ಧಾರ್ಮಿಕ ಕೇಂದ್ರ, ಶಾಪಿಂಗ್ ಮಾಲ್, ಜಿಮ್ ಬಂದ್
Team Udayavani, Apr 23, 2021, 3:40 AM IST
ಉಡುಪಿ: ಕೋವಿಡ್ ಹಿನ್ನೆಲೆಯಲ್ಲಿ ಸರಕಾರ 14 ದಿನಗಳ ಭಾಗಶಃ ಲಾಕ್‌ಡೌನ್ ಹೇರಿದ್ದು, ಅದರ ಭಾಗವಾಗಿ ಗುರುವಾರ ಉಡುಪಿ ತಾಲೂಕಿನಾದ್ಯಂತ ಧಾರ್ಮಿಕ, ಸಭೆ ಸಮಾರಂಭಗಳು ರದ್ದಾ ಗಿದ್ದು, ಧಾರ್ಮಿಕ ಕೇಂದ್ರಗಳಲ್ಲಿ ನಿತ್ಯಪೂಜೆ ಹಾಗೂ ಪ್ರಾರ್ಥನೆಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ರಾತ್ರಿ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ನಗರದಲ್ಲಿ ರಾತ್ರಿ 9ರ ಬಳಿಕ ಓಡಾಟ ನಡೆಸಿದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಹಿಂದೆ ಕಳುಹಿಸಿರುವುದು ವರದಿಯಾಗಿದೆ. ಪ್ರತಿದಿನ ರಾತ್ರಿ 9ರಿಂದ ಮರುದಿನ ಬೆಳಗ್ಗೆ 6ರ ವರೆಗೆ ತುರ್ತು ಸೇವೆ ಹೊರತು ಬೇರೆಲ್ಲ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.
ಶಾಪಿಂಗ್ ಮಾಲ್ ಬಂದ್ !
ಕೋವಿಡ್ ಭಾಗಶಃ ಲಾಕ್‌ಡೌನ್ ಪೂರ್ವದಲ್ಲಿ ಗುರುವಾರ ನಿಗದಿಯಾದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನೋರಂಜನ, ಶೈಕ್ಷಣಿಕ ಸಭೆ ಸಮಾರಂಭಗಳು ರದ್ದುಗೊಂಡಿತು. ಸಿನೆಮಾ ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಸ್ಪಾಗಳು, ಯೋಗಕೇಂದ್ರ, ಕ್ರೀಡಾ ಸಂಕೀರ್ಣಗಳು, ಈಜುಕೊಳ, ಮನೋರಂಜನ ಪಾರ್ಕ್, ರಂಗಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಗೊಳಿಸಿ, ಬಂದ್ ಮಾಡಿದ ದೃಶ್ಯ ನಗರದಲ್ಲಿ ಕಂಡು ಬಂತು.
ಬ್ಯಾಂಕ್ ಅವಧಿ ಕಡಿತ :
ಕೋವಿಡ್ ಕಾರಣದಿಂದ ದೇಶಾದ್ಯಂತ ಬ್ಯಾಂಕ್‌ಗಳ ವ್ಯವಹಾರ ಸಮಯದಲ್ಲೂ ಬದಲಾವಣೆಯಾಗಿದೆ. ಮೇ 31ರ ವರೆಗೆ ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ಸಾರ್ವಜನಿಕ ಸೇವೆಗೆ ತೆರೆದಿರಲಿದೆ. ಉಡುಪಿ ತಾಲೂಕಿನಾದ್ಯಂತ ಎಂದಿನಂತೆ ಬಸ್, ಟ್ಯಾಕ್ಸಿ, ರಿಕ್ಷಾ, ರೈಲುಗಳು ಓಡಾಟ ನಡೆಸಿವೆ. ಗುರುವಾರ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ ರದ್ದು :
ಸಾರ್ವಜನಿಕ ನೇಮ, ಕೋಲ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪೂರ್ಣವಾಗಿ ರದ್ದುಗೊಂಡಿದೆ. ಗುರುವಾರ ಧಾರ್ಮಿಕ ಕೇಂದ್ರದಲ್ಲಿ ನಿತ್ಯ ಪೂಜೆ, ಪ್ರಾರ್ಥನೆಗಷ್ಟೇ ಅವಕಾಶ ನೀಡಲಾಯಿತು. ಭಕ್ತರ ಪ್ರವೇಶದ ನಿಷೇಧ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠಕ್ಕೆ ಜನರು ಇರಲಿಲ್ಲ. ಧಾರ್ಮಿಕ ಕೇಂದ್ರದ ಹೊರ ಭಾಗದಲ್ಲಿ ಭಕ್ತರು ನಿಂತು ದೇವರಿಗೆ ಕೈ ಮುಗಿಯುತ್ತಿರುವ ದೃಶ್ಯಗಳು ಕಂಡು ಬಂತು.
ಪಾರ್ಸೆಲ್‌ಗೆ ಮಾತ್ರ ಅವಕಾಶ :
ನಗರದ ವಿವಿಧ ಹೊಟೇಲ್‌ಗಳಲ್ಲಿ ಗ್ರಾಹಕರ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಯಿತು. ಕುಳಿತುಕೊಳ್ಳಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೇಪರ್ ಗ್ಲಾಸ್ ಹಿಡಿದು ಹೊಟೇಲ್ ಮುಂಭಾಗದಲ್ಲಿ ನಿಂತು ಟೀ ಕುಡಿಯುತ್ತಿರುವ ದೃಶ್ಯಗಳು ಕಂಡು ಬಂತು.
ಜಿಲ್ಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಟೇಲ್, ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಪಾರ್ಸೆಲ್ ಸೇವೆಗಳು ಮಾತ್ರ ನೀಡಬೇಕು. ಮಾರ್ಗಸೂಚಿಯನ್ನು ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. - ಜಿ. ಜಗದೀಶ್, ಜಿಲ್ಲಾಧಿಕಾರಿ.ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.