ಆರ್ಡಿ: ಬಸ್ಸಿನಲ್ಲೇ ಹೃದಯಾಘಾತ
Team Udayavani, Apr 23, 2018, 6:00 AM IST
ಸಿದ್ದಾಪುರ: ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಕುಂದಾಪುರ ತಾಲೂಕಿನ ಆರ್ಡಿಗೆ ಬರುತ್ತಿದ್ದ ಆರ್ಡಿ ಮೇಲ್ಬೆಟ್ಟು ಜೆಡ್ಡು ಚಂದ್ರ ಶೆಟ್ಟಿ (43) ಎ.21ರ ಸಂಜೆ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ.
ಅವರು 8 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎ.21ರ ಮುಂಜಾನೆ 5 ಗಂಟೆ ವೇಳೆಗೆ ಬೆಂಗಳೂರಿನಿಂದ ಹೊರಟು, ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಆಗುಂಬೆ ಮಾರ್ಗವಾಗಿ ಹೆಬ್ರಿಗೆ ತಲುಪಿದರು. ಅಲ್ಲಿಂದ ಖಾಸಗಿ ಬಸ್ನಲ್ಲಿ ಆರ್ಡಿಗೆ ಬರು ವಾಗ ಆರ್ಡಿ ಸಮೀಪದ ಮಾಂಡಿಮೂರು ಕೈ ಹತ್ತಿರದ ಮುಂಡಳ್ಳಿಗೆ ತಲುಪುತ್ತಿದ್ದಂತೆ ಅವರು ಕುಸಿದು ಬಿದ್ದರು. ಬಸ್ ಸಿಬಂದಿ ಮಾಂಡಿಮೂರುಕೈ ಬಳಿ ಬಸ್ ನಿಲ್ಲಿಸಿ, 108 ವಾಹನದ ಸಹಾಯದಿಂದ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಾಗ ವೈದ್ಯರು ಮೃತ ಪಟ್ಟಿರುವುದನ್ನು ಖಚಿತ ಪಡಿಸಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.