ಎಂದೋ ಮುಗಿಯಬೇಕಿತ್ತು; ಇನ್ನೂ ಬೇಕಂತೆ 10 ತಿಂಗಳು !


Team Udayavani, Jun 4, 2018, 8:27 AM IST

23.jpg

ಉಡುಪಿ: ಕುಂದಾಪುರದ ಶಾಸ್ತ್ರಿ ಪಾರ್ಕ್‌ ಮೇಲ್ಸೇತುವೆ, ಉಡುಪಿಯ ಕರಾವಳಿ ಬೈಪಾಸ್‌ ಕಾಮಗಾರಿ, ಪಡುಬಿದ್ರಿಯಲ್ಲಿ ರಾ.ಹೆ. ಕಾಮಗಾರಿ ಮುಂದಿನ ಮಾರ್ಚ್‌ ಕೊನೆಯೊಳಗೆ ಪೂರ್ಣಗೊಳ್ಳಲಿದೆ ಎಂದು ನವಯುಗ ಕಂಪೆನಿ ತಿಳಿಸಿದೆ. ಏತನ್ಮಧ್ಯೆ ಕಾಮಗಾರಿ ವಿಳಂಬವಾಗಿ ಅಪಘಾತಗಳು ಹೆಚ್ಚಿವೆ, ಕಾಮಗಾರಿ ಅಪೂರ್ಣವಾಗಿದ್ದರೂ ಏಕೆ ಟೋಲ್‌ ಸಂಗ್ರಹ ಮಾಡುತ್ತಿದ್ದೀರಿ ಎಂದು ಕುಂದಾಪುರ ಸಹಾಯಕ ಕಮಿಷನರ್‌ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ತಲಪಾಡಿಯಿಂದ ನಂತೂರು, ಸುರತ್ಕಲ್‌ನಿಂದ ಕುಂದಾಪುರ ವರೆಗೆ 90 ಕಿ.ಮೀ. ಕಾಮಗಾರಿ 2013ರಲ್ಲಿ ಮುಗಿಯಬೇಕಿತ್ತು. ಅವಧಿ ವಿಸ್ತರಣೆಯಾಗುತ್ತ ಹೋಗಿ 2018ರ ಮಾರ್ಚ್‌ನಲ್ಲಿ ಮುಗಿಸುತ್ತೇವೆಂದು ಹೇಳಿದ್ದರೂ ಈಗ 2019ರ ಮಾರ್ಚ್‌ ವರೆಗೆ ವಿಸ್ತರಿಸಿದ್ದಾರೆ.

ವಿಳಂಬಕ್ಕೆ ಕಾರಣವೇನು ?
ಕುಂದಾಪುರ ಮೇಲ್ಸೇತುವೆ ಕಾಮಗಾರಿ ಹೆಚ್ಚುವರಿ ಕೆಲಸವಾಗಿದೆ. ಉಡುಪಿ ಕರಾವಳಿ ಬೈಪಾಸ್‌ ಕಾಮಗಾರಿ ಮೂಲ ನಕಾಶೆಯಲ್ಲಿರಲಿಲ್ಲ. ಸಾರ್ವಜನಿಕರ ಮನವಿ ಮೇರೆಗೆ ಹೊಸ ವಿನ್ಯಾಸದಂತೆ ಸೇರ್ಪಡೆಯಾಗಿದೆ. ಮೂಲ ನಕಾಶೆಯಲ್ಲಿ ಪಡುಬಿದ್ರಿಯಲ್ಲಿ ಬೈಪಾಸ್‌ ನಿರ್ಮಿಸುವುದೆಂದು ಇತ್ತು. ರಾಜ್ಯ ಸರಕಾರ ಇದಕ್ಕೆ ಒಪ್ಪಿಗೆ ಕೊಡದೆ ಈಗಾಗಲೇ ಇರುವ ಸ್ಥಳದಲ್ಲಿ ಅಗಲಗೊಳಿಸಲು ಸೂಚನೆ ನೀಡಿದ ಕಾರಣ ಈಗ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಭೂಸ್ವಾಧೀನ ನಡೆದು ಕಾಮಗಾರಿ ಆರಂಭವಾಗಿದೆ.

ಕುಂದಾಪುರ ಮೇಲ್ಸೇತುವೆ ಕಾಮಗಾರಿ ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಬಾರಿಯರ್‌ ಕೆಲಸ ಮಾತ್ರ ಬಾಕಿ ಇದೆ. ಸಾರ್ವಜನಿಕ ಬಳಕೆಗೆ ಇದು ಅಕ್ಟೋಬರ್‌-ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಬಹುದು. ಪಡುಬಿದ್ರಿಯಲ್ಲಿ 1.3 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಇದ್ದು ಸರ್ವಿಸ್‌ ರಸ್ತೆ ಹೊರತುಪಡಿಸಿ ನವೆಂಬರ್‌ನಲ್ಲಿಯೂ ಸರ್ವಿಸ್‌ ರಸ್ತೆ ಸೇರಿಸಿ ಮಾರ್ಚ್‌ನಲ್ಲಿಯೂ ಮುಕ್ತಾಯಗೊಳ್ಳಬಹುದು ಎನ್ನುತ್ತಾರೆ ನವಯುಗ ಕಂಪೆನಿ ಮುಖ್ಯ ಯೋಜನಾ ನಿರ್ದೇಶಕ ಶಂಕರ್‌. ತಲಪಾಡಿ ಸಮೀಪ ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಇದು ಮೂಲ ಒಪ್ಪಂದದಲ್ಲಿ ಇರಲಿಲ್ಲ. ಇದರ ವಿನ್ಯಾಸವೂ ಬದಲಾಗಿದೆ. ಗುತ್ತಿಗೆದಾರ ಕಂಪೆನಿಯವರಿಗೆ ಹಣಕಾಸು ಮುಗ್ಗಟ್ಟು ಇರಬಹುದು. ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ನಡೆದ ಕಾಮಗಾರಿಗೆ ಟೋಲ್‌ ಸಂಗ್ರಹ
ಒಟ್ಟು ಕಾಮಗಾರಿಯಲ್ಲಿ 8.3 ಕಿ.ಮೀ. ಮಾತ್ರ ಕೆಲಸ ಪೂರ್ಣವಾಗಿಲ್ಲ. ಎಷ್ಟು ಕಾಮಗಾರಿ ನಡೆದಿದೆಯೋ ಅಷ್ಟಕ್ಕೆ ಮಾತ್ರ ಟೋಲ್‌ ಸಂಗ್ರಹ ಮಾಡುತ್ತಿದ್ದೇವೆ. ಇದು ಟೋಲ್‌ ನೀತಿಯನುಸಾರವೇ ನಡೆಯುತ್ತಿದೆ. 
ಶಂಕರ್‌, ಮುಖ್ಯ ಯೋಜನಾ ನಿರ್ದೇಶಕ, ನವಯುಗ ಕಂಪೆನಿ

ಟಾಪ್ ನ್ಯೂಸ್

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fraudd

Hiriydaka: ಆನ್‌ಲೈನ್‌ ಮೂಲಕ ಯುವತಿಗೆ 2.80 ಲಕ್ಷ ರೂ. ವಂಚನೆ

1

Udupi: ಅಧಿಕ ಲಾಭದ ಆಮಿಷ; ಲಕ್ಷಾಂತರ ರೂ. ವಂಚನೆ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.