ಸಾವಿರ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದ ಇತಿಹಾಸ

ಗುಜ್ಜಾಡಿ ಸರಕಾರಿ ಹಿ.ಪ್ರಾ. ಶಾಲೆಗೆ ಶತಮಾನೋತ್ಸವ ಸಂಭ್ರಮ

Team Udayavani, Dec 2, 2019, 5:09 AM IST

0112KDPP1

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಗಂಗೊಳ್ಳಿ: ಗುಜ್ಜಾಡಿಯ ಪುಟ್ಟ ಊರಿನಲ್ಲಿ ದಿ| ಶಾಬುದ್ಧೀನ್‌ ಅಬ್ದುಲ್‌ ಖಾದಿರ್‌ ಮಾಸ್ತರ್‌ ಅವರಿಂದ ಆರಂಭಗೊಂಡ ಶಾಲೆಯಿದು. ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಕೂಡ ಅವರೇ ಆಗಿದ್ದರು. 1919ರಲ್ಲಿ ಆರಂಭಿಸಿದ ಈ ಜ್ಞಾನದೇಗುಲಕ್ಕೆ ಇದು ಶತಮಾನೋತ್ಸವ ಸಂಭ್ರಮದ ವರ್ಷ.

ದಿ| ಯು. ಅನಂತ ಮಯ್ಯ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಮೊದಲಿಗೆ ಖಾಸಗಿ ಜಾಗವೊಂದರಲ್ಲಿ ಪುಟ್ಟ ಕೊಠಡಿಯಲ್ಲಿ ಆರಂಭಗೊಂಡ ಈ ಶಾಲೆ ಬಳಿಕ ಮ್ಯಾಕ್ಸಿಂ ಮಿರಾಂದರ್‌ ಎಂಬುವರ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 50 ವರ್ಷಗಳ ಹಿಂದೆ ಈಗಿರುವ ಸರಕಾರಿ ಜಾಗದಲ್ಲಿ ಈ ಶಾಲೆಯು ಪಾಠ-ಪ್ರವಚನವನ್ನು ಮುಂದುವರಿಸಿತು. 80-90 ರ ದಶಕದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 900 ರಿಂದ 1 ಸಾವಿರ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದ ಇತಿಹಾಸ ಇದೆ.

287 ಮಕ್ಕಳು
ಹಿಂದೆ ಈ ಶಾಲೆಗೆ ಕಂಚುಗೋಡು, ತ್ರಾಸಿ, ಗಂಗೊಳ್ಳಿ, ಮುಳ್ಳಿಕಟ್ಟೆ, ಗುಜ್ಜಾಡಿ, ನಾಯಕವಾಡಿ, ಬೆಣೆYರೆ, ಕಳಿಹಿತ್ಲು, ಮತ್ತಿತರ ಕಡೆಗಳಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು.

ಪ್ರಸ್ತುತ ಈ ಶಾಲೆಯಲ್ಲಿ 1 ರಿಂದ 8ರವರೆಗಿನ ತರಗತಿಯಲ್ಲಿ 229 ಮಂದಿ ಹಾಗೂ ಪೂರ್ವಪ್ರಾಥಮಿಕ (ಎಲ್‌ಕೆಜಿ, ಯುಕೆಜಿ)ದಲ್ಲಿ 58 ಮಕ್ಕಳು ಸಹಿತ ಒಟ್ಟು 287 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮವನ್ನು ಕೂಡ ಅಳವಡಿಸಿಕೊಂಡಿದ್ದು, ಇದಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದ್ಯ ಮುಖ್ಯ ಶಿಕ್ಷಕ ಸಹಿತ 9 ಮಂದಿ ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕಿಯರಿದ್ದಾರೆ. ರಾಮನಾಥ್‌ ಚಿತ್ತಾಲ್‌ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು, ಉಮೇಶ್‌ ಎಚ್‌. ಮೇಸ್ತ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳು
ಉದ್ಯಮಿಗಳಾದ ನಾರಾಯಣ ಟಿ. ಪೂಜಾರಿ ಮುಂಬಯಿ, ಶೇಷಯ್ಯ ಕೋತ್ವಾಲ್‌, ಪದ್ಮನಾಭ ಕೋತ್ವಾಲ್‌, ಗಣಪತಿ ಮೇಸ್ತ, ದಯಾಕರ ಮೇಸ್ತ, ಲಂಡನ್‌ನಲ್ಲ ವೈದ್ಯರಾಗಿರುವ ಡಾ| ಪ್ರಭಾಕರ ಮೇಸ್ತ, ಡಾ| ಅರುಣ ಕುಮಾರ್‌, ಡಾ| ಅರುಣ ಕುಮಾರ್‌ ಜಿ., ಇತಿಹಾಸ ತಜ್ಞ ಡಾ| ವಸಂತ ಮಾಧವ ಕೊಡಂಚ, ಸಿಂಡಿಕೇಟ್‌ ಬ್ಯಾಂಕ್‌ ಎಜಿಎಂ ಗಣಪತಿ ಶೇರುಗಾರ್‌, ನಟ ಚಂದ್ರಕಾಂತ ಕೊಡಪಾಡಿ, ಕುಂದಾಪುರ ತಾ| ಬೋರ್ಡ್‌ ಅಧ್ಯಕ್ಷರಾಗಿದ್ದ ಮಂಜು ನಾಯ್ಕ, ಕುಂದಾಪುರ ತಾ| ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್‌ ಮೇಸ್ತ ಸೇರಿದಂತೆ ಹಲವು ಮಂದಿ ಸಾಧಕರು ಈ ಶಾಲೆಯಲ್ಲಿ ಕಲಿತಿದ್ದಾರೆ.

