪರಿಶೀಲಿಸಿ ಕ್ರಮ

ಪುರಸಭೆ ವ್ಯಾಪ್ತಿಯ ಮಾರ್ಗಸೂಚಿ ಮಾಹಿತಿಗಳು ಅಸ್ಪಷ್ಟವಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. -ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ

ಸಿದ್ಧಪಡಿಸುತ್ತೇವೆ

ಹೆದ್ದಾರಿಯ ಶಿಥಿಲ ಮಾರ್ಗಸೂಚಿಗಳನ್ನು ಪರಿಶೀಲಿಸಿ, ಅವುಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ವಾಗುವಂತೆ ಸರಿಪಡಿಸಿಕೊಡಲಾಗುವುದು. -ಸೋಮಶೇಖರ, ಎಇಇ(ಪ್ರಭಾರ) ಲೊಕೋಪಯೋಗಿ ಇಲಾಖೆ ಕಾರ್ಕಳ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

5

Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.