ಗುದ್ದೆಲ್‌ಬಾಕಿಯರ್: ನೇತಾಡುತ್ತಿದೆ ವಿದ್ಯುತ್ ತಂತಿ
Team Udayavani, Oct 13, 2019, 5:20 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ 7ನೇ ವಾರ್ಡ್ ಗುದ್ದೆಲ್‌ಬಾಕಿಯರ್ ಎಂಬಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದು ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿವೆ. ಪೆರ್ವಾಜೆ ಒಂದನೇ ಅಡ್ಡರಸ್ತೆಯಲ್ಲೇ ಜೋತುಬಿದ್ದ ತಂತಿಗಳು ಸಾರ್ವಜನಿಕವಾಗಿ ಕಾಣುವಂತಿದ್ದರೂ ಮೆಸ್ಕಾಂ ಇಲಾಖೆ ಮಾತ್ರ ತಂತಿ ಸರಿಪಡಿಸುವತ್ತ ಚಿತ್ತ ಹರಿಸಿಲ್ಲ.
ನಡೆದಾಡಲೂ ಭೀತಿ !
ವಿದ್ಯುತ್ ತಂತಿ ನೇತಾಡುತ್ತಿರುವ ಭಯ ದಿಂದಲೇ ಘನ ವಾಹನಗಳ ಚಾಲಕರು ಗುದ್ದೆಲ್‌ಬಾಕಿಯರ್ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ನಡೆದಾಡಲೂ ಭೀತಿಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
2019ರ ಮಾರ್ಚ್‌ನಿಂದ ಇಲ್ಲಿನ ವಿದ್ಯುತ್ ತಂತಿಗಳು ಜೋತುಬಿದ್ದಿವೆ. ಸುಮಾರು 15 ಮನೆಗಳು ಈ ಪರಿಸರದಲ್ಲಿದ್ದು, ಮಕ್ಕಳು ತಂತಿ ಜೋತುಬಿದ್ದಿರುವ ಪ್ರದೇಶದಲ್ಲಿಯೇ ಆಟವಾಡಿಕೊಂಡಿರುತ್ತಾರೆ. ಗಾಳಿ ಮಳೆಗೆ ತಂತಿಗಳು ಅಲ್ಲಾಡುತ್ತಿದ್ದು, ಒಂದು ವೇಳೆ ಕಡಿದು ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಸ್ಥಳೀಯರ ಅಭಿಪ್ರಾಯ.
ಮೆಸ್ಕಾಂ ನಿರ್ಲಕ್ಷ್ಯ
ವಿದ್ಯುತ್ ತಂತಿ ಸರಿಪಡಿಸುವಂತೆ ಕಳೆದ 8 ತಿಂಗಳಿನಿಂದ ಸ್ಥಳೀಯರು ಮನವಿ ನೀಡುತ್ತ ಬಂದಿದ್ದರೂ ಮೆಸ್ಕಾಂ ಮಾತ್ರ ಸ್ಪಂದಿಸಿಲ್ಲ. ಸಮಸ್ಯೆಯ ಗಂಭೀರತೆ ಅರಿತು, ಅನಾಹುತ ಸಂಭವಿಸುವುದಕ್ಕಿಂತ ಮುಂಚೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಗತ್ಯ ಕ್ರಮ
ಜೋತು ಬಿದ್ದ ತಂತಿಗಳನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈ ಮೂಲಕ ಸ್ಥಳೀಯರ ಆತಂಕ ದೂರ ಮಾಡುತ್ತೇವೆ.
-ದಿಲೀಪ್,ಎಇ ಮೆಸ್ಕಾಂ ಕಾರ್ಕಳ
ಮೆಸ್ಕಾಂ ಎಚ್ಚೆತ್ತುಕೊಂಡಿಲ್ಲ
ಈ ಕುರಿತು ಮೆಸ್ಕಾಂ ಇಲಾಖೆಗೆ ಕರೆ ಮಾಡಿ ತಿಳಿಸಲಾಗಿದೆ. ತಂತಿ ಸರಿಪಡಿಸದ ಹಿನ್ನೆಲೆಯಲ್ಲಿ ಲಿಖೀತ ದೂರು ಸಹ ನೀಡಿದ್ದರೂ ಮೆಸ್ಕಾಂ ಎಚ್ಚೆತ್ತುಕೊಂಡಿಲ್ಲ.
-ಮಮತಾ,ಪುರಸಭಾ ಸದಸ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.