ಮನೆಯಲ್ಲೇ ಮಳೆ ನೀರು ಕೊಯ್ಲು ಮಾಡಿ’
ಪರಿಸರ ಜಲಸಂರಕ್ಷಣೆ, ರಸ್ತೆ ಸುರಕ್ಷೆ
Team Udayavani, Jun 29, 2019, 5:32 AM IST
![2806UDPS1](https://www.udayavani.com/wp-content/uploads/2019/06/2806UDPS1-620x315.jpg)
![2806UDPS1](https://www.udayavani.com/wp-content/uploads/2019/06/2806UDPS1-620x315.jpg)
ಉಡುಪಿ: ನಾವು ಮನೆಯಲ್ಲೇ ಮಳೆ ನೀರು ಕೊಯ್ಲ ಮಾಡಿ ನೀರನ್ನು ಸಂಗ್ರಹಿಸಬೇಕು ಎಂದು ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಹೇಳಿದರು.
ಪರಿಸರ ಜಲಸಂರಕ್ಷಣೆ, ರಸ್ತೆ ಸುರಕ್ಷೆ, ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಟರಿಣಾಮಗಳ ಅರಿವು ಹಾಗೂ ಜಾಥಾವು ರೋಟರಿ ರಾಯಲ್ ಸರಕಾರ ಭಾರತಿ, ಉಡುಪಿ ಪೋಲಿಸ್ ವಿಭಾಗ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಂದ್ರಾಳಿಯಿಂದ ಎಂ.ಜಿ.ಎಂ ಕಾಲೇಜಿನವರೆಗೆ ನಡೆದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅರಿವು ಮೂಡಿಸಿ
ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ, ವಿದ್ಯಾರ್ಥಿಗಳು ಸಮಾಜದ ರಾಯಭಾರಿಗಳಾಗಿ ವರ್ತಿಸಿ, ರಸ್ತೆ ಸುರಕ್ಷೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಮಾದಕ ದ್ರವ್ಯ, ಮೊಬೈಲ್ಗೆ ದಾಸರಾಗದೆ ಉತ್ತಮ ನಾಗರಿಕರಾಗಿರಬೇಕು ಎಂದರು.
ಗಿಡಗಳನ್ನು ಬೆಳೆಸಿ
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದ ಬಾಲಕೃಷ್ಣ ಮಧ್ದೋಡಿ ಪರಿಸರ ಹಾಗೂ ಜಲಸಂರಕ್ಷಣೆ ಬಗ್ಗೆ ಮಾತನಾಡಿ, ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕಾದರೆ ನಮ್ಮ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಕುಡಿಯುವ ನೀರನ್ನು ಪೋಲು ಮಾಡಬಾರದು. ಆದಷ್ಟು ನೀರು ಭೂಮಿಯಲ್ಲಿ ಇಂಗುವಂತೆ ಮಾಡಿ ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು ಎಂದರು.
ಪರಿಸರ ಸ್ವಚ್ಛವಾಗಿಡಿ
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಮಾತನಾಡಿ, ಪರಿಸರವನ್ನು ಸುಂದರ, ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದರು.
ಶಾಲಾ ಮುಖೋಪಾಧ್ಯಾಯ ಕೆ. ವಿನಾಯಕ ಕಿಣಿ ಮಾತನಾಡಿ, ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಉಡುಪಿ ರೋಟರಿಯ ಡಾ| ಸುರೇಶ್ ಶೆಣೈ, ರೋಟರಿ ಉಡುಪಿ ರಾಯಲ್ಸ್ ಅಧ್ಯಕ್ಷ ಬಿ.ಕೆ. ಯಶವಂತ್, ನಿಕಟಪೂರ್ವ ಅಧ್ಯಕ್ಷ ರತ್ನಾಕರ, ಪೋಲಿಸ್ ಅಧಿಕಾರಿ ನಾರಾಯಣ್, ಪ್ರಾಥಮಿಕ ಶಾಲಾ ಮುಖೋಪಾಧ್ಯಾಯ ರಾಜೇಶ್ ಉಪಸ್ಥಿತರಿದ್ದರು.
ಆಶಿಕಾ ಸ್ವಾಗತಿಸಿ, ಶ್ರೀಕರ ವಂದಿಸಿದರು. ರಂಜಿತ್ ರಾವ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
![Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!](https://www.udayavani.com/wp-content/uploads/2025/02/8-22-150x90.jpg)
![Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!](https://www.udayavani.com/wp-content/uploads/2025/02/8-22-150x90.jpg)
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
![20](https://www.udayavani.com/wp-content/uploads/2025/02/20-3-150x80.jpg)
![20](https://www.udayavani.com/wp-content/uploads/2025/02/20-3-150x80.jpg)
![20](https://www.udayavani.com/wp-content/uploads/2025/02/20-3-150x80.jpg)
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
![Kuruburu-Shanta](https://www.udayavani.com/wp-content/uploads/2025/02/Kuruburu-Shanta-150x90.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-150x90.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-150x90.jpg)
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-150x90.jpg)

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?