ಆರೋಗ್ಯ ಭಾಗ್ಯ ಎಲ್ಲಡೆಯೂ,ಎಲ್ಲರಿಗೂ ಸಿಗುವಂತಾಗಲಿ


Team Udayavani, Apr 6, 2019, 6:00 AM IST

hh

ಮನುಷ್ಯನ ಜೀವನದ ನೆಮ್ಮದಿ, ಸಂತೋಷ ಶ್ರೀಮಂತಿಕೆಯಲ್ಲಿ ಇಲ್ಲ, ಆರೋಗ್ಯದಲ್ಲಿ ಇದೆ. ಆರೋಗ್ಯವೇ ಮಹಾಭಾಗ್ಯ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಇಂದು ಇದ್ದವರು ನಾಳೆ ಇಲ್ಲ ಎಂಬಂತಹ ಸ್ಥಿತಿ. ದಿನಕ್ಕೊಂದು ಹೊಸ ರೋಗ ಮನುಷ್ಯನನ್ನು ಬಾಧಿಸುತ್ತಿವೆ. ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಜವಾಬ್ದಾರಿ. ಹಳ್ಳಿಗಳೇ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರ ಗಮನಾರ್ಹ ಬೆಳವಣಿಗೆ ಕಂಡಿದ್ದರೂ ಕೆಲವು ಕಡೆ ಆಸ್ಪತ್ರೆಗಳೇ ಇಲ್ಲ. ಇದ್ದರೂ ಮೂಲ ಸೌಲಭ್ಯಗಳಿಲ್ಲ.
ಎ. 7ರಂದು ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು ಪ್ರಸ್ತುತವೆನಿಸಬಹುದು.

ಹಿನ್ನೆಲೆ
1948ರಲ್ಲಿ ಜಿನೇವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗ ಸಭೆಯಲ್ಲಿ ಎ. 7ರಂದು ವಿಶ್ವ ಆರೋಗ್ಯ ದಿನ ಆಚರಿಸಲು ನಿರ್ಧರಿಸಲಾಯಿತು. ಜಾಥಾ, ವಿಚಾರ ಸಂಕಿರಣ ಆಯೋಜಿಸಲಾಗುತ್ತದೆ. 1950ರಲ್ಲಿ ವಿಶ್ವ ಆರೋಗ್ಯ ದಿನವನ್ನು “ಆರೋಗ್ಯ ಸೌಲಭ್ಯಗಳ ಬಗ್ಗೆ ಅರಿವಿರಲಿ’ (know your health service) ಸಂದೇಶದೊಂದಿಗೆ ಆಚರಿಸಲಾಗಿತ್ತು.

ವಿಶೇಷ ಸಂದೇಶ
2019ರ ವಿಶ್ವ ಆರೋಗ್ಯ ದಿನವನ್ನು ಆರೋಗ್ಯ ಎಲ್ಲರಿಗೂ, ಎಲ್ಲಡೆಯೂ (ಯೂನಿವಸ‌ìಲ್‌ ಹೆಲ್ತ್‌ ಕವರೇಜ್‌: ಎವರಿವನ್‌, ಎವರಿವೇರ್‌) ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷ ಎಲ್ಲರಿಗೂ ಆರೋಗ್ಯ ಸಿಗುವಂತಾಗಲಿ ಎಂಬ ಧ್ಯೇಯ ವಾಕ್ಯವಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ #worldhealthday #healthforeveryone ಹ್ಯಾಷ್‌ಟ್ಯಾಗ್‌ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಎಷ್ಟು ಹಣ ಕೂಡಿಟ್ಟರೂ ಒಂದು ಕಾಯಿಲೆ ಬಂದು ಅದಕ್ಕೆ ಚಿಕಿತ್ಸೆ ಪಡೆಯುವಷ್ಟರಲ್ಲಿ ಎಲ್ಲವೂ ಕರಗುತ್ತದೆ. ಹೀಗಾಗಿ, ಹಣ, ಆಸ್ತಿ, ಅಂತಸ್ತು – ಎಲ್ಲದಕ್ಕಿಂತಲೂ ಆರೋಗ್ಯವೇ ಸರ್ವ ಸಂಪತ್ತು ಎಂಬ ಭಾವನೆ ಜನರಲ್ಲಿ ಬಂದಿದೆ. ನಾಳೆ (ಎ. 7) ವಿಶ್ವ ಆರೋಗ್ಯ ದಿನ. ಉತ್ತಮ ಆರೋಗ್ಯ ಎಲ್ಲರದಾಗಲಿ ಎಂಬ ಸದಾಶಯದೊಂದಿಗೆ ಒಂದಷ್ಟು ಆರೋಗ್ಯ ಚಿಂತನೆಗಳು ಇಲ್ಲಿವೆ.

ವಿಶ್ವ ಆರೋಗ್ಯ ಜಾಗೃತಿ ದಿನ
ಆಸ್ಪತ್ರೆಗಳು ಕಡಿಮೆಯಿದ್ದ ದಿನಗಳಲ್ಲೂ ಜನರು ಆರೋಗ್ಯವಂತರಾಗಿ ಜೀವಿಸುತ್ತಿದ್ದರು. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಜನರ ಆರೋಗ್ಯ ಮಟ್ಟ ಕ್ಷೀಣಿಸಲು ಕಾರಣವೇನು? ಪ್ರತಿಯೊಂದಕ್ಕೂ ವೈದ್ಯದ ಬಳಿಗೆ ಓಡುವ ಬದಲು ನಮ್ಮ ದಿನಚರಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಆರೋಗ್ಯವಂತರಾಗೋಣ.

ಬೆಳಗ್ಗೆ ಎದ್ದೊಡನೆ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ. ಬೆಳಗ್ಗಿನ ಉಪಾಹಾರದಲ್ಲಿ ಎಣ್ಣೆಯ ಅಂಶ ಅತೀ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಆಹಾರವನ್ನು ಒತ್ತಡವಿಲ್ಲದೆ, ಇಷ್ಟಪಟ್ಟು ತಿನ್ನಬೇಕು. ಟೀವಿ, ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಬಳಕೆಯನ್ನು ಆಹಾರ ಸೇವನೆ ಸಂದರ್ಭದಲ್ಲಿ ತ್ಯಜಿಸುವುದೇ ಸೂಕ್ತ. ವೈದ್ಯರೇ ಹೇಳುವ ಪ್ರಕಾರ ಗಮನ ಕೊಡದೇ ಮಾಡುವ ಊಟಗಳು ಅಜೀರ್ಣವಾಗುತ್ತವೆ. ಬೇರೆ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು.

ಪರಿಸರದ ಸ್ವತ್ಛತೆ ಮುಖ್ಯ
ಆರೋಗ್ಯವಂತರಾಗಿರಲು ನಮ್ಮ ಪರಿಸರವೂ ಕಾರಣ. ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ತಡೆಯಬೇಕು. ಚರಂಡಿಗಳನ್ನು ಆಗಾಗ ಸ್ವತ್ಛಗೊಳಿಸಬೇಕು. ಕಸದ ವಿಲೇವಾರಿಯನ್ನು ನಿತ್ಯವೂ ಮಾಡಬೇಕು. ಮನೆಯ ಸುತ್ತಮುತ್ತ ಒಂದಿಷ್ಟು ಗಿಡಗಳನ್ನು ನೆಟ್ಟು ಬೆಳೆಸಬೇಕು

– ಇಟಲಿ, ಐಲ್ಯಾಂಡ್‌, ಸ್ವಿಡ್ಜರ್‌ಲ್ಯಾಂಡ್‌, ಸಿಂಗಾಪುರ, ಆಸ್ಟ್ರೇ ಲಿಯಾ ಇವು ಜಗತ್ತಿನ ಟಾಪ್‌ 5 ಆರೋಗ್ಯವಂತ ರಾಷ್ಟ್ರಗಳು.
– ಆರೋಗ್ಯ ಮಾನವನ ಹಕ್ಕು. ಇದು ಎಲ್ಲರಿಗೂ ಆರೋಗ್ಯ ಎನ್ನುವ ಸಮಯ.
– ಜಗತ್ತಿನ ಸುಮಾರು ಶೇ. 50ರಷ್ಟು ಮಂದಿಗೆ ಆವಶ್ಯಕವಿರುವ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ.
– ವರ್ಷವೊಂದಕ್ಕೆ ಸುಮಾರು 100 ಮಿಲಿಯನ್‌ ಜನರಿಗೆ ಬಡತನದಿಂದ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
– ಈ ಸಾಲಿನ ಭಾರತ ಸರಕಾರದ ಈ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸದ ಹಣ 61,398 ಕೋಟಿ ರೂ.
– ಆಯುಷ್ಮಾನ್‌ ಭಾರತ ಯೋಜನೆಗೆ ಮೀಸಲಾದ ಹಣ 6,400 ಕೋಟಿ ರೂ.
– ರಾಷ್ಟ್ರೀಯ ಗ್ರಾಮಿಣ ಮಿಷನ್‌ ಅಡಿಯಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯ ಮತ್ತು ಕ್ಷೇಮ ಕ್ಕಾಗಿ ಮೀಸಲಾದ ಹಣ 1350 ಕೋಟಿ ರೂ.ಗಳು.

ಕಾಡುವ ಆ ರೋಗಗಳು!
ಆರೋಗ್ಯ ಸಮಸ್ಯೆ ಇಂದು ಎಲ್ಲರನ್ನೂ ಕಾಡುತ್ತಿದೆ. ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲರಿಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲವು ಕಾಯಿಲೆಗಳಿಗೆ ಚಿಕಿತ್ಸೆಯೂ ಕಷ್ಟ. ಇಂತಹವುಗಳಿಗೆ ಬಲಿಯಾಗುವವರ ಸಂಖ್ಯೆಯೂ ಅಧಿಕ ಆಗುತ್ತಿದೆ. ಅಂತಹ ಕಾಯಿಲೆಗಳ ಪಟ್ಟಿ ಇಲ್ಲಿದೆ.

ಹೃದಯ ಸಮಸ್ಯೆ
ಅಮೆರಿಕ ಸಹಿತ ವಿಶ್ವಾದ್ಯಂತ ಜನರನ್ನು ಅತಿ ಹೆಚ್ಚು ಬಾಧಿಸುವುದು ಹೃದ್ರೋಗ. ವರ್ಷಕ್ಕೆ 6,14,348 ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಪುರುಷರಲ್ಲೇ ಇದು ಜಾಸ್ತಿ. ಉಪ್ಪಿನ ಅಂಶ ಕಡಿಮೆಯಿರುವ ಆಹಾರ ಸೇವನೆ, ನಿತ್ಯ ವ್ಯಾಯಾಮ ಹೃದಯ ಸಮಸ್ಯೆಯನ್ನು ದೂರವಿಡುತ್ತದೆ.

ಕ್ಯಾನ್ಸರ್‌ ವರ್ಷಕ್ಕೆ 5,91,669 ಜನರ ಪ್ರಾಣ ತೆಗೆಯುತ್ತಿದೆ. ಅಸಮತೋಲಿತ ಆಹಾರ ಪದ್ಧತಿಯೇ ಪ್ರಮುಖ ಕಾರಣ. ಧೂಮಪಾನ – ಮದ್ಯಪಾನ ಹಾಗೂ ತಂಬಾಕು ಸೇವನೆ ತ್ಯಜಿಸುವುದು ಉತ್ತಮ ಪರಿಹಾರ.

