ಕೋಟ ಕುಟುಂಬ ವರ್ಗದಲ್ಲಿ ಸಂತಸ, ಸಂಭ್ರಮ


Team Udayavani, Aug 21, 2019, 5:50 AM IST

sambrama

ಕೋಟ: ಬಡಕುಟುಂಬದಲ್ಲಿ ಕಷ್ಟದ ದಿನಗಳನ್ನು ಕಂಡು ಬೆಳೆದ ನನ್ನ ಮಗ ಜನರ ಆಶೀರ್ವಾದದಿಂದ ಇಷ್ಟು ದೊಡ್ಡ ಸ್ಥಾನಕ್ಕೇರಿದ್ದಾನೆ. ಇದನ್ನೆಲ್ಲ ನನ್ನ
ಕಣ್ಣಿನಲ್ಲಿ ನೋಡಲಿಕ್ಕೆ ತುಂಬಾ ಸಂತೋಷವಾಗುತ್ತಿದೆ. ಅವನಿಗೆ ಜನರ ಪ್ರೀತಿ, ಆಶೀರ್ವಾದ ಸದಾ ಇದೇ ರೀತಿ ಇರಲಿ.

ಇನ್ನಷ್ಟು ಒಳ್ಳೆಯ ಸೇವೆ ಮಾಡುವಂತಾಗಲಿ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ 89 ವರ್ಷದ ಲಚ್ಚಿ ಪೂಜಾರಿ¤ ಮಾಧ್ಯಮದವರೊಂದಿಗೆ ಮಗನಿಗೆ ಶುಭ ಹಾರೈಸಿದರು.

ಜ್ವರದಿಂದ ಬಳಲುತ್ತಿದ್ದ ಅವರು ಕೋಟತಟ್ಟಿನಲ್ಲಿರುವ ತನ್ನ ಮನೆಯಲ್ಲಿ
ಮಗಳು ಕಮಲಾ ಹಾಗೂ ಮೊಮ್ಮಗ ರಾಘವೇಂದ್ರ ಪೂಜಾರಿಯೊಂದಿಗೆ ಟಿ.ವಿ.ಯಲ್ಲಿ ಪ್ರಮಾಣವಚನ ವೀಕ್ಷಿಸಿದರು.

ಜನಸೇವೆಯೇ ಅವರ ಸರ್ವಸ್ವ
ರಾತ್ರಿ 12 ಗಂಟೆಗೆ ಆಪ್ತ ಸಹಾಯಕರು ಫೋನ್‌ ಮಾಡಿ, ಯಡಿಯೂರಪ್ಪನವರಿಂದ ಕರೆ ಬಂದಿದೆ ಪೂಜಾರಿಯವರು ಸಚಿವರಾಗ್ತಾರೆ ಎಂದು ತಿಳಿಸಿದರು. ಆಗ ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಅವರಿಗೆ ಜನಸೇವೆ ಎಂದರೆ ತುಂಬಾ ಇಷ್ಟ. ಕುಟುಂಬಕ್ಕಿಂತ ಹೆಚ್ಚು ಸಾಮಾಜಿಕ ಕಾರ್ಯಗಳಲ್ಲೇ ತಲ್ಲೀನರಾಗಿರುತ್ತಾರೆ. ಜತೆಗೆ ನಮ್ಮ ಬಗ್ಗೆ ಕಾಳಜಿವಹಿಸುತ್ತಾರೆ.

ಅವರ ಆಶಯಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರಿಂದ ಹೆಚ್ಚಿನ ಸಾಮಾಜಿಕ ಕಾರ್ಯಗಳು ಕೈಗೂಡಲಿ ಎಂದು ಮಂತ್ರಿಯಾದ ಕುರಿತು ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತಾ ಸಂಸತ ವ್ಯಕ್ತಪಡಿಸಿದರು.

ಶಾಂತಾ ಅವರು ಪತಿಯ ಪ್ರಮಾಣವಚನ ಸಮಯದಲ್ಲಿ ಹತ್ತಿರದ ಕೋಟ ಅಮೃತೇಶ್ವರೀ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು ಮತ್ತು ಮಗಳು ಸ್ವಾತಿ ಹಾಗೂ ಪೂಜಾರಿಯವರ ಸಹೋದರಿ ಅಕ್ಕಯ್ಯ ಪೂಜಾರಿ¤ಯವರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ರಾತ್ರಿ 11.30ರ ತನಕ ಸಚಿವ ಸ್ಥಾನದ ಕುರಿತು ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಪೂಜಾರಿಯವರ ಮಗ ಶಶಿಧರ ಹೊರತುಪಡಿಸಿ ಕುಟುಂಬ ವರ್ಗದ ಬೇರೆ ಯಾರೂ ಬೆಂಗಳೂರಿಗೆ ತೆರಳಿರಲಿಲ್ಲ ಹಾಗೂ ಕಾರ್ಯಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಹೋಗಿರಲಿಲ್ಲ.

ಪ್ರಮಾಣ ವಚನದ ಸಂದರ್ಭ ಪೂಜಾರಿಯವರು ಪ್ರಸ್ತುತ ನೆಲೆಸಿರುವ ಕೋಟದ ಮನೆಯಲ್ಲಿ ಕೇಬಲ್‌ ಸಮಸ್ಯೆಯಿಂದಾಗಿ ಮನೆಯವರಿಗೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸ್ವಲ್ಪ ಸಮಸ್ಯೆಯಾಯಿತು. ಅನಂತರ ಮೊಬೈಲ್‌ ಫೋನ್‌ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದರು.

ಯುವ ಜನರಿಗೆ ಪೂರಕವಾದ ಕೆಲಸ ಮಾಡಲಿ
ತಂದೆಯವರು ಎರಡನೇ ಬಾರಿ ಸಚಿವರಾಗುತ್ತಿರುವುದು ಸಂತೋಷ ತಂದಿದೆ. ಅವರು ಮನೆಯಲ್ಲಿ ನಮ್ಮೆಲ್ಲರ ಜತೆ ಸ್ನೇಹಿತರಂತೆ ಬೆರೆಯುತ್ತಾರೆ. ಸದಾ ಜನರ ಒಡನಾಟದಲ್ಲಿರುವುದರಿಂದ ಈ ಹುದ್ದೆ ನಿಭಾಯಿಸುವುದು ಅವರಿಗೆ ಕಷ್ಟವಲ್ಲ. ಅದೇ ರೀತಿ ಈ ಬಾರಿ ಯುವಜನರಿಗೆ ಅನುಕೂಲವಾಗುವಂತಹ ಒಂದಷ್ಟು ಕೆಲಸಗಳನ್ನು ಮಾಡಲಿ ಎನ್ನುವುದು ನನ್ನ ಆಶಯ.
– ಸ್ವಾತಿ (ಪೂಜಾರಿಯವರ ಮಗಳು)

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.