ಕೃಷಿಯಲ್ಲಿ ಖುಷಿಕಂಡ ವಾಣಿಜ್ಯ ಶಾಸ್ತ್ರ ಪದವೀಧರ
ಹಲವು ಹೊಸ ತಳಿಗಳಿಗೆ ಭಾಸ್ಕರ ಶೆಟ್ರ ಜಮೀನು ಪ್ರಯೋಗಶಾಲೆ
Team Udayavani, Dec 18, 2019, 5:32 AM IST
ಹೆಸರು: ಭಾಸ್ಕರ್ ಶೆಟ್ಟಿ
ಏನೇನು ಕೃಷಿ: ಭತ್ತ, ಶೇಂಗಾ, ಉದ್ದು, ಅವರೆ, ಹೈನುಗಾರಿಕೆ
ಎಷ್ಟು ವರ್ಷ: 35
ಕೃಷಿ ಪ್ರದೇಶ: 3.5 ಎಕರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಕೋಟ: ಕೋಟ ಸಮೀಪದ ಮಣೂರು ನಿವಾಸಿ ಭಾಸ್ಕರ್ ಶೆಟ್ಟಿ ಅವರು 35 ವರ್ಷದ ಹಿಂದೆ ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಬಿ.ಕಾಂ. ಪದವಿ ಗಳಿಸಿದ್ದು, ಕೃಷಿಯ ಬಗೆಗಿನ ಆಳವಾದ ಅರಿವು ಇವರನ್ನು ಮಾದರಿ ಕೃಷಿಕನನ್ನಾಗಿಸಿದೆ. ಇವರು ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ಸಾಧನೆ ತೋರಿದ್ದಾರೆ. ಭತ್ತದ ಇಳುವರಿಯಲ್ಲಿ ಅವಿಭಜಿತ ದ.ಕ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ, ಉಡುಪಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ. 2014ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿದೆ. ದೆಹಲಿಯಲ್ಲಿ ನಡೆದ ಕೃಷಿ ಕಾರ್ಯಗಾರದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ರಾಜ್ಯ, ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹಮಾನ, ಆಕಾಶವಾಣಿ, ಡಿ.ಡಿ. ಚಂದನ ಸೇರಿದಂತೆ ಹಲವು ಮಾಧ್ಯಮ ಹಾಗೂ ಕೃಷಿ ಮೇಳಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಇಲಾಖೆಯನ್ನು ರೈತರ ಬಳಿ ತಂದ ಕೀರ್ತಿ
ಸುಮಾರು 30-32 ವರ್ಷದಿಂದ ಹಿಂದೆ ರೈತರು ಹಾಗೂ ಕೃಷಿ ಇಲಾಖೆ, ಕೃಷಿ ವಿಜ್ಞಾನಕೇಂದ್ರದ ಜತೆ ಸಾಕಷ್ಟು ಅಂತರವಿತ್ತು. ಆದರೆ ಭಾಸ್ಕರ ಶೆಟ್ಟಿಯವರು ತನ್ನಲ್ಲಿರುವ ಶಿಕ್ಷಣವನ್ನು ಬಳಸಿಕೊಂಡು ಕೃಷಿ ಅಧಿಕಾರಿಗಳ ಜತೆ ಸಂಪರ್ಕ ನಡೆಸಿ ಬೆಳೆಗಳಿಗೆ ಬರುವ ರೋಗ, ಫಸಲು ಹೆಚ್ಚಿಸುವ ವಿಧಾನಗಳ ಕುರಿತು ಚರ್ಚೆ ನಡೆಸಿದರು. ಕೃಷಿ ಅಧಿಕಾರಿಗಳನ್ನು ತನ್ನೂರಿಗೆ ಕರೆತಂದು ವಿವಿಧ ಕಮ್ಮಟ, ಪಾಠಶಾಲೆಗಳನ್ನು ನಡೆಸಿ ಇಲಾಖೆ ಹಾಗೂ ರೈತರ ನಡುವೆ ಉತ್ತಮ ಸಂಬಂಧ ಬೆಸೆಯುವಂತೆ ಮಾಡಿದರು.
ಮಾದರಿ ಸಹಕಾರಿ ಪದ್ಧತಿ
ಕಾರ್ಮಿಕರ ಕೊರತೆ ಇಂದು ಕೃಷಿಗೆ ಬಹುದೊಡ್ಡ ಹೊಡೆತ ವಾಗಿದೆ. ಹೀಗಾಗಿ ಇವರು ಸ್ಥಳೀಯ 15-20 ಕುಟುಂಬಗಳನ್ನು ತಂಡ ರಚಿಸಿ ಅವರಿಗೆ ತಾನು ಉಳುಮೆ, ಬಿತ್ತನೆ ಮುಂತಾದವುಗಳನ್ನು ಮಾಡಿ ಕೊಡುವುದು ಹಾಗೂ ಆ ಕಾರ್ಮಿಕರನ್ನು ತನ್ನ ಕೃಷಿ ಕೆಲಸಕ್ಕೆ ಬಳಸಿಕೊಳ್ಳುವುದರ ಮೂಲಕ ಸಾಂಪ್ರದಾಯಿಕ ಕೋಣದ ಉಳುಮೆ, ನಾಟಿ, ಕಟಾವು ವಿಧಾನವನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ.
