ಹಟ್ಟಿಯಂಗಡಿ: ಬೇಸಗೆ ಬಂದರೆ ನೀರಿಗಾಗಿ ಟ್ಯಾಂಕರ್‌ ಮೊರೆ

Team Udayavani, Feb 12, 2019, 1:00 AM IST

hattiyangady.jpg

ಕುಂದಾಪುರ: ಹಟ್ಟಿಯಂಗಡಿ ಪ್ರಸಿದ್ಧವಾಗಿರುವುದು ಗಣಪತಿ ಕ್ಷೇತ್ರವಾಗಿ. ಅಂತೆಯೇ ರಾಜರ ಆಳ್ವಿಕೆ ಕಾಲದಿಂದಲೂ ಹಟ್ಟಿಯಂಗಡಿಗೆ ಅದರದ್ದೇ ಆದ ಮಹತ್ವವಿತ್ತು. ವಾರಾಹಿ ನದಿದಂಡೆಯ ಮೇಲೆ ಇರುವ ಈ ಗ್ರಾಮದಲ್ಲಿ ಹೊಳೆ, ಬಾವಿ, ಕೆರೆಗೆಳಿಂದ ಸಮೃದ್ಧ ಜಲಾಗಾರವಾಗಿದ್ದರೂ ಹಟ್ಟಿಯಂಗಡಿಯಲ್ಲಿ ಈಚೆಗೆ ಮೂರು ವರ್ಷಗಳಿಂದ ನೀರಿನ ಅಭಾವ ಕಾಣಿಸಿ ಕೊಳ್ಳತೊಡಗಿದೆ. ಹಾಗಾಗಿ ಇಲ್ಲಿನ ಆಡಳಿತ ಬೇಸಗೆ ಬಂದರೆ ಟ್ಯಾಂಕರ್‌ ಮೊರೆ ಹೊಗುತ್ತದೆ. 

ಖಾಸಗಿ ನೀರು
ಈ ಪಂಚಾಯತ್‌ಗೆ ಕೆಂಚನೂರು, ಕನ್ಯಾನ, ಹಟ್ಟಿಯಂಗಡಿ ಮೂರು ಗ್ರಾಮಗಳಿದ್ದು 114 ಕೆರೆಗಳು, 559 ಬಾವಿಗಳು ಇವೆ. ಹಟ್ಟಿಯಂಗಡಿಯಲ್ಲಿ 338 ಕುಟುಂಬಗಳು, 1897 ಜನಸಂಖ್ಯೆಯಿದೆ. 120ರಷ್ಟು ನಳ್ಳಿನೀರಿನ ಸಂಪರ್ಕಗಳಿದ್ದು ತೀರಾ ಈಚಿನವರೆಗೆ ನೀರಿನ ಸಮಸ್ಯೆ ಇರಲಿಲ್ಲ. ಪಂಚಾಯತ್‌ ನೀರಿಗಿಂತ ಖಾಸಗಿ ನೀರು ನಂಬಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದರೂ ಬೇಸಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಕೆರೆ, ಬಾವಿಗಳಲ್ಲಿ ನೀರು ಆಳಕ್ಕಿಳಿದು ಕುಡಿಯಲು ಕೂಡ ತತ್ವಾರ ಉಂಟಾಗುತ್ತಿದೆ.

ಹೊಸ ಯೋಜನೆ
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಸೌಕೂರು ಸಿದ್ದಾಪುರ ಏತನೀರಾವರಿಗೆ , ವಾರಾಹಿ ನೀರಿಗಾಗಿ 60 ಕೋ.ರೂ. ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಈಗಿನ ಸಮ್ಮಿಶ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 50 ಕೋ.ರೂ. ಈ ಯೋಜನೆಗಾಗಿ ಅನುದಾನ ಮೀಸಲಿಟ್ಟಿದೆ. ಈ ಕಾಮಗಾರಿ ನಡೆದರೆ ಹಟ್ಟಿಯಂಗಡಿ ಪರಿಸರದ ಅಂತರ್ಜಲಮಟ್ಟ ಹೆಚ್ಚಾಗಲಿದ್ದು ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಆಶಿಸಲಾಗಿದೆ. 

