ಹಾಳೆಕಟ್ಟೆ -ಕಲ್ಕಾರ್ ಸಂಪರ್ಕ ರಸ್ತೆ ಸಂಚಾರ ದುಸ್ತರ
Team Udayavani, Aug 21, 2019, 5:22 AM IST
ಪಳ್ಳಿ: ಕಲ್ಯಾ ಗ್ರಾ.ಪಂ. ವ್ಯಾಪ್ತಿಯ ಹಾಳೆಕಟ್ಟೆ- ಕಲ್ಕಾರ್ ಸಂಪರ್ಕ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು ವಾಹನ ಸವಾರರು ಸಂಕಷ್ಟಪಡುವಂತಾಗಿದೆ.
ರಸ್ತೆಯು ಸುಮಾರು 4 ಕಿ.ಮೀ. ಉದ್ದವಿದ್ದು, 2 ಕಿ.ಮೀ. ರಸ್ತೆಯು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕಳೆದ ಜನವರಿಯಲ್ಲಿ ಮರುಡಾಮರೀಕರಣಗೊಂಡಿತ್ತು. ಈ ಹಿಂದೆ ಸ್ಥಳೀಯರು ಕ್ರಷರ್ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಸಿದ್ದ ಪರಿಣಾಮ ಕ್ರಷರ್ ಮಾಲಕರು ಅಲ್ಲಲ್ಲಿ ತೇಪೆಕಾರ್ಯ ನಡೆಸಿದ್ದು ಬಿಟ್ಟರೆ ಉಳಿದ 2 ಕಿ.ಮೀ. ರಸ್ತೆಗೆ ಯಾವುದೇ ಕಾಮಾಗಾರಿ ನಡೆದಿಲ್ಲ.
ಡಾಮರೀಕರಣ ನಡೆಸದೆ ಇರುವ ಈ 2 ಕಿ.ಮೀ. ರಸ್ತೆ ಬೃಹತ್ ಹೊಂಡಗಳಿಂದ ಕೂಡಿದ್ದು, ಇವುಗಳಲ್ಲಿ ಮಳೆ ನೀರು ನಿಲ್ಲುತ್ತಿರುವ ಪರಿಣಾಮ ದ್ವಿಚಕ್ರ ವಾಹನ ಸವಾರರು ಸಂಕಷ್ಟಪಡುವಂತಾಗಿದೆ.
ಹಾಳೆಕಟ್ಟೆಯಲ್ಲಿರುವ ಗ್ರಾ.ಪಂ. ಹಾಗೂ ಗ್ರಾಮಕರಣಿಕರ ಕಚೇರಿ ಸಂಪರ್ಕಿಸಲು ಈ ರಸ್ತೆ ಅತ್ಯವಶ್ಯ. ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು ಜನರು ಕಾರ್ಕಳ, ಪಳ್ಳಿ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಪಳ್ಳಿ-ಮಣಿಪಾಲ ಸಂಪರ್ಕಕ್ಕೂ ಇದು ಅತೀ ಹತ್ತಿರದ ರಸ್ತೆ. ಆದ್ದರಿಂದ ಶೀಘ್ರ ಬಾಕಿ ಉಳಿದ 2 ಕಿ.ಮೀ ರಸ್ತೆ ಡಾಮರೀಕರಣಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.
ಘನ ವಾಹನ ಸಂಚಾರ
ಈ ಭಾಗದಲ್ಲಿ ಕ್ರಷರ್‌ಗಳಿದ್ದು ಬೃಹತ್ ಲಾರಿಗಳು ಸಂಚರಿಸಿ ರಸ್ತೆಗಳಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಕಳೆದ ನಾಲ್ಕು ತಿಂಗಳ ಹಿಂದೆ ಕಲ್ಯಾ ಕೈರಬೆಟ್ಟು ನಿವಾಸಿಗಳು ಕ್ರಷರ್‌ಗಳ ವಿರುದ್ದ ಬೃಹತ್ ಘನ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದ್ದರು. ಘನವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಫೋನ್-ಇನ್ ಕಾರ್ಯಕ್ರಮದಲ್ಲಿಯೂ ಗ್ರಾಮಸ್ಥರು ಗಮನ ಸೆಳೆದಿದ್ದರು.
– ಸಂದೇಶ ಪಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.