ಹಾಲಾಡಿ ಭತ್ತಗುಳಿಯ ಬಂಜರು ಭೂಮಿಯಲ್ಲಿ ಕೃಷಿ ಕ್ರಾಂತಿ
26 ಕೊರಗ ಕುಟುಂಬಗಳಿಂದ ತಲಾ ಒಂದು ಎಕರೆ ಜಮೀನಿನಲ್ಲಿ ಸಮುದಾಯ ಕೃಷಿ
Team Udayavani, Jan 11, 2023, 7:25 AM IST
ಕುಂದಾಪುರ: ಕೃಷಿಯಿಂದ ಜನ ವಿಮುಖರಾಗುತ್ತಿದ್ದಾರೆ ಅನ್ನುವು ದಕ್ಕೆ ಅಪವಾದವೆಂಬಂತೆ ಇಲ್ಲೊಂದು ಊರಿನ ಕೊರಗ ಜನಾಂಗದ 26 ಕುಟುಂಬಗಳು ಒಟ್ಟು ಸೇರಿ ಬಂಜರು ಭೂಮಿಯನ್ನು ಸಮೃದ್ಧ ಫಸಲಿನ ಕೃಷಿ ಭೂಮಿಯನ್ನಾಗಿಸಿ, ಅಡಿಕೆ, ಹಣ್ಣಿನ ಗಿಡಗಳು, ಹೈನುಗಾರಿಕೆ, ಕೋಳಿ ಸಾಕಣೆ ಸಹಿತ ಬಹು ವಿಧದ ಬೆಳೆ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ 26 ಕೊರಗ ಕುಟುಂಬಗಳು ಸರಕಾರದ ಸಮುದಾಯ ಕೃಷಿ ಯೋಜನೆಯಡಿ ವಿವಿಧ ಸವಲತ್ತುಗಳನ್ನು ಪಡೆದುಕೊಂಡು 4-5 ವರ್ಷಗಳಿಂದ ಶ್ರಮಿಸಿ ಭತ್ತಗುಳಿ ಎಂಬ ಬರಡು ಭೂಮಿಯ 26 ಎಕರೆಯನ್ನು ಕೃಷಿಯೋಗ್ಯವಾಗಿಸಿದ್ದಾರೆ. ಅಡಿಕೆ, ಹಣ್ಣಿನ ಮರಗಳಲ್ಲಿ ಈಗ ಫಸಲು ಬರುತ್ತಿದೆ.
ಸಶಕ್ತರನ್ನಾಗಿಸುವ ಉದ್ದೇಶ
ಕೊರಗ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಮನಗಂಡು ಅಧ್ಯಯನ ನಡೆಸಿದಾಗ ಜೀವನಶೈಲಿ, ಅನಕ್ಷರತೆ, ಅಪೌಷ್ಟಿಕತೆ ಕಾರಣವೆಂದು ತಿಳಿಯಿತು. ಇದಕ್ಕಾಗಿ ಕೊರಗ ಅಭಿವೃದ್ಧಿ ಸಂಘಟನೆಗಳು 2010ರಲ್ಲಿ ಕೊರಗರ ಉಳಿವಿಗಾಗಿ ಚಳವಳಿ ಹಮ್ಮಿಕೊಂಡಿದ್ದವು. ಪರಿಣಾಮವೆಂಬಂತೆ ಸರಕಾರವು ಡಾ| ಮಹಮ್ಮದ್ ಫೀರ್ ನೇತೃತ್ವದಲ್ಲಿ ಜನಾಂಗದವರ ಕುಂದು ಕೊರತೆ ಮತ್ತು ಶ್ರೇಯೋಭಿವೃದ್ಧಿಗಾಗಿ ಸಮಿತಿ ರಚಿಸಿತು. ಆರ್ಥಿಕವಾಗಿ ಸಶಕ್ತರನ್ನಾಗಿಸಲು ಕನಿಷ್ಠ 2.5 ಎಕರೆ ಜಮೀನನ್ನು ಸರಕಾರದಿಂದ ಮಂಜೂರು ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ, ಆರ್ಥಿಕ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವಂತೆ ಸಮಿತಿ ವರದಿ ನೀಡಿತ್ತು.
