ಗುಳ್ಳಾಡಿ : ಚುರುಕುಗೊಂಡ ಸಾಂಪ್ರದಾಯಿಕ ಕೊಳ್ಕೆ ಭತ್ತದ ನಾಟಿ ಪದ್ಧತಿ
ಆಳ ಆವೆಮಣ್ಣಿನ ಗಣಿಗಾರಿಕೆಯಿಂದ ನಲುಗಿದ ಗ್ರಾಮೀಣ ಕೃಷಿ ಚಟುವಟಿಕೆ
Team Udayavani, Feb 3, 2020, 5:05 AM IST
ಬೇಳೂರು: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಳ್ಳಾಡಿ ಸುತ್ತಮುತ್ತಲ ಪ್ರದೇಶದಲ್ಲಿ ಭೌಗೋಳಿಕ ವಾಗಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಫಲವತ್ತಾದ ಕೃಷಿಭೂಮಿಯನ್ನು ಒಳಗೊಂಡ ಪ್ರದೇಶಗಳಿದ್ದರೂ ಕೂಡಾ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುವ ಆಳ ಆವೆಮಣ್ಣಿನ ಗಣಿಗಾರಿಕೆ ಹಾಗೂ ಹೊಳೆಸಲಿನಲ್ಲಿ ತುಂಬಿರುವ ಹೂಳಿನಿಂದಾಗಿ ಇಲ್ಲಿನ ಕೃಷಿಕರು ಕೃಷಿ ಚಟುವಟಿಕೆ ಮಾಡಲಾಗದೆ ಸಂಪೂರ್ಣ ನಲುಗಿ ಹೋಗಿದ್ದಾರೆ. ಈ ನಡುವೆಯೂ ಕೂಡಾ ಅಳಿದುಳಿದ ತಮ್ಮ ತುಂಡು ಕೃಷಿ ಭೂಮಿಯಲ್ಲಿ ಗುಳ್ಳಾಡಿಯ ರೈತರು ಶ್ರಮವಹಿಸಿ ಸಾಂಪ್ರದಾಯಿಕವಾಗಿ ಕೊಳ್ಕೆ ಭತ್ತದ ಕೃಷಿಯಲ್ಲಿ ನಿರತರಾಗಿ ಭೂಮಿಯನ್ನು ಹಸನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಸಾಂಪ್ರದಾಯಿಕ ಕೊಳ್ಕೆ ಭತ್ತದ ಕೃಷಿ ಉತ್ತಮ ನೀರಾವರಿಯನ್ನು ಒಳ ಗೊಂಡಿರುವ ಈ ಪ್ರದೇಶದಲ್ಲಿ ಮುಂಗಾರು ಆಗಮಿಸುತ್ತಿದ್ದಂತೆ ಕೃಷಿ ಭೂಮಿಯನ್ನು ಆವರಿಸುವ ನೆರೆಯ ಪರಿಣಾಮ ಮುಂಗಾರಿನಲ್ಲಿ ಭತ್ತದ ನಾಟಿಕಾರ್ಯಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಸ್ವಾಭಾವಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು ಎನ್ನುವ ಛಲದೊಂದಿಗೆ ಶ್ರಮವಹಿಸಿ ಕೃಷಿಭೂಮಿ ನಡುವಿನ ಅವೈಜ್ಞಾನಿಕ ಗಣಿಗಾರಿಕೆಯಿಂದ ಸೃಷ್ಟಿಯಾದ ಹೊಂಡದಲ್ಲಿ ಶೇಖರಣೆಯಾದ ನೀರಿನ ಸಂರಕ್ಷಣೆಯೊಂದಿಗೆ ಸಾಂಪ್ರದಾಯಿಕವಾಗಿ ಕೊಳ್ಕೆ ಭತ್ತದ ಕೃಷಿ ಪದ್ದತಿಯಲ್ಲಿ ಇಲ್ಲಿನ ರೈತರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಆವೆಮಣ್ಣಿನ ಗಣಿಗಾರಿಕಾ ಪ್ರದೇಶ