ದಾನಿಗಳ ನೆರವು
ಗಣಪತಿ ಮೇಸ್ತ-ಸಹೋದರರು, ಪ್ರಶಾಂತ್‌ ಹನಿವಲ್‌, ಶಾಂತರಾಜ್‌ ಕೆ., ನಾರಾಯಣ ಟಿ. ಪೂಜಾರಿ, ಗೋಪಾಲ್‌ ಪುತ್ರನ್‌ ಸುಳೆÕ, ದುಬೈ ಉದ್ಯಮಿ ದಿ| ಕೊಂಚಾಡಿ ಗಣಪತಿ ಶೆಣೈ ಟ್ರಸ್ಟ್‌ನಿಂದ ಶಾಲೆಯ ಕಟ್ಟಡ ನವೀಕರಣ, ಐಶ್ವರ್ಯ ಡಿ. ಮೇಸ್ತ ಶಾಲಾ ವಾಹನವನ್ನು ಒದಗಿಸಿಕೊಟ್ಟಿದ್ದಾರೆ.

ಬೇಡಿಕೆಗಳು
ಸ್ಮಾರ್ಟ್‌ ಕ್ಲಾಸ್‌ ಅಗತ್ಯವಿದ್ದು, ಕಂಪ್ಯೂಟರ್‌ ಲ್ಯಾಬ್‌, ಗ್ರೀನ್‌ ಬೋರ್ಡ್‌, ಮುಖ್ಯ ಶಿಕ್ಷಕರ ಕೊಠಡಿ ಸಹಿತ ಅನೇಕ ಬೇಡಿಕೆಗಳಿವೆ.

ಶಾಲಾಭಿವೃದ್ಧಿಯಲ್ಲಿ ಸರಕಾರದ ಜತೆಗೆ ಊರವರು, ಪೋಷಕರು, ದಾನಿಗಳು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದ ನೆರವು ಮಹತ್ತರವಾಗಿದೆ. ಜನವರಿ – ಫೆಬ್ರವರಿಯಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ಊರವರ ಸಹಕಾರದ ಅಗತ್ಯವಿದೆ.
-ಆನಂದ ಜಿ.,ಮುಖ್ಯ ಶಿಕ್ಷಕರು

ಕಷ್ಟದ ದಿನಗಳಲ್ಲಿ ಕಲಿತ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನನ್ನ ಈವರೆಗಿನ ಬದುಕಿನ ಪಯಣದ ಆರಂಭದ ಮೆಟ್ಟಿಲು ಈ ಶಾಲೆ ಎನ್ನುವುದೇ ಹೆಮ್ಮೆ. ವಿದ್ಯಾರ್ಥಿಯಾಗಿದ್ದಾಗ ಕೃಷಿ ಮಂತ್ರಿಯಾಗಿದ್ದೆ. ಈ ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರ ಮೇಲಿದೆ.
-ನಾರಾಯಣ ಟಿ. ಪೂಜಾರಿ ಮುಂಬಯಿ,
ಉದ್ಯಮಿ,ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.