ಗುಂಡಿಗೋಳಿ ರಸ್ತೆ: ಗುಂಡಿ ಮುಚ್ಚಲು ಗ್ರಾಮಸ್ಥರ ಆಗ್ರಹ
Team Udayavani, Oct 14, 2019, 5:46 AM IST
ಬಸ್ರೂರು: ಬಸ್ರೂರು ಬಸ್ ನಿಲ್ವಾಣದ ತುಸು ದೂರದಲ್ಲಿ ನೀರಿನ ಟ್ಯಾಂಕ್ ಹತ್ತಿರ ಗುಂಡಿಗೋಳಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿಯಿಂದ ಆರಂಭವಾಗುವ ತಿರುವಿನಲ್ಲೆ ದೊಡ್ಡ ಹೊಂಡ ಬಿದ್ದಿದೆ. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿದಾಗ ಪಾದಚಾರಿ, ವಾಹನ ಸವಾರರಿಗೆ ಭಾರೀ ತ್ರಾಸದಾಯಕವಾಗಿದೆ.
ಮುಂದೆ 100 ಮೀ. ಉದ್ದಕ್ಕೆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು ಅದು ಮುಗಿಯುತ್ತಲೇ ಹೊಂಡ ಬಿದ್ದ ಮಣ್ಣಿನ ರಸ್ತೆಯಲ್ಲಿ ಸಾಗುವುದು ಅಸಾಧ್ಯದ. ಯಾವಾಗಲೇ ಹಾಕಲಾದ ಡಾಮಾರು ರಸ್ತೆಯ ಕಲ್ಲುಗಳು ಎದ್ದು ಬಂದಿದ್ದು ಮಳೆಗಾಲ ಮುಗಿದರೂ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ಇಲ್ಲಿದೆ. ಈ ರಸ್ತೆ ಮುಂದೆ ಗುಂಡಿಗೋಳಿಗೆ ಸಾಗಿ ಅಲ್ಲಿಂದ ಮೇರ್ಡಿಗೆ ತಲುಪುತ್ತದೆ. ಸ್ಥಳೀಯ ಕೆಲವು ಮಂದಿ ಈ ರಸ್ತೆಯ ದುಃಸ್ಥಿತಿಯ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಆದರೆ ಗುಂಡಿಗೋಳಿ ರಸ್ತೆಗೆ ಇದುವರೆಗೂ ಕಾಯಕಲ್ಪಗೊಂಡಿಲ್ಲ.
ಕಚೇರಿ ತಲುಪಲು ಅನನುಕೂಲ
ನಾನು ಪ್ರತಿದಿನ ಕುಂದಾಪುರಕ್ಕೆ ಉದ್ಯೋಗ ನಿಮಿತ್ತ ರಾಜ್ಯ ಹೆದ್ದಾರಿಗೆ ಬಂದು ಬಸ್ ಮೂಲಕ ಪ್ರಯಾಣಿಸುತ್ತಿದ್ದೇನೆ. ದ್ವಿಚಕ್ರ ವಾಹನ ಇದ್ದರೂ ಈ ರಸ್ತೆಯಲ್ಲಿ ಓಡಿಸಲು ಅಸಾಧ್ಯ. ಸ್ಕೂಟರ್ ಬಿಟ್ಟು ನಡೆದೇ ಸಾಗುವ ಎಂದರೆ ನಾನು ಕರ್ತವ್ಯ ನಿರ್ವಹಿಸು ತ್ತಿದ್ದ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ
-ಸವಿತಾ, ಗುಂಡಿಗೋಳಿ ನಿವಾಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.