ಎಲ್ಲೆಲ್ಲಿ?
ಕೆಂಚನೂರು, ಕದರಿಗುಡ್ಡ, ನೆಂಪು, ಗುಡ್ರಿ, ಎಲ್ಕೋಡು, ಬಟ್ರಾಡಿ, ಜಾಡುಕಟ್ಟು, ಮಾವಿನಕಟ್ಟೆ, ಕಾಂಜೂರುೆ, ಜನತಾ ಕಾಲನಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತದೆ. 850 ಅಡಿ ಕೊರೆದು ಎರಡು ಕೊಳವೆ ಬಾವಿ ತೆಗೆದರೂ ನೀರು ಸಿಕ್ಕಿಲ್ಲ. ಒಟ್ಟು 6 ಕೊಳವೆ ಬಾವಿಗಳಿದ್ದರೂ ಉಪಯೋಗಕ್ಕೆ ಸಿಕ್ಕಿರುವುದು 2 ಮಾತ್ರ. ಪಂಚಾಯತ್‌ನದ್ದು 4 ತೆರೆದ ಬಾವಿಗಳಿದ್ದು  ಕುಡಿಯುವ ನೀರಿಗೆ ಆಶ್ರಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಉಪಯೋಗಕ್ಕಾಗಿ ಸರಕಾರಿ ಬಾವಿ ತೆಗೆಯಬಹುದು. ಆದರೆ ಕಾರ್ಮಿಕರು ದೊರೆಯುತ್ತಿಲ್ಲ ಎಂಬ ಅಳಲು ಇದೆ. ಅದೇ ಯೋಜನೆಯಲ್ಲಿ ಖಾಸಗಿ ಬಾವಿ ಕೂಡ ತೆಗೆಸಬಹುದು. ಅದಕ್ಕಾದರೂ ಒಂದಷ್ಟು ಮಂದಿ ಉತ್ಸಾಹ ತೋರಿದ್ದರು ಎನ್ನುತ್ತಾರೆ ಪಂಚಾಯತ್‌ನವರು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವಾಗ ತೀವ್ರತರ ಸಮಸ್ಯೆ ಇರುವ ಪ್ರದೇಶಗಳ ಜತೆಗೆ ಬೇಸಗೆಯ ಬಿಸಿ ಏರುತ್ತಿದ್ದಂತೆ ಖಾಸಗಿಯಾಗಿ ನೀರಿನಾಶ್ರಯ ಇರುವವರಿಗೂ ಕೊಡಬೇಕಾಗುತ್ತದೆ. ಏಕೆಂದರೆ ಅಲ್ಲಿ ಕೂಡ ಜಲಮೂಲದ ಸೆಲೆ ಕಡಿಮೆಯಾಗಿರುತ್ತದೆ. 

ಶಾಸಕರಿಗೆ ಮನವಿ
ಕಡೆRರೆಗುಡ್ಡ, ಕಡಿರೆ ಮೊದಲಾದ ಕಾಲನಿಗಳಲ್ಲಿ ತೀವ್ರವಾದ ನೀರಿನ ಸಮಸ್ಯೆ ಉಂಟಾಗುತ್ತದೆ. ಈ ಬಾರಿ ಬೇಗನೇ ನೀರು ಕಡಿಮೆಯಾಗಿದ್ದು , ಪಂಚಾಯತ್‌ ವತಿಯಿಂದ ಕೊಳವೆಬಾವಿ ಕೊರೆಸಿದಾಗ  ನೀರು ದೊರೆಯಲಿಲ್ಲ. ಆದ್ದರಿಂದ ತೆರೆದ ಬಾವಿ ತೆಗೆಯಲು ಅನುದಾನ ನೀಡುವಂತೆ ಶಾಸಕರಿಗೆ ಮನವಿ ನೀಡಲಾಗಿದೆ. ಬಜೆಟ್‌ನಲ್ಲಿ ಘೋಷಣೆಯಾದ ಸೌಕೂರು ಸಿದ್ದಾಪುರ ಏತ ನೀರಾವರಿ ಯೋಜನೆಯಿಂದ ಈ ಭಾಗಕ್ಕೂ ಪ್ರಯೋಜನ ದೊರೆಯಲಿದೆ.
– ಕೆ. ರಾಜೀವ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರು

ಕಾಲನಿಗಳಿಗೆ ಸಮಸ್ಯೆ
ಬೇಸಗೆಯಲ್ಲಿ ಜನತಾಕಾಲನಿಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಟ್ಯಾಂಕರ್‌ ಮೂಲಕ ನೀರಿನ ಸರಬರಾಜು ಮಾಡಲಾಗುತ್ತದೆ. ಸಮಸ್ಯೆ ಬಂದಲ್ಲಿ ತತ್‌ಕ್ಷಣ ಸ್ಪಂದನೆ ನೀಡಲಾಗುತ್ತದೆ.
– ರಿಯಾಜ್‌ ಅಹ್ಮದ್‌, ಪಂ. ಅಭಿವೃದ್ಧಿ ಅಧಿಕಾರಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.