ಕುಂದಾಪುರ ತಾಲೂಕಿನಾದ್ಯಂತ ಮಳೆಗೆ ಅಪಾರ ಹಾನಿ

Team Udayavani, Aug 24, 2018, 1:30 AM IST

venuru-male-16-8.jpg

ಕುಂದಾಪುರ: ತಾಲೂಕಿನಾದ್ಯಂತ ಜೂನ್‌ನಿಂದ ಆಗಸ್ಟ್‌ವರೆಗೆ ಸುರಿದ ಮಳೆ ಗಾಳಿಗೆ ಅಪಾರ ನಷ್ಟವಾಗಿದೆ. 6 ಮಂದಿ ಮೃತಪಟ್ಟಿದ್ದು, 20 ಲಕ್ಷ ರೂ. ಪರಿಹಾರ ತಾಲೂಕು ಆಡಳಿತದ ವತಿಯಿಂದ ವಿತರಿಸಲಾಗಿದೆ. ನಷ್ಟದ ಪ್ರಮಾಣ ಇನ್ನಷ್ಟು ಜಾಸ್ತಿಯಿದೆ. ಕುಂದಾಪುರ, ಬೈಂದೂರಲ್ಲಿ ನೆರೆ ಸ್ಥಿತಿ ಉಂಟಾಗಿತ್ತು. ಸೌಪರ್ಣಿಕಾ, ಚಕ್ರಾ, ವಾರಾಹಿ, ಕುಬ್ಜಾ ಅಪಾಯದ ಮಟ್ಟ ಮೀರಿ ಹರಿದು ಈಗ ಮಳೆ ಕಡಿಮೆಯಾದ ಕಾರಣ ಆತಂಕ ನಿವಾರಣೆಯಾಗಿದೆ.

ಮೃತರು
ಚಲಿಸುತ್ತಿರುವ ಬೈಕಿನ ಮೇಲೆ ಮರ ಬಿದ್ದು ವಕ್ವಾಡಿಯ ರವಿ ದೇವಾಡಿಗ ಅವರು ಮೃತಪಟ್ಟರೆ, ಬೆಳ್ಳಾಲದ ಗೋವಿಂದ ಪೂಜಾರಿ, ಸಿದ್ದಾಪುರ ಐರೆಬೈಲು ನಿವಾಸಿ ಶಂಕರ ಪೂಜಾರಿ, ಇಡೂರು ಕುಂಜ್ಞಾಡಿಯ ರಘುರಾಮ ಶೆಟ್ಟಿ, ಭಟ್ಕಳದ ಮಂಜುನಾಥ ಮೊಗೇರ ಅವರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರ ಮನೆಯವರಿಗೆ ತಲಾ 5 ಲಕ್ಷ ರೂ.ಗಳಂತೆ ಪರಿಹಾರ ಒದಗಿಸಲಾಗಿದೆ. ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ಮಳೆಗೆ ದೈವಸ್ಥಾನದ ಗೋಡೆ ಬಿದ್ದು ಧನ್ಯಾ ಕೆ. ಮೃತಪಟ್ಟಿದ್ದರು.

