ಹಟ್ಟಿಕುದ್ರು- ಆನಗಳ್ಳಿ: ಪರ್ಯಾಯ ಮಾರ್ಗಕ್ಕೆ ಗ್ರಾಮಸ್ಥರ ಮನವಿ
Team Udayavani, Apr 28, 2017, 12:40 PM IST
ಕುಂದಾಪುರ: ಬಸ್ರೂರು ಸಮೀಪದ ಆನಗಳ್ಳಿಯಿಂದ ಹಟ್ಟಿಕುದ್ರುಗೆ ತೆರಳಲು ಈಗಿರುವ ಕೊಂಕಣ ರೈಲು ಮಾರ್ಗದ ಬದಿಯಲ್ಲಿರುವ ಕಾಲುದಾರಿಯನ್ನೇ ಅವಲಂಬಿಸಿದ ಗ್ರಾಮಸ್ಥರಿಗೆ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸಲು ರೈಲು ಇಲಾಖೆಯವರು ನಿರ್ಬಂಧ ಹೇರಿರುವುದರಿಂದ ಸಂಚಾರಕ್ಕೆ ತೊಡಕು ಅನುಭವಿಸುತ್ತಿರುವ ಗ್ರಾಮಸ್ಥರು ತಮಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡಬೇಕು ಮತ್ತು ಈ ಮಾರ್ಗದಲ್ಲಿಯೇ ಸಂಚರಿಸುವ ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿಯನ್ನು ಸಲ್ಲಿಸಿದರು.
ಎ.25ರಂದು ಸಂಜೆ ಹಟ್ಟಿಕುದ್ರುವಿಗೆ ಆಗಮಿಸಿದ ಹೆಗ್ಡೆ ಅವರಲ್ಲಿ ಮನವಿ ಮಾಡಿಕೊಂಡ ಹಟ್ಟಿಕುದ್ರು ಜನತೆ ಈ ಹಿಂದೆ ಪ್ರಸ್ತಾವಿಸಲಾದ ಹಟ್ಟಿಕುದ್ರು-ಬಸ್ರೂರು ಸೇತುವೆಯ ನಿರ್ಮಾಣ ಮಾಡುವುದರಿಂದ ಇದಕ್ಕೆ ಸೂಕ್ತ ಪರಿಹಾರ ಎಂದರು.ಗ್ರಾಮಸ್ಥರ ಮನವಿಗೆ ಉತ್ತರಿಸಿದ ಹೆಗ್ಡೆ ಅವರು ಈ ಹಿಂದೆ ನಾನು ಸಂಸದನಾಗಿದ್ದಾಗ ಹಟ್ಟಿಕುದ್ರು ಹಾಗೂ ಬಸೂÅರು ನಡುವೆ ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಲಾಗಿದೆ. ಮುಂದೆ ಈ ಪ್ರಸ್ತಾವನೆಯ ಅಂದಾಜುಪಟ್ಟಿಯನ್ನು ಪರಿಷ್ಕರಿಸಿ ಇಲಾಖೆಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಬಿ. ಅಪ್ಪಣ್ಣ ಹೆಗ್ಡೆ, ಮಾಜಿ ತಾ.ಪಂ.ಸದಸ್ಯ ಬಾಬು ಪೂಜಾರಿ ಹಟ್ಟಿಕುದ್ರು , ಬಸ್ರೂರು ಗ್ರಾ.ಪಂ. ಅಧ್ಯಕ್ಷ ಸಂತೋಷ ಕುಮಾರ, ಗೋಪಾಲ ಕಳಿಂಜೆ , ಕಿಶೋರ ಕುಮಾರ, ರಾಜೇಶ ಕಾವೇರಿ, ಮೇರ್ಡಿ ಸತೀಶ ಹೆಗ್ಡೆ, ಸುರೇಶ ಆರ್. ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.