26 ಎಕರೆ ಮಂಜೂರು
ಹಾಲಾಡಿಯಲ್ಲಿ 26 ಕುಟುಂಬಗಳಿಗೆ ತಲಾ 1 ಎಕರೆ ಮಂಜೂರಾಗಿದ್ದು, ಕುಮಾರದಾಸ್ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಪ್ರತೀ ದಿನ ಶ್ರಮದಾನದ ಮೂಲಕ ದಟ್ಟ ಅರಣ್ಯ ಪ್ರದೇಶವನ್ನು ಹದಗೊಳಿಸಿ ಕೃಷಿಗೆ ಪೂರಕವಾಗಿಸಿದರು. ಅನಂತರ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾ.ಪಂ. ಹಾಲಾಡಿ, ಕೃಷಿ ಇಲಾಖೆ ಮತ್ತು ಶಾಸಕರ ಸಹಕಾರದೊಂದಿಗೆ ಈ ಜಾಗದಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಅಳವಡಿಸಿಕೊಂಡು ತರಹೇವಾರಿ ಕೃಷಿ ಮಾಡಿದ್ದಾರೆ. ನರೇಗಾ, ತೋಟಗಾರಿಕೆ ಇಲಾಖೆ ಸಹಾಯಧನದೊಂದಿಗೆ ಅಡಿಕೆ ತೋಟ ನಿರ್ಮಿಸಿದ್ದಾರೆ.
ಮಿಶ್ರ ಬೆಳೆ, ಉಪಕಸುಬು
ಭತ್ತಗುಳಿಯ ರೈತರು ತಮ್ಮ 1 ಎಕರೆ ಜಮೀನಿನ ಪೈಕಿ ಅರ್ಧ ಎಕರೆಯಲ್ಲಿ ಅಡಿಕೆ ತೋಟ ರಚಿಸಿ, ಉಳಿದ ಭಾಗದಲ್ಲಿ ಬಾಳೆ, ಹಣ್ಣಿನ ಗಿಡಗಳು, ಜೇನು ಕೃಷಿಯಂತಹ ಮಿಶ್ರ ಬೆಳೆಯೊಂದಿಗೆ ಕೋಳಿ ಸಾಕಣೆ, ಹೈನುಗಾರಿಕೆ, ಎರೆಹುಳ ಘಟಕ ಅಳವಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ನೀರಿನ ಮಿತವ್ಯಯ ಸಾಧಿಸಿದ್ದಾರೆ.
ಹಾಲಾಡಿ, ಕೊಕ್ಕರ್ಣೆ, ಪೆರ್ಡೂರು, ಶಿರ್ವ ಸೇರಿದಂತೆ ಜಿಲ್ಲೆಯ ವಿವಿಧೆಡೆ 430 ಕೊರಗ ಕುಟುಂಬಗಳಿಗೆ 450 ಎಕರೆ ಜಮೀನು ನೀಡಲಾಗಿದೆ. ಈ ಪೈಕಿ ಹಾಲಾಡಿಯಲ್ಲಿ ಮಾದರಿಯಾಗಿ ಕೃಷಿ ಮಾಡಿದ್ದಾರೆ.
– ದೂದ್ ಪೀರ್, ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಇಲಾಖೆ
ಸಮುದಾಯವಾಗಿ ಶ್ರಮಿಸಿದಾಗ ಏನನ್ನೂ ಸಾಧಿಸಬಹುದು. ಅದಕ್ಕೆ ಹಾಲಾಡಿಯ ಕೊರಗ ಕುಟುಂಬದವರು ಸಾಕ್ಷಿ. ಇದು ಎಲ್ಲರಿಗೂ ಮಾದರಿ.
– ಕುಮಾರದಾಸ್, ಭತ್ತಗುಳಿ ನಿವಾಸಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.