ಮನೆಗೆ ಹಾನಿ
ಮನೆ ಹಾನಿ ಪ್ರಮಾಣ ಕೂಡಾ ದೊಡ್ಡ ಮಟ್ಟದಲ್ಲಿಯೇ ಇದೆ. ಬಸ್ರೂರಿನಲ್ಲಿ 4, ಆನಗಳ್ಳಿಯಲ್ಲಿ 5, ಬೆಳ್ವೆಯಲ್ಲಿ 2, ಅಲ್ನಾಡಿಯಲ್ಲಿ 5, ಶೇಡಿಮನೆಯಲ್ಲಿ 6, ವಡೇರಹೋಬಳಿಯಲ್ಲಿ 3, ಕುಂದಾಪುರದಲ್ಲಿ 7, ಹೆಂಗವಳ್ಳಿಯಲ್ಲಿ 14, ಅಂಪಾರಿನಲ್ಲಿ 5, ಹಾಲಾಡಿ 76ರಲ್ಲಿ 3, ಜಪ್ತಿಯಲ್ಲಿ 3, ಗೋಪಾಡಿಯಲ್ಲಿ 1, ಬೀಜಾಡಿಯಲ್ಲಿ 6, ತ್ರಾಸಿಯಲ್ಲಿ 1, ಸಿದ್ದಾಪುರದಲ್ಲಿ 2, ಗುಜ್ಜಾಡಿಯಲ್ಲಿ 4, ಕಟ್‌ಬೆಲೂ¤ರಿನಲ್ಲಿ 2, ಹಂಗಳೂರಿನಲ್ಲಿ 2, ಯಡಾಡಿ ಮತ್ಯಾಡಿಯಲ್ಲಿ 1, ಆಲೂರಿನಲ್ಲಿ 2, ಕಾವ್ರಾಡಿಯಲ್ಲಿ 3, ಶಂಕರನಾರಾಯಣದಲ್ಲಿ 1, ಹಕ್ಲಾಡಿಯಲ್ಲಿ 4, ಕಾಳಾವರದಲ್ಲಿ 2, ಮಡಾಮಕ್ಕಿಯಲ್ಲಿ 2, ಗಂಗೊಳ್ಳಿಯಲ್ಲಿ 3, ಉಪ್ಪಿನಕುದ್ರುವಿನಲ್ಲಿ 6, ಹಳ್ನಾಡುವಿನಲ್ಲಿ 1, ನೂಜಾಡಿಯಲ್ಲಿ 2, ತಲ್ಲೂರಿನಲ್ಲಿ 1, ಕೋಟೇಶ್ವರದಲ್ಲಿ 2, ದೇವಲ್ಕುಂದದಲ್ಲಿ 1, ವಕ್ವಾಡಿಯಲ್ಲಿ 1, ಕುಂದಬಾರಂದಾಡಿಯಲ್ಲಿ 1, ಕೆರಾಡಿಯಲ್ಲಿ 1, ಕಂದಾವರದಲ್ಲಿ 3, ತೆಕ್ಕಟ್ಟೆಯಲ್ಲಿ 1, ಕರ್ಕುಂಜೆಯಲ್ಲಿ 1, ಬೇಳೂರಿನಲ್ಲಿ 2, ಬಳ್ಕೂರಿನಲ್ಲಿ 1, ಕೊಡ್ಲಾಡಿಯಲ್ಲಿ 1, ವಂಡ್ಸೆಯಲ್ಲಿ 1, ಹಾರ್ದಳ್ಳಿ ಮಂಡಳ್ಳಿ 1 ಮನೆಗಳಿಗೆ ಹಾನಿಯಾಗಿದ್ದು ತಲಾ 5,200 ರೂ. ಪರಿಹಾರ ನೀಡಲಾಗಿದೆ. ಆಲೂರು,ನೂಜಾಡಿಯಲ್ಲಿ ಜಾನುವಾರು ಮೃತಪಟ್ಟಿದ್ದು 16 ಸಾವಿರ ರೂ.ವರೆಗೆ ಪರಿಹಾರ ನೀಡಲಾಗಿದೆ. ದನದ ಕೊಟ್ಟಿಗೆ ಹಾನಿಯಾದಲ್ಲಿ 2,100 ರೂ. ಪರಿಹಾರ ನೀಡಲಾಗಿದೆ. ಬೇಳೂರಿನಲ್ಲಿ 25 ಜನರಿಗೆ ಕೃಷಿ ಬೆಳೆ ಹಾನಿಯಾದ ಬಾಬ್ತು 82,180 ರೂ., ಉಳೂ¤ರಿನಲ್ಲಿ 45 ಜನರಿಗೆ 1,38,194 ರೂ., ಕಾಳಾವರದಲ್ಲಿ ನಾಲ್ವರಿಗೆ 11,084 ರೂ. ಪರಿಹಾರವನ್ನು ಕೃಷಿ ಇಲಾಖೆ ವತಿಯಿಂದ ನೀಡಲಾಗಿದೆ.