ಇವುಗಳಲ್ಲದೆ 1.33 ಲಕ್ಷ ಜನರು ಸ್ಟ್ರೋಕ್‌ಗೆ, 93,451 ಜನರು ಆಲಿlàಮರ್‌ಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಮಧುಮೇಹ ಕಾಡುತ್ತಿದೆ. ಔಷಧಗಳನ್ನು ನಿಯಮಿತವಾಗಿ ತೆಗೆದು ಕೊಂಡರೆ ಅಪಾಯ ದೂರವಿಡಬಹುದು.

ಆರೋಗ್ಯವಂತ
ಜೀವನ ಕ್ರಮ
1 ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳನ್ನು ತ್ಯಜಿಸಿ.
2 ನಡಿಗೆ, ವ್ಯಾಯಾಮ, ಯೋಗ, ಧ್ಯಾನ ಮುಂತಾದವು ದಿನಚರಿಯ ಭಾಗವಾಗಲಿ.
3 ನಾರಿನಂಶ, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ.
4 ಸೊಪ್ಪು, ಹಸಿರು, ಹಸಿ, ಬೇಳೆ, ಕಾಳು ನಿಮ್ಮ ಊಟದ ತಟ್ಟೆಯಲ್ಲಿರಲಿ.
5 ಸ್ವಯಂ ಚಿಕಿತ್ಸೆ ಬೇಡ; ತಜ್ಞ ವೈದ್ಯರನ್ನು ಭೇಟಿಯಾಗಿ.
6 ಕಾಯಿಲೆ ಇಲ್ಲದ್ದಿರೂ ನಿಯಮಿತವಾಗಿ ಆರೋಗ್ಯ ಪರೀಕ್ಷಿಸಿಕೊಳ್ಳಿ
7 ಜಂಕ್‌ಫ‌ುಡ್‌, ಸಾಫ್ಟ್ ಡ್ರಿಂಕ್ಸ್‌ ಸೇವನೆ ಮಿತಿಯಲ್ಲಿರಲಿ
8 ಬೇಗ ಎದ್ದು, ಬೇಗ ಮಲಗುವ ಹವ್ಯಾಸ ರೂಢಿಸಿಕೊಳ್ಳಿ
9 ಅತಿಯಾದ ಮೊಬೈಲ್‌, ಕಂಪ್ಯೂಟರ್‌ ಬಳಕೆ ಬೇಡ
10 ಪ್ರತಿದಿನ ಸಾಕಷ್ಟು ನೀರು ಕುಡಿಯುವ ಹವ್ಯಾಸ ಉತ್ತಮ

ನಾವು ಏನು ಮಾಡಬಹುದು?
ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಬಯಲು ಶೌಚಾಲಯವೇ ಇನ್ನೂ ಬಹುದೊಡ್ಡ ಸಮಸ್ಯೆ. ಸ್ವತ್ಛತೆ ಹಾಗೂ ಆರೋಗ್ಯಕ್ಕೂ ಇದೇ ದೊಡ್ಡ ಅಡ್ಡಿ. ಮನುಷ್ಯನ ದೇಹಕ್ಕೆ ಕೀಟಾಣುಗಳು ನೇರವಾಗಿ ಪ್ರವೇಶಿಸುವ ಕಾರಣ ಕೈ-ಕಾಲುಗಳನ್ನು ಸ್ವತ್ಛವಾಗಿ ತೊಳೆದುಕೊಂಡೇ ಆಹಾರ ಸೇವಿಸಬೇಕು.

ಯಾಂತ್ರಿಕ ಜೀವನ ಶೈಲಿಗೆ ಅಂಟಿಕೊಂಡಿರುವ ನಾವು ವ್ಯಾಯಾಮವನ್ನೇ ಮರೆತಿದ್ದೇವೆ. ಮಿತಿ ಮೀರಿದ ಬೊಜ್ಜು ಹಲವರ ಸಮಸ್ಯೆಯಾಗುತ್ತಿದೆ. ಮಂಡಿ ನೋವು, ನೇತ್ರ ಸಂಬಂಧಿ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ. ಯೋಗ, ಧ್ಯಾನ, ನಡಿಗೆ, ಯಥೇತ್ಛ ದ್ರವಾಹಾರ ಸೇವನೆ, ಆಟೋಟಗಳಲ್ಲಿ ಪಾಲ್ಗೊಳ್ಳುವುದು ಆರೋಗ್ಯಪೂರ್ಣ ಜೀವನ ಕ್ರಮಕ್ಕೆ ಪೂರಕ. ಹಣ್ಣು, ತರಕಾರಿ, ಮೊಟ್ಟೆ ಸೇವನೆಯಿಂದ ಸಾಕಷ್ಟು ಪೌಷ್ಟಿಕಾಂಶಗಳು ದೇಹಕ್ಕೆ ಸಿಗುತ್ತವೆ. ಫಾಸ್ಟ್‌ ಫ‌ುಡ್‌, ಜಂಕ್‌ ಫ‌ುಡ್‌ಗಳನ್ನು ತ್ಯಜಿಸುವುದೇ ಸೂಕ್ತ. ಕೃತಕ ಪೇಯಗಳಿಗಿಂತ ಹಣ್ಣಿನ ರಸ, ಎಳನೀರು ಶ್ರೇಷ್ಠ.ಶಾಲಾ-ಕಾಲೇಜುಗಳಲ್ಲಿ ಆರೋಗ್ಯ ಸಂಬಂಧಿ ಶಿಕ್ಷಣವನ್ನು ನೀಡಬೇಕು.

ಪ್ರಧಾನ ಮಂತ್ರಿ ಜನ ಔಷಧ ಕೇಂದ್ರ
ಪ್ರಧಾನ ಮಂತ್ರಿ ಜನ ಔಷಧ ಕೇಂದ್ರವು ಕೇಂದ್ರ ಸರಕಾರದ ಔಷಧ ಇಲಾಖೆಯಿಂದ ಪ್ರಾಯೋಜಿತವಾದ ಜೆನರಿಕ್‌ ಔಷಧಿಗಳ ಮಳಿಗೆ ಆಗಿರುತ್ತದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್‌ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ಶೇ. 30ರಿಂದ 80ರ ವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಈ ಔಷಧಗಳಿಗೆ ಯಾವುದೇ ಬ್ರಾಂಡ್‌ನ‌ ಹೆಸರು ಇರುವುದಿಲ್ಲ. ಆದರೆ, ಯಾವುದೇ ಬ್ರಾಂಡಿನ ಔಷಧಗಳಿಗೆ ಹೋಲಿಸಿದರೂ ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಬೆಲೆಯೂ ಬಡವರ ಕೈಗೆಟಕುವಂತಿರುತ್ತದೆ.

ಜನರ ಜೀವನ ಆರೋಗ್ಯ ಮಟ್ಟವೇ ದೇಶದ ಅಭಿವೃದ್ಧಿಯ ದ್ಯೋತಕ. ಸಾಂಕ್ರಾಮಿಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದರೂ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಇನ್ನೂ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಆಧುನಿಕ ತಂತ್ರಜ್ಞಾನವೂ ಇದೆ, ನುರಿತ ವೈದ್ಯರೂ ಇದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇವುಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ಪಾರದರ್ಶಕವಾಗಿ ಅನುಷ್ಠಾನವಾಗಬೇಕಿದೆ.
– ಡಾ| ಶ್ರೀನಿವಾಸ್‌ ಹೊಡೆಯಾಲ
ಆಳ್ವಾಸ್‌ ಸ್ನಾತಕೋತ್ತರ ಕೇಂದ್ರ, ಮೂಡುಬಿದಿರೆ

ಮಾಹಿತಿ: ರಮೇಶ್‌ ಬಳ್ಳಮೂಲೆ,ಪ್ರಸನ್ನ ಹೆಗಡೆ ಊರುಕೇರಿ,ಪ್ರೀತಿ ಆರ್‌.ಭಟ್‌,ಶಿವು ಸ್ಥಾವರಮಠ, ಕಾರ್ತಿಕ್‌ ಚಿತ್ರಾಪುರ,ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.