ಕರಕುಶಲ ಮಂಡಳಿ- ಕರಕುಶಲಕರ್ಮಿಗಳು ಮುಖಾಮುಖೀಯಾದಾಗ
Team Udayavani, Apr 3, 2019, 6:30 AM IST
ಉಡುಪಿ: ಮಣಿಪಾಲ ಹೆರಿಟೇಜ್ ವಿಲೇಜ್‌ನಲ್ಲಿ ಸೋಮವಾರ ಕರಕುಶಲ ಕಲೆಗೆ ಸಂಬಂಧಿಸಿ ಎರಡು ವಿಭಿನ್ನ ಸನ್ನಿವೇಶಗಳು ಕಂಡುಬಂದವು. ಭಾರತೀಯ ಕರಕುಶಲ ಮಂಡಳಿ (ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯ- ಸಿಸಿಐ) ರಾಷ್ಟ್ರೀಯ ಅಧಿವೇಶನಕ್ಕಾಗಿ ದೇಶದ ವಿವಿಧೆಡೆಗಳಿಂದ ಆಗಮಿಸಿದ ಹೈಫೈ, ಹೈಟೆಕ್ ಜನರು ಒಂದೆಡೆಯಾದರೆ, ಬುಟ್ಟಿ ನೇಯುವ ಕೊರಗ ಸಮುದಾಯದ ಕುಶಲಕರ್ಮಿಗಳು, ಮಡಕೆ ತಯಾರಿಸುವ ಕುಂಭ ಕಲಾವಿದರು, ಉಡುಪಿ ಸೀರೆಯ ಮಳಿಗೆಯವರು ಇನ್ನೊಂದೆಡೆ ಕಂಡುಬಂದರು.
ಅಧಿವೇಶನಕ್ಕೆ ಆಗಮಿಸಿದವರಲ್ಲಿ ಬಹು ಮಂದಿ ಮಲ್ಲಿಗೆ ಹಾರಗಳಿಂದ ಶೋಭಿತರಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಪ್ರಫುಲ್ಲವದನರಾಗಿದ್ದರು. ಇನ್ನೊಂದೆಡೆ ಸಭಾಂಗಣದ ಹೊರಗೆ ಬುಟ್ಟಿ ನೇಯುತ್ತಿದ್ದ ಕೊರಗ ಸಮುದಾಯದ ಕುಶಲಕರ್ಮಿ, ಕುಂಭಾಸಿಯ ರಾಜಶ್ರೀ ಆಗಂತುಕರ ಗಮನ ಸೆಳೆಯದೆ ಇರಲಾರರು. ಇವರು ತನ್ನ ಪಾಡಿಗೆ ಬೀಳುಗಳನ್ನು ಸರಿಪಡಿಸುತ್ತ ಬುಟ್ಟಿ ನೇಯುವ ಕಾಯಕದಲ್ಲಿ ನಿರತರಾಗಿದ್ದರು. ಇವರ ಸುತ್ತಮುತ್ತ ಗೆರಸಿ, ನಾನಾ ಬಗೆಯ ಹೂ ಬುಟ್ಟಿಗಳು, ಹೆಡಗೆ ಮತ್ತು ಕಚ್ಚಾಸಾಮಗ್ರಿಗಳಾದ ಬೀಳು, ಬಿದಿರು (ತೆಮೆ) ಇತ್ಯಾದಿ ನೈಸಗಿಕ ಸಾಮಾಗ್ರಿಗಳು ಇದ್ದವು.
ಇನ್ನೊಂದೆಡೆಗೆ ಕಾರ್ಕಳ ಮಾಳ ಕಡಾರಿಯ ಅಣ್ಣು ಮೂಲ್ಯ ತರಹೇವಾರಿಯ ಮಣ್ಣಿನಿಂದ ತಯಾರಿಸಿದ ಮಡಕೆ, ಹೂಜಿ, ಬೋಗುಣಿಗಳನ್ನು ಪ್ರದರ್ಶನಕ್ಕಾಗಿ ತಂದಿದ್ದರು. ಆಗಮಿಸಿ ದವರು ರಾಜಶ್ರೀ ಮತ್ತು ಅಣ್ಣು ಮೂಲ್ಯರಿಂದ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಇಲ್ಲೇ ಪಕ್ಕದಲ್ಲಿ ದೈವಗಳ ಮುಖವಾಡಗಳು, ಮರದ ಉರುಗಳೂ ಅಧಿವೇಶನದ ಪ್ರತಿನಿಧಿಗಳಲ್ಲಿ ಕುತೂಹಲ ಮೂಡಿಸಿದವು. ಉಡುಪಿ ಸೀರೆಗಳನ್ನು ಪ್ರಚುರಪಡಿಸುತ್ತಿರುವ ಕದಿಕೆ ಟ್ರಸ್ಟ್‌ನವರ ಮಳಿಗೆಯಲ್ಲಿ ಉಡುಪಿಯ ಕೈಮಗ್ಗದ ಸೀರೆ, ಹತ್ತಿ ಬಟ್ಟೆಯ ಧೋತಿ, ಅಂಗಿಗಳು ಇದ್ದವು.
ಅಧಿವೇಶನದಲ್ಲಿ ಭಾಷಣಕಾರರು ಕರಕುಶಲ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಅಂಕಿಅಂಶ ಸಹಿತವಾಗಿ ಬಿಚ್ಚಿಟ್ಟರೆ, ಹೊರಗಿರುವ ಕುಶಲಕರ್ಮಿಗಳಿಗೆ ಇದೇನೆಂದೇ ತಿಳಿದಿರದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.