ತೋಟಗಾರಿಕಾ ಬೆಳೆ ಹಾನಿ
ವಿವಿಧೆಡೆ ತೋಟಗಾರಿಕಾ ಬೆಳೆ ಹಾನಿಯಾಗಿದ್ದು ತೋಟಗಾರಿಕಾ ಇಲಾಖೆ ವತಿಯಿಂದ ಪರಿಹಾರ ಒದಗಿಸಲಾಗಿದೆ. ಹೆಂಗವಳ್ಳಿಯಲ್ಲಿ ಒಟ್ಟು 13 ಮಂದಿಗೆ 29,900 ರೂ. ಪರಿಹಾರ ನೀಡಲಾಗಿದೆ. ಶಂಕರನಾರಾಯಣದಲ್ಲಿ 2,268 ರೂ., ಬೆಳ್ವೆಯಲ್ಲಿ ಇಬ್ಬರಿಗೆ 4 ಸಾವಿರ ರೂ., ಶೇಡಿಮನೆಯಲ್ಲಿ 18 ಮಂದಿಯ ತೋಟಗಾರಿಕಾ ಬೆಳೆಹಾನಿಗೆ 86,311 ರೂ., ಹಾರ್ದಳ್ಳಿ ಮಂಡಳ್ಳಿಯಲ್ಲಿ 2,000ರೂ., ಹೆಂಗವಳ್ಳಿಯಲ್ಲಿ 9 ಜನರಿಗೆ 24,656 ರೂ., ಬಳ್ಕೂರಿನಲ್ಲಿ 2,000ರೂ., ಅಂಪಾರಿನಲ್ಲಿ 2 ಜನರಿಗೆ 6,680 ರೂ.,ಅಲ್ನಾಡಿಯಲ್ಲಿ 4 ಜನರಿಗೆ 8,088 ರೂ., ಮೊಳಹಳ್ಳಿಯಲ್ಲಿ 2 ಸಾವಿರ ರೂ.,ಗುಲ್ವಾಡಿಯಲ್ಲಿ 2 ಸಾವಿರ ರೂ., ಕೆದೂರಿನಲ್ಲಿ 2,000ರೂ., ಆಜ್ರಿಯಲ್ಲಿ 2 ಸಾವಿರ ರೂ., ಹೊಸಾಡಿನಲ್ಲಿ 2 ಸಾವಿರ ರೂ. ಪರಿಹಾರ ವಿತರಿಸಲಾಗಿದೆ.

ಸ್ಥಳಾಂತರ
ಕೆಲ ದಿನಗಳ ಹಿಂದೆ ಭಾರೀ ಮಳೆ ಸುರಿದು ಮನೆಗಳು ಜಲಾವೃತವಾದಾಗ ಸಿದ್ದಾಪುರ, ಹಾಲಾಡಿ, ಕಾವ್ರಾಡಿ, ಗುಲ್ವಾಡಿ, ಸೌಕೂರು, ಚಿಕ್ಕಪೇಟೆ, ಕುಟ್ಟಟ್ಟಿ, ಹಳ್ನಾಡು, ಗಂಗೊಳ್ಳಿ, ಹಕ್ಲಾಡಿ, ಬೇಳೂರು, ದೇಲಟು ಭಾಗದ ಸಂತ್ರಸ್ತರು ತತ್‌ಕ್ಷಣ ಬರಲು ಒಪ್ಪದ ಕಾರಣ ಸಹಾಯಕ ಕಮಿಷನರ್‌ ಹಾಗೂ ಅಧಿಕಾರಿಗಳು ಮನವಿ ಮಾಡಿ ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಸೌಕೂರು ದೇವಸ್ಥಾನ, ತಲ್ಲೂರು, ಹಕ್ಲಾಡಿ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಸದ್ಯದ ವಾತಾವರಣದಂತೆ ಮಳೆ ತಿಳಿಯಾಗಿದೆ, ಸಹಜ ಸ್ಥಿತಿಗೆ ಬರುತ್ತಿದೆ.

ಟಾಪ್ ನ್ಯೂಸ್

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.