ಎಂ.ಒ.4 ತಳಿ ಪ್ರಥಮ ಪ್ರಯೋಗ
ಎಂ.ಒ.4. ಭತ್ತದ ತಳಿ ಇದೀಗ ಕರಾವಳಿಯಲ್ಲಿ ಅತ್ಯಂತ ಶ್ರೀಮಂತವಾಗಿದೆ. ಆದರೆ ಇದನ್ನು ಇವರ ಜಮೀನಿನಲ್ಲೇ ವಿಜ್ಞಾನಿಗಳು ಪ್ರಥಮವಾಗಿ ಪ್ರಯೋಗ ನಡೆಸಿದ್ದರು. ಅನಂತರ ಸುಮಾರು 20ಕ್ಕೂ ಹೆಚ್ಚು ಭತ್ತ ಮತ್ತು 16ಕ್ಕೂ ಹೆಚ್ಚು ಶೇಂಗಾ ತಳಿಗಳನ್ನು ಇವರು ತಮ್ಮ ಜಮೀನಿನಲ್ಲಿ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ರೂ. ಆದಾಯ
ಭಾಸ್ಕರ ಶೆಟ್ಟಿ ಅವರನ್ನು ಹಲವು ವೈಟ್‌ಕಾಲರ್ ಜಾಬ್‌ಗಳು ಹುಡುಕಿಕೊಂಡು ಬಂದಿತ್ತು. ಆದರೆ ಇವರು ಅದರತ್ತ ಮುಖಮಾಡದೆ ಕೃಷಿಯಿಂದಲೇ ಜೀವನ ರೂಪಿಸಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಶೆಟ್ಟರ ಬಳಿ 3.5 ಎಕ್ರೆ ಜಮೀನು ಇದ್ದು, 90-92 ಕ್ವಿಂಟಾಲ್ ಭತ್ತ ಹಾಗೂ 30-32 ಕ್ವಿಂಟಾಲ್ ಶೇಂಗಾ, ಉದ್ದು, ಅವಡೆ ಮುಂತಾದ ದ್ವಿದಳ ಧಾನ್ಯವನ್ನು ಬೆಳೆಯುತ್ತಾರೆ. ಭತ್ತದಿಂದ ವಾರ್ಷಿಕ ಸುಮಾರು 1.5ರಿಂದ 2ಲಕ್ಷ ರೂ. ಆದಾಯ ಹಾಗೂ ಶೇಂಗಾದಿಂದ ಅಧಿಕ ಆದಾಯ ಗಳಿಸುತ್ತಿದ್ದಾರೆ. ಕಟಾವು ಮುಗಿದಾಕ್ಷಣ ಮಾರಾಟ ಮಾಡದೆ ಹಲವು ತಿಂಗಳು ಜೋಪಾನವಾಗಿಟ್ಟು ಹೆಚ್ಚಿನ ಬೆಲೆ ಬಂದ ಮೇಲೆ ಮಾರಾಟ ಮಾಡುವುದು ಇವರ ರೂಢಿಯಾಗಿದೆ.
ಕಷ್ಟಪಡುವವರಿಗೆ ಮಾತ್ರ ಕೃಷಿ
ಕೃಷಿಯಲ್ಲಿ ಖಂಡಿತ ಲಾಭ ಇದ್ದೇ ಇದೆ. ಆದರೆ ಮೈಮುರಿದು, ಬೇವರು ಸುರಿಸಿ ದುಡಿಯಲು ಸಿದ್ಧರಿರಬೇಕು. ಒಂದಷ್ಟು ಪ್ರಯೋಗಾತ್ಮಕ ಮನೋಭಾವ, ಮಾರುಕಟ್ಟೆಯ ಅಧ್ಯಯನ, ಯಾವುದೋ ಒಂದು ಬೆಳೆಗೆ ಜೋತು ಬೀಳದೆ ಬೇರೆ-ಬೇರೆ ಬೆಳೆಗಳನ್ನು ಬೆಳೆಯುವುದು ಕೃಷಿಯಲ್ಲಿ ಲಾಭಗಳಿಸುವ ನಿಟ್ಟಿನಲ್ಲಿ ಅಗತ್ಯವಿದೆ. ಇಂದು ವ್ಯವಸ್ಥಿತವಾಗಿ ಬೇಸಾಯದಲ್ಲಿ ತೊಡಗಿದರೆ ಲಕ್ಷಾಂತರ ರೂ. ಲಾಭಗಳಿಸಲು ಸಾಧ್ಯವಿದೆ. ನನಗಿರುವ ಕನಿಷ್ಠ ಭೂಮಿಯಲ್ಲೇ ವರ್ಷಕ್ಕೆ ನಾಲ್ಕೈದು ಲಕ್ಷ ಆದಾಯ ಗಳಿಸುತ್ತಿದ್ದೇನೆ. ಇದರಲ್ಲೇ ಒಳ್ಳೆ ಮನೆ, ಇಬ್ಬರು ಮಕ್ಕಳನ್ನು ಉತ್ತಮ ಪದವೀದರರನ್ನಾಗಿ ಮಾಡಿದ್ದೇನೆ. ಈಗ ಹಲವು ಬಗೆಯ ಯಂತ್ರೋಪಕರಣಗಳು ಬಂದಿರುವುದರಿಂದ ಬೇಸಾಯ ಸಾಕಷ್ಟು ಸರಳವಾಗಿದೆ.
-ಭಾಸ್ಕರ್ ಶೆಟ್ಟಿ , ಮಣೂರು, ಪ್ರಗತಿಪರ ಕೃಷಿಕ
ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.