ಹಟ್ಟಿಯಂಗಡಿ ಕ್ರಾಸ್-ಜಾಡಿ ರಸ್ತೆ: ದ್ವಿಪಥಕ್ಕೆ ಹೆಚ್ಚಿದ ಬೇಡಿಕೆ
Team Udayavani, Nov 28, 2018, 1:50 AM IST
ತಲ್ಲೂರು: ಕುಂದಾಪುರದಿಂದ ತಲ್ಲೂರು ಮಾರ್ಗವಾಗಿ ಕೊಲ್ಲೂರು ಸಂಪರ್ಕಿಸುವ ಹತ್ತಿರದ ಹಟ್ಟಿಯಂಗಡಿ ಕ್ರಾಸ್‌ನಿಂದ ಜಾಡಿಯವರೆಗಿನ ಸುಮಾರು 3 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ದ್ವಿಪಥಗೊಳಿಸಬೇಕು ಎನ್ನುವ ಬೇಡಿಕೆ ಹೆಚ್ಚಾಗುತ್ತಿದೆ. ಈಗ ಕೊಲ್ಲೂರಿಗೆ ಕುಂದಾಪುರದಿಂದ ಹೆಮ್ಮಾಡಿ ಮಾರ್ಗ ಅಥವಾ ತಲ್ಲೂರು, ಮಾವಿನಕಟ್ಟೆ, ನೇರಳಕಟ್ಟೆ ಮೂಲಕ ರಸ್ತೆಯಿದೆ. ಆದರೆ ಇದಕ್ಕೂ ಮೊದಲು ಕೊಲ್ಲೂರಿಗೆ ಸಂಚರಿಸಬೇಕಾದರೆ ಈ ಹಟ್ಟಿಯಂಗಡಿ ಕ್ರಾಸ್ – ಜಾಡಿ ರಸ್ತೆಯನ್ನೇ ಹೆಚ್ಚಿನವರು ಅವಲಂಬಿಸಿದ್ದರು. ಆದರೆ ಈಗ ಈ ರಸ್ತೆ ಸಂಪೂರ್ಣ ಹೊಂಡ – ಗುಂಡಿಗಳು ಹಾಗೂ ಕಿರಿದಾದ ರಸ್ತೆಯಾಗಿರುವುದರಿಂದ ವಾಹನ ಸಂಚಾರವೇ ಕಷ್ಟಕರವಾಗಿದೆ.
ದ್ವಿಪಥಕ್ಕೆ ಆಗ್ರಹ
ಈ ಹಟ್ಟಿಯಂಗಡಿ ಕ್ರಾಸ್ – ಜಾಡಿಯವರೆಗಿನ 3 ಕಿ.ಮೀ. ಉದ್ದದ ರಸ್ತೆಯನ್ನು ದ್ವಿಪಥಗೊಳಿಸಿದರೆ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ನೂರಾರು ಮಂದಿಗೆ ಪ್ರಯೋಜನವಾಗಲಿದೆ. ಅದಲ್ಲದೆ ಪ್ರಮುಖ ಯಾತ್ರ ಸ್ಥಳವಾದ ಕೊಲ್ಲೂರಿಗೂ ಸಂಪರ್ಕ ಕಲ್ಪಿಸಲು ಅನುಕೂಲವಾಗಿದೆ. ಇದೇ ಮಾರ್ಗವಾಗಿ ವಂಡ್ಸೆ, ಕೆಂಚನೂರು ಕಡೆಗೂ ಸಂಚರಿಸಬಹುದು. ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು ಹಟ್ಟಿಯಂಗಡಿ ದೇವಸ್ಥಾನಕ್ಕೂ ತೆರಳಲು ಕೂಡ ಸಹಕಾರಿಯಾಗಲಿದೆ. ಕೊಲ್ಲೂರಿಗೆ ತೆರಳಲು ಇರುವ ಬೇರೆ ಮಾರ್ಗಗಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ರಸ್ತೆ ದ್ವಿಪಥದ ಜತೆಗೆ ಜಾಡಿಯ ಸಮೀಪದ ಸೇತುವೆಯನ್ನು ಕೂಡ ಅಗಲೀಕರಣ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಈ ರಸ್ತೆ ದ್ವಿಪಥವಾದರೆ ಇದೇ ಮಾರ್ಗವಾಗಿ ಬಸ್ ಸಂಚಾರವನ್ನು ಕೂಡ ಆರಂಭಿಸಬಹುದು.
ದ್ವಿಪಥಕ್ಕೆ 8 ಕೋ.ರೂ. ಪ್ರಸ್ತಾವನೆ
ಜಾಡಿಯಿಂದ ಹಟ್ಟಿಯಂಗಡಿ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ 4 ಕೋ.ರೂ. ಅನುದಾನ ನೀಡುತ್ತೇವೆ ಎಂದಿದ್ದಾರೆ. ಆದರೆ ನಾವು ಆ ರಸ್ತೆಯನ್ನು ದ್ವಿಪಥ ಮಾಡುವ ಸಲುವಾಗಿ ಇನ್ನು 4 ಕೋ.ರೂ. ಒಟ್ಟು 8 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನೀಡುವ ವಿಶ್ವಾಸವಿದೆ.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಎಲ್ಲ ದೃಷ್ಟಿಯಿಂದಲೂ ಪ್ರಯೋಜನ
1962 ರಷ್ಟು ಹಳೆಯದಾದ ರಸ್ತೆ ಇದಾಗಿದ್ದು, ಕುಂದಾಪುರ, ತಲ್ಲೂರಿನಿಂದ ಕೊಲ್ಲೂರಿಗೆ ತೆರಳಲು ಹಿಂದೆ ಇದೇ ಮಾರ್ಗವನ್ನು ಬಳಸಲಾಗುತ್ತಿತ್ತು. ದ್ವಿಪಥ ಮಾಡಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿಂದಲೇ ಇತ್ತು. ಸುಮಾರು 15 ವರ್ಷಗಳ ಹಿಂದೊಮ್ಮೆ ಡಾಮರೀಕರಣ ಆಗಿತ್ತು. ಆ ಬಳಿಕ 2 ಸಲ ತೇಪೆ ಕಾರ್ಯ ಅಷ್ಟೇ ಆಗಿದೆ. ಈಗ ಇದನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಎಲ್ಲ ದೃಷ್ಟಿಯಿಂದಲೂ ಪ್ರಯೋಜನವಾಗಲಿದೆ.
– ಕೆಂಚನೂರು ಸೋಮಶೇಖರ ಶೆಟ್ಟಿ, ಸ್ಥಳೀಯರು
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.