ನಿಟ್ಟೆ ಕಾಲೇಜಿನಲ್ಲಿ ‘ಹ್ಯಾಕಥಾನ್’ ಕೋಡಿಂಗ್ ಸ್ಪರ್ಧೆ
Team Udayavani, Sep 20, 2018, 5:34 PM IST
ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆಯುವವರಿಗಾಗಿ ಹಾಗೂ ಕೋಡಿಂಗ್ ನಲ್ಲಿ ಪರಿಣಿತರಿಗಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ‘ಹ್ಯಾಕಥಾನ್ – 2ಕೆ18’ ಎಂಬ ವಿಶೇಷ ಕಾರ್ಯಾಗಾರವನ್ನು ನಿಟ್ಟೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ನೀವು ಮೊದಲಿಗೆ ನಿಮ್ಮ ಹೆಸರನ್ನು ಗೂಗಲ್ ಫಾರ್ಮ್ ತುಂಬುವುದರ ಮೂಲಕ ನೋಂದಾಯಿಸಿಕೊಳ್ಳಬೇಕು. ಇದಾದ ಬಳಿಕ ಸೆಪ್ಟಂಬರ್ 22 ಮತ್ತು 23ರಂದು 40 ನಿಮಿಷಗಳ Online ಪರೀಕ್ಷೆಯೊಂದನ್ನು ಬರೆಯಬೇಕಾಗಿರುತ್ತದೆ. ಈ ಪರೀಕ್ಷೆಯ ಮೂಲಕ ಆಯ್ಕೆಗೊಳ್ಳುವ 51 ಸ್ಪರ್ಧಿಗಳು ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ.
ಹೀಗೆ ಆಯ್ಕೆಗೊಳ್ಳುವ 51 ಸ್ಪರ್ಧಿಗಳು 100 ರೂಪಾಯಿಗಳ ನೋಂದಾವಣೆ ಶುಲ್ಕವನ್ನು ನೀಡಿ ಸೆಪ್ಟಂಬರ್ 29ರಂದು ನಡೆಯಲಿರುವ ‘ಹ್ಯಾಕಥಾನ್ – 2ಕೆ18’ ಕಾರ್ಯಾಗಾರದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ. ಇಲ್ಲಿ ವಿಜೇತರಾಗುವ ಭಾಗೀದಾರರಿಗೆ 10,000 ರೂಪಾಯಿಗಳ ನಗದು ಬಹುಮಾನವಿರುತ್ತದೆ. ಮತ್ತು ಮೊದಲ ಹತ್ತು ವಿಜೇತರಿಗೆ ಆಕರ್ಷಕ ಬಹುಮಾನಗಳೂ ಕಾದಿವೆ.
ಈ ಕಾರ್ಯಾಗಾರದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ರಜತ್ ಭಟ್ (+919902482348) [email protected], ಹರ್ಷಿತ್ ಎಸ್. ಕೆ. (+918197287939) [email protected], ಅಲ್ತಾಫ್ ಶೇಖ್ (+918147299298) [email protected] ಅವರನ್ನು ಮೂಲಕ ಸಂಪರ್ಕಿಸಬಹುದಾಗಿರುತ್ತದೆ. ಈ ವಿಶೇಷ ಕಾರ್ಯಾಗಾರವನ್ನು IoT ಕ್ಲಬ್ CFSI ಆಶ್ರಯದಲ್ಲಿ NAIN (ಕರ್ನಾಟಕ ಸರಕಾರದ ಐಟಿ, ಬಿಟಿ, ಮತ್ತು ಎಸ್ ಆ್ಯಂಡ್ ಟಿ.ಯ ಒಂದು ಸಹಸಂಸ್ಥೆ) ಇದರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.