ಗುಂಡ್ಮಿ:ರಸ್ತೆ ಸಮಸ್ಯೆ ಪರಿಹಾರಕ್ಕೆ ಮತ್ತೆ ವಾಟ್ಸ್ ಆ್ಯಪ್ ಅಸ್ತ್ರ
Team Udayavani, Jun 10, 2018, 6:00 AM IST
ಕೋಟ: ಕಲುಷಿತ ಕೆಂಪು ನೀರು ಪೂರೈಕೆಯಾಗುತ್ತಿದ್ದ ಕುರಿತು ವಾಟ್ಸ್ ಆ್ಯಪ್ ಮೂಲಕ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ 14ನೇ ವಾರ್ಡ್ ಬಡಾ ಆಲಿತೋಟದ ನಿವಾಸಿಗಳು ಇದೀಗ 10 ವರ್ಷದಿಂದ ದುರಸ್ತಿಕಾಣದ ರಸ್ತೆ ಸಮಸ್ಯೆ ಪರಿಹಾರಕ್ಕಾಗಿ ಮತ್ತೂಮ್ಮೆ ವಾಟ್ಸ್ ಆ್ಯಪ್ ಮೂಲಕ ಹೋರಾಟಕ್ಕಿಳಿದು ಜನ ಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಸಮಸ್ಯೆಗೆ ವಾಟ್ಸ್ ಆ್ಯಪ್ ವಾರ್
ಇಲ್ಲಿನ ಬಡಾ ಆಲಿತೋಟ, ಅಡಿಗಳ್ತಾರು ಸಂಪರ್ಕಿಸುವ ಸುಮಾರು 1 ಕಿ.ಮೀ. ರಸ್ತೆ ಸಂಪೂರ್ಣ ಹಡಗೆಟ್ಟಿದ್ದು ಡಾಂಬರು ಕಾಣದೆ ಹಲವು ವರ್ಷ ಕಳೆದಿದೆ. ಆಟೋ ಮುಂತಾದ ವಾಹನಗಳು ಇಲ್ಲಿಗೆ ಬಾಡಿಗೆಗೆ ಬರಲು ನಿರಾಕರಿಸುತ್ತವೆ. ಮಳೆಗಾಲದಲ್ಲಿ ಸಮಸ್ಯೆ ಹೇಳ ತೀರದು. ಜತೆಗೆ ಹಲವು ಸಣ್ಣ-ಪುಟ್ಟ ಅಪಘಾತಗಳು ಕೂಡ ನಡೆದಿವೆೆ. ಈ ಕುರಿತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ವಾಟ್ಸ್ ಆ್ಯಪ್ ವಾರ್‌ನ ಮೊರೆ ಹೋಗಿದ್ದಾರೆ.
ಎನಿದು ವಾಟ್ಸ್ ಆ್ಯಪ್ ವಾರ್ ?
ಇದೇ ಮೇ 29ರಿಂದ ನಾಲ್ಕೈದು ದಿನ ಈ ಭಾಗಕ್ಕೆ ಪ.ಪಂ.ನಿಂದ ಕಲುಷಿತ ನೀರು ಪೂರೈಕೆಯಾಗುತಿತ್ತು. ಈ ಕುರಿತು ಜನಪ್ರತಿನಿಧಿಗಳಿಗೆ ದೂರು ನೀಡಿದರು ಪ್ರಯೋಜನವಾಗದಿದ್ದಾಗ ವಾಟ್ಸ್ ಆ್ಯಪ್‌ನಲ್ಲಿ “ಮತ್ತೆ ಹೋರಾಟ’ ಎನ್ನುವ ಗ್ರೂಪ್‌ರಚಿಸಿ ಹತ್ತಾರು ಮಂದಿ ಗ್ರಾಮಸ್ಥರನ್ನು ಸದಸ್ಯರನ್ನಾಗಿಸಿಕೊಂಡು ಪ.ಪಂ. ಮುಖ್ಯಾಧಿಕಾರಿಗಳು, ಜನಪ್ರತಿನಿಧಿ ಗಳನ್ನು ತರಾಟೆಗೆ ತೆಗೆದುಕೊಂಡರು. ಇದು ದೊಡ್ಡ ಮಟ್ಟದ ಜನಧ್ವನಿಯಾಗಿ ರೂಪುಗೊಳ್ಳು ತ್ತಿದ್ದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆ ಪರಿಹರಿಸಿದ್ದರು. ಹಿಂದೊಮ್ಮೆ ವಿದ್ಯುತ್ ವೋಲ್ಟೆàಜ್ ಸಮಸ್ಯೆ ಯಾದಗ ಕೂಡ ಇದೇ ರೀತಿ ಗಮನ ಸೆಳೆದು ಯಶಸ್ವಿಯಾಗಿತ್ತು. ಹೀಗಾಗಿ ರಸ್ತೆ ದುರಸ್ತಿಯ ಆಗ್ರಹಕ್ಕೂ ಇದೇ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಜನಪ್ರತಿನಿಧಿಗಳ ಸ್ಪಂದನೆ
ಗ್ರೂಪ್‌ನಲ್ಲಿ ಚರ್ಚೆ ಬಿಸಿ ಎರುತ್ತಿದ್ದಂತೆ ಜನಪ್ರತಿನಿಧಿಗಳು ಇದೀಗ ರಸ್ತೆ ಅಭಿವೃದ್ಧಿ ಗೊಳಿಸಲು ಭರವಸೆ ನೀಡುತ್ತಿದ್ದಾರೆ ಹಾಗೂ ಸ್ಥಳೀಯರ ನಿಯೋಗ ಶಾಸಕರನ್ನು ಭೇಟಿಯಾಗಿ ತಮ್ಮ ಹೋರಾಟದ ಕುರಿತು ತಿಳಿಸಿ, ರಸ್ತೆ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಿದ್ದು ಆದಷ್ಟು ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ಕೂಡ ಶಾಸಕರು ನೀಡಿದ್ದಾರೆ.
ಯಶಸ್ವಿ ಹೋರಾಟದ ವೇದಿಕೆ
ಸಮಸ್ಯೆಯೊಂದರ ವಿರುದ್ಧ ಹೋರಾಟಕ್ಕಾಗಿ ಇವರು ಬಳಸಿಕೊಂಡ ವಾಟ್ಸ್ ಆ್ಯಪ್ ಹೋರಾಟ ಇದೀಗ ವಾಟ್ಸ್ ಆ್ಯಪ್ ವಾರ್ ಎನ್ನುವ ಹೆಸರಲ್ಲಿ ಜನಪ್ರೀಯಗೊಳ್ಳುತ್ತಿದೆ. ಸಮಸ್ಯೆಗೆ ಸಂಬಂಧಿಸಿದವರನ್ನು ಒಗ್ಗೂಡಿಸಲು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಲ್ಲಿ ಈ ತಂತ್ರ ಗಮನಸೆಳೆಯುತ್ತಿದೆ.
ಕಾಮಗಾರಿ ಭರವಸೆ
ಹತ್ತು ವರ್ಷದಿಂದ ನಮ್ಮಲ್ಲಿ ರಸ್ತೆ ಸಮಸ್ಯೆ ಇತ್ತು. ಇಲ್ಲಿಯ ತನಕ ಹಲವು ಬಾರಿ ಜನಪ್ರತಿನಿಧಿಗಳಿಗೆ,ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗಿರಲಿಲ್ಲ. ಇದೀಗ ನಮ್ಮೂರಿನ ಯುವಕರು ವಾಟ್ಸ್ ಆ್ಯಪ್ ಮೂಲಕ ಸಮಸ್ಯೆಯ ಕುರಿತು ಹೋರಾಟ ನಡೆಸಿದರ ಫಲವಾಗಿ ರಸ್ತೆ ಸಮಸ್ಯೆಯ ಕುರಿತು ಎಲ್ಲರಿಗೂ ತಿಳಿದಿದೆ. ಜನಪ್ರತಿನಿಧಿಗಳು ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.
– ಬಸವ ಕಾಂಚನ್ ಗುಂಡ್ಮಿ, ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.