ಕೈ, ಬಾಯಿ ಶುದ್ಧವಾಗಿರಲೇ ಬೇಕು: ನಾಗರತ್ನಾ ಶಾಸ್ತ್ರೀ
Team Udayavani, Aug 2, 2017, 7:50 AM IST
ಉಡುಪಿ: ಕೈ ಆಹಾರವನ್ನು ಮುಟ್ಟುವ ಮೊದಲು ಶುದ್ಧವಾಗಿರಬೇಕು. ಅದೇ ರೀತಿ ಆಹಾರ ಜಠರವನ್ನು ಪ್ರವೇಶಿಸುವ ಮುನ್ನ ಬಾಯಿಯೂ ಸ್ವತ್ಛವಾಗಿರಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ ಶಾಸ್ತ್ರೀ ಹೇಳಿದರು.
ಅವರು ಆ. 1ರಂದು ಉಡುಪಿ ಸರ್ವಿಸ್ ಬಸ್‌ಸ್ಟಾಂಡ್ ಬಳಿ ಇರುವ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ “ಪವರ್’ ಸಂಸ್ಥೆಯ ವತಿಯಿಂದ ಜರಗಿದ ಓರಲ್ ಹೈಜಿನ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಹೆಣ್ಣನ್ನು ಹೆರುವಾಗ ಮಾತ್ರ ಹೆಣ್ಣು ಬೇಡವೆಂದು ಹೇಳುವುದು ವಿಪರ್ಯಾಸವೆಂದು ವಿಶ್ಲೇಷಿಸಿದ ಅವರು 0 ಇಂದ 6ರ ಒಳಗಿನ ಮಕ್ಕಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಇದರ ಪರಿಣಾಮ ಬೀರುತ್ತಿದೆ. ಹೆಣ್ಣುಮಗು ಬೇಡವೆಂದು ಹೇಳುವ ಸಾಮಾಜಿಕ ಪಿಡುಗು ಕೊನೆಗೊಳ್ಳಬೇಕೆಂದೂ ಅವರು ಹೇಳಿದರು.
ಇಂಡಿಯನ್ ಡೆಂಟಲ್ ಅಸೋಸಿ ಯೇಶನ್ನಿನ ಉಡುಪಿ ಶಾಖಾ ಅಧ್ಯಕ್ಷರಾದ ಡಾ| ವಿಜಯೇಂದ್ರ ವಸಂತ್ ರಾವ್ ಅಧ್ಯಕ್ಷತೆ ವಹಿಸಿ ಓರಲ್ ಹೈಜಿನ್ ಬಗ್ಗೆ ಮಾಹಿತಿ ನೀಡಿದರು.
“ಪವರ್’ ಅಧ್ಯಕ್ಷರಾದ ಡಾ| ಗಾಯತ್ರಿ, ಉಪಾಧ್ಯಕ್ಷರಾದ ತಾರಾ ತಿಮ್ಮಯ್ಯ ಉಪಸ್ಥಿತರಿದ್ದರು. ಮ.ಗ್ರಾ.ವಿ.ಸ.ಸಂಘದ ಅಧ್ಯಕ್ಷರಾದ ಜಯಲಕ್ಷ್ಮೀ ಭಂಡಾರಿ ಸ್ವಾಗತಿಸಿದರು. ಪವರ್ ಸದಸ್ಯರಾದ ರಾಜಲಕ್ಷ್ಮೀ ಶೆಟ್ಟಿ ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.