ಹೆಝಲ್ ಸಾವು: ದಾಖಲೆಗಳಿಗೆ ಪರದಾಟ
Team Udayavani, Oct 14, 2018, 10:23 AM IST
ಉಡುಪಿ: ಶಿರ್ವದ ನರ್ಸ್ ಹೆಝಲ್ ಸಾವಿಗೀಡಾದ ಪ್ರಕರಣದಲ್ಲಿ ಜೆದ್ದಾದ ಭಾರತೀಯ ರಾಯಭಾರ ಕಚೇರಿ ಸೂಕ್ತ ದಾಖಲೆಗಳನ್ನು ಕಳುಹಿಸಿಕೊಡದೆ ಅನ್ಯಾಯ ಮಾಡಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಶನಿವಾರ ಹೆಝಲ್ ಬಂಧುಗಳ ಸಮ್ಮುಖ ಅವರು ಪತ್ರಿಕಾಗೋಷ್ಠಿ ನಡೆಸಿದರು. ಆರು ವರ್ಷಗಳಿಂದ ಅಲ್ ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹೆಝಲ್ ಆತ್ಮಹತ್ಯೆಯೋ ಕೊಲೆಯೋ ಎಂಬ ಸಂಶಯ ಜೀವಂತವಾಗಿದೆ ಎಂದರು.
ಮರಣೋತ್ತರ ಪರೀಕ್ಷಾ ವರದಿ, ಹೆಝಲ್ ಬರೆದ ಮರಣ ಪತ್ರ, ಆರೋಪ ಪಟ್ಟಿಯಂತಹ ದಾಖಲೆಗಳು ಬಂದ ಬಳಿಕವೇ ಇಂತಹ ಪ್ರಕರಣಗಳಲ್ಲಿ ನಿರ್ಧಾರ ತಳೆಯಬಹುದು. ಆತ್ಮಹತ್ಯೆ ಎಂದು ವೈದ್ಯರ ವರದಿಯನ್ನು ಮತ್ತು ಪೂರಕ ಪೊಲೀಸ್ ವರದಿಯನ್ನು ರಾಯಭಾರ ಕಚೇರಿಯವರು ಕಳುಹಿಸಿದ್ದಾರೆ. ಸೌದಿಯಲ್ಲಿ ಉದ್ಯೋಗದಲ್ಲಿರು
ವವರಿಗೆ ವಿಮೆ ಕಡ್ಡಾಯ. ಹೆಝಲ್ ಬ್ಯಾಂಕ್ ಖಾತೆ ಕುರಿತೂ ಮಾಹಿತಿ ನೀಡಿಲ್ಲ.
ಆತ್ಮಹತ್ಯೆ ಎನ್ನುವುದು ಹೇಗೆ?
ವಿಧಿವಿಜ್ಞಾನ ಕೇಂದ್ರದವರು ಕಳುಹಿಸಿದ ವರದಿಯಲ್ಲಿ ನೇಣು ಹಾಕಿಕೊಂಡ ಪ್ರಕರಣವೆಂದು ಇದೆ. ಆಲ್‌ಬಹಾ ಜಿಲ್ಲೆಯ ಪೊಲೀಸ್ ನಿರ್ದೇಶಕರೂ ನೇಣು ಬಿಗಿದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಇದೇ ಪತ್ರದಲ್ಲಿ ಹಿಂಸೆ ನಡೆದದ್ದು / ಪ್ರತಿರೋಧ / ಬೇರೆ ಇನ್ನಿತರ ಚಿಹ್ನೆಗಳು ಕಂಡು ಬಂದಿಲ್ಲ ಎಂದಿದ್ದಾರೆ. ಹಿಂಸೆ/ ಪ್ರತಿರೋಧ ಚಿಹ್ನೆ ಕಾಣದೆ ಸಂತ್ರಸ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಘೋಷಿಸಿದ್ದು ಹೇಗೆ ಎಂದು ಡಾ| ಶಾನುಭಾಗ್ ತಿಳಿಸಿದರು.
ಪತ್ರಕ್ಕೆ ಉತ್ತರ ಬಂದಿಲ್ಲ
ಪ್ರಕರಣದಲ್ಲಿ ಏನು ಆಗಿದೆ ಎಂದು ತಿಳಿಸುವ ಜವಾಬ್ದಾರಿ ಭಾರತ ಸರಕಾರಕ್ಕೆ ಇದೆ. ಎಲ್ಲ ದಾಖಲೆಗಳನ್ನು ಕಳುಹಿಸುವುದು ರಾಯಭಾರ ಕಚೇರಿಯವರ ಕರ್ತವ್ಯ. ಪ್ರತಿಷ್ಠಾನದಿಂದ ಅಲ್ಲಿನ ಪೊಲೀಸ್ ಇಲಾಖೆಗೆ, ರಾಯಭಾರ ಕಚೇರಿಗೆ, ಸಾವಿಗೀಡಾದ ಆಸ್ಪತ್ರೆಗೆ ಪತ್ರ ಬರೆದಿದ್ದರೂ ಸರಿಯಾದ ಉತ್ತರ ಬಂದಿಲ್ಲ ಎಂದರು.
ಒಂದು ವಾರ ಕಾಯಲು ನಿರ್ಧಾರ
ಸೂಕ್ತ ದಾಖಲೆಗಳಿಗಾಗಿ ಇನ್ನೂ ಒಂದು ವಾರ ಮನೆಯವರು ಕಾಯಲು ನಿರ್ಧರಿಸಿದ್ದಾರೆ. ಬಾಕಿ ವೇತನ, ಸೌಲಭ್ಯಗಳ ಕುರಿತು ಪತ್ರಗಳನ್ನು ಉದ್ಯೋಗದಾತರಿಗೆ, ಉಪ ರಾಯಭಾರಿ ಸಂಜಯ ಕುಮಾರ್ ಶರ್ಮ, ಪೊಲೀಸ್ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ಪ್ರತಿ ಷ್ಠಾನವು ಎಲ್ಲ ಸಹಕಾರವನ್ನು ನೀಡಲಿದೆ ಎಂದು ಡಾ| ಶ್ಯಾನುಭಾಗ್ ಅವರು ತಿಳಿಸಿದರು. ಹೆಝಲ್ ತಂದೆ ರಾಬರ್ಟ್ ಕ್ವಾಡ್ರಸ್, ತಾಯಿ ಎಲೆನ್ ಕ್ವಾಡ್ರಸ್, ಪತಿ ಅಶ್ವಿನ್ ಮಥಾಯಸ್, ಸಹೋದರ ರಾಯನ್ ಮಾರ್ವಿನ್ ಕ್ವಾಡ್ರಸ್ ಅವರು ಉಪಸ್ಥಿತರಿದ್ದರು.
ಮರುಮರಣೋತ್ತರ ಪರೀಕ್ಷೆ ಸಾಧ್ಯ, ಆದರೆ…!
ಹೆಝಲ್ ಪ್ರಕರಣದ ತನಿಖೆ ವರದಿಯಲ್ಲಿ ಸಂಶಯ ಕಂಡುಬಂದರೆ ಮತ್ತೆ ಮರಣೋತ್ತರ ಪರೀಕ್ಷೆ ಖಂಡಿತವಾಗಿ ಸಾಧ್ಯವಿದೆ. ಆದರೆ ಸಾಂಪ್ರದಾಯಿಕರಾದ ಮನೆಯವರು ಒಪ್ಪುತ್ತಾರೋ ಎಂಬುದನ್ನು ನೋಡಬೇಕು ಎಂದು ಡಾ| ಶಾನುಭಾಗ್ ತಿಳಿಸಿದರೆ, ವಿವರ ದಾಖಲೆಗಳು ಬಂದ ಬಳಿಕ ಮರು ಮರಣೋತ್ತರ ಪರೀಕ್ಷೆ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲಾಗುವುದು ಎಂದು ಹೆಝಲ್ ಸಹೋದರ ರಾಯನ್ ಮಾರ್ವಿನ್ ಕ್ವಾಡ್ರಸ್ ತಿಳಿಸಿದರು.
ಆರೋಪಿಗೆ ಜಾಮೀನು?
ಹೆಝಲ್ ಮರಣಪತ್ರದಲ್ಲಿ ಹೆಸರಿಸಿರುವ ಇಬ್ರಾಹಿಂ ಎಂಬ ವ್ಯಕ್ತಿ ಸಾವಿಗೆ ಕಾರಣವೆಂದು ಪ್ರತಿಷ್ಠಾನಕ್ಕೆ ಕಂಡುಬಂದಿದೆ. ಮರಣಪತ್ರವನ್ನು ಇಂಗ್ಲಿಷ್ ಲಿಪಿಯಲ್ಲಿ ಕೆಥೊಲಿಕ್ ಕೊಂಕಣಿ ಭಾಷೆಯಲ್ಲಿ ಬರೆದಿದ್ದಾರೆ. ಈತನಿಗೆ ಮೂರು ದಿನಗಳ ಹಿಂದೆ ಜಾಮೀನು ದೊರಕಿ ಬಹಿರಂಗವಾಗಿ ತಿರುಗಾಡುತ್ತಿದ್ದಾನೆಂದು ತಿಳಿದುಬಂದಿದೆ. ಸೌದಿ ಕಾನೂನಿನ ಪ್ರಕಾರ ಸೂಕ್ತ ಪರಿಹಾರ ದೊರಕಬೇಕು. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ತೀರ್ಪು ಬಂದಿದೆಯೋ ತಿಳಿದಿಲ್ಲ. ಇದನ್ನು ರಾಯಭಾರ ಕಚೇರಿಯವರು ಕುಟುಂಬಕ್ಕೆ ತಿಳಿಸಬೇಕು.
ಡಾ| ರವೀಂದ್ರನಾಥ ಶಾನುಭಾಗ್, ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.