ಮಲ್ಯಾಡಿ, ಉಳೂ¤ರು, ಕೊçಕೂರು, ಬೇಳೂರು ಹಾಗೂ ಗುಳ್ಳಾಡಿ ಗ್ರಾಮೀಣ ಭಾಗದಲ್ಲಿ ಹಾದು ಹೋಗಿರುವ ಹೊಳೆ ಸಾಲಿನ ಎರಡು ಬದಿಗಳಲ್ಲಿರುವ ನೂರಾರು ಎಕರೆ ಫಲವತ್ತಾದ ಕೃಷಿಭೂಮಿ ಹೊಂದಿದೆ. ಇಂತಹ ಫಲವತ್ತಾದ ಕೃಷಿಭೂಮಿಗಳಿದ್ದರೂ ಕೂಡಾ ಪರಿಸರದಲ್ಲಿ ಕೃಷಿ ಭೂಮಿಗಳ ನಡುವೆ ಅವ್ಯಾಹತವಾಗಿ ನಡೆಯುವ ಆಳ ಆವೆಮಣ್ಣಿನ ಗಣಿಗಾರಿಕೆಯ ಪರಿಣಾಮ ಮುಂಗಾರು ಕೃಷಿ ಚಟುವಟಕೆಗಳಿಗೆ ನೆರೆಯ ಭೀತಿ ಎದುರಾಗುವ ಪರಿಣಾಮ ಮುಂಗಾರಿನಲ್ಲಿ ಖಾತೆ ಭತ್ತದ ಕೃಷಿ ಮಾಡಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಳೆಸಾಲಿನಲ್ಲಿ ತುಂಬಿದೆ
ಅಪಾರ ಪ್ರಮಾಣದ ಹೂಳು ಕುಂದಾಪುರ ತಾಲೂಕಿನಿಂದ ಉಡುಪಿ ತಾಲೂಕಿನ ಉಪ್ಲಾಡಿ ಸೇರಿದಂತೆ ನೂರಾರು ಎಕರೆ ಕೃಷಿಭೂಮಿಗಳ ನಡುವೆ ಹಾದುಹೋಗುವ ಹೊಳೆಸಾಲಿನಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ಶೇಖರಣೆಯಾಗಿರುವ ಪರಿಣಾಮ ಮುಂಗಾರು ಮಳೆ ಆಗಮಿಸುತ್ತಿದ್ದಂತೆ ಹೊಳೆಯಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಕೃಷಿಭೂಮಿಯನ್ನು ವ್ಯಾಪಿಸುತ್ತಿದೆ, ಈ ಹಿನ್ನೆಲೆಯಲ್ಲಿ ಅದೆಷ್ಟೋ ಗ್ರಾಮೀಣ ರೈತರು ಮುಂಗಾರು ಬೆಳೆ ಹಾನಿಯಾಗುವುದರಿಂದ ಹಿಂಗಾರಿನಲ್ಲಿ ಕೊಳ್ಕೆ ಭತ್ತದ ನಾಟಿ ಪದ್ದತಿಯನ್ನು ಅನುಸರಿಸುವ ಪರಿಸ್ಥಿತಿ ಎದುರಾಗಿದೆ.
ವೈಜ್ಞಾನಿಕ ಚಿಂತನೆ ಅಗತ್ಯ
ಕೃಷಿಭೂಮಿ ಸಮೀಪದಲ್ಲಿಯೇ ಹಾದುಹೋದ ಹೊಳೆ ಇದ್ದರೂ ಕೂಡಾ ಅದರಲ್ಲಿ ಶೇಖರಣೆಯಾಗಿರುವ ಅಪಾರ ಹೂಳು ಹಾಗೂ ಕೊಜೆ ಹೊಂಡದಿಂದಾಗಿ ಮುಂಗಾರಿನಲ್ಲಿ ನೆರೆ ಕೃಷಿಭೂಮಿಯನ್ನು ಆವರಿಸುತ್ತಿದೆ. ಹೊಂಡದಲ್ಲಿರುವ ಅಪಾರ ಪ್ರಮಾಣದ ನೀರನ್ನು ಸಂಬಳಿಗೆಯ ( ನೀರನ್ನು ಹೊಂಡದಿಂದ ಎತ್ತುವ ಕೃಷಿ ಸಲಕರಣೆ) ಸಹಾಯದಿಂದ ಕೃಷಿಭೂಮಿಗೆ ಹಾಯಿಸಿಕೊಂಡು ಹಿಂಗಾರಿನಲ್ಲಿ ಕೊಳ್ಕೆ ಭತ್ತದ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದಲೂ ಹೊಳೆಸಾಲಿನಲ್ಲಿ ಶೇಖರಣೆಯಾದ ಹೂಳೆತ್ತುವ ಮಹತ್ವದ ಕಾರ್ಯಕ್ಕೆ ಸಂಬಂಧಪಟ್ಟವರು ವೈಜ್ಞಾನಿಕವಾಗಿ ಚಿಂತನೆ ನಡೆಸಿದಾಗ ಮಾತ್ರ ಈ ಭಾಗದ ಕೃಷಿ ಚಟುವಟಿಕೆಯನ್ನು ವರ್ಷದಲ್ಲಿ ಖಾತೆ ಹಾಗೂ ಎರಡನೆಯ ಭತ್ತದ ಬೆಳೆ ಕೊಳ್ಕೆ ಕೃಷಿ ಪದ್ದತಿಯನ್ನು ಅನುಸರಿಸಲು ಸಾಧ್ಯವಿದೆ.
-ಪ್ರಫುಲ್ಲಾ ಕೃಷ್ಣಯ್ಯ ಶೆಟ್ಟಿ,
ಗುಳ್ಳಾಡಿ ಹೊಸಿಮನೆ,
ಸಾಂಪ್ರದಾಯಿಕ ಕೃಷಿಕರು